ಇವರ ಉದ್ದೇಶ ಏನು?

ಇವರ ಉದ್ದೇಶ ಏನು?

ಕೆಲವು ಆಂಗ್ಲ ಪತ್ರಿಕೆಗಳ ಸುದ್ಧಿಗಳನ್ನು ಗಮನಿಸಿದರೆ ಇವರಿಗೆ ಭಾರತದಲ್ಲಿ ವ್ಯವಹರಿಸಲು ಅವಕಾಶಕೊಟ್ಟವರ್ಯಾರು ಎಂಬ ಪ್ರಶ್ನೆ ಮೂಡುತ್ತದೆ.

ಅವರಿಗೆ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪರ್ಕ ರಸ್ತೆ ಎಲ್ಲಕ್ಕಿಂತ ಮುಖ್ಯ! ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದರೆ, ರಾಜ್ಯ ರಾಜಕೀಯದ ಪ್ರಮುಖ ಘಟನಾವಳಿಗಳು ನಡೆಯುತ್ತಿದ್ದರೆ, ಭ್ರಷ್ಟಾಚಾರ ನಡೆಯುತ್ತಿದ್ದರೆ ಅದರ ಕಡೆಗೆ ಜನರ ಗಮನಸೆಳೆಯುವುದು ಬಿಟ್ಟು ಎಲ್ಲೋ ಬೆಂಗಳೂರಿನ ೧% ಜನ ಉಪಯೋಗಿಸಬಹುದಾದ ಸಂಪರ್ಕ ರಸ್ತೆಯನ್ನೇ ಪ್ರಮುಖ ವಿಷಯವನ್ನಾಗಿ ಮಾಡಿಕೊಂಡಿದ್ದಾರೆ ಇವರು. ಮೋಜಿಗಾಗಿ ಕೆಲವರು ಕ್ರಿಕೆಟ್ ಆಡುತ್ತಿದ್ದರೆ ಯಾವೊನೋ ಇನ್ನೊಬ್ಬನಿಗೆ ಕಪಾಲಕ್ಕೆ ಹೊಡೆದರೆ ಅದು ರಾಷ್ಟ್ರೀಯ ವಿದ್ಯಮಾನ!! ಕ್ರಿಕೆಟ್ ಸಮಯದಲ್ಲಿ ತುಂಡುಡುಗೆ ನೃತ್ಯ ಬೇಡವೆಂದು ಕೆಲವರು ಆಗ್ರಹಿಸಿದರೆ ಇವರದು ಸಮರ್ಥನೆ. ತೀರ ಮುಂದುವರೆದ ದೇಶಗಳಾದ ಅಮೆರಿಕ, ಇಂಗ್ಲೆಂಡ್ ನ ದಿನ ಪತ್ರಿಕೆಗಳಲ್ಲೂ ಪ್ರಕಟವಾಗದಷ್ಟು ಅಶ್ಲೀಲ ಫೋಟೋಗಳು ಇಲ್ಲಿನ ದಿನ ಪತ್ರಿಕೆಗಳಲ್ಲಿ ನಿತ್ಯ ಎಂಬಂತೆ ಪ್ರಕಟವಾಗುತ್ತವೆ. ಬಾರ್, ಕ್ಲಬ್ಬುಗಳು ೧೧.೩೦ ಕ್ಕೆ ಮುಚ್ಚಲು ಆಗ್ರಹಿಸಿದರೆ ಅದು ದೇಶಕ್ಕೇ ಅವಮಾನ ಎಂಬಂತೆ ಚಿತ್ರಿಸುವುದು! ಬಾರ್, ಕ್ಲಬ್ಬುಗಳಲ್ಲಿ ಕಂಠ ಮಟ್ಟ ಕುಡಿದು ರಾತ್ರಿ ೧೨ ಕ್ಕೆ ಓಲಾಡಿಕೊಂಡು ಬಂದು ಮನೆ ಸೇರಿದರೆ ಅದು ನಾಗರೀಕ ಲಕ್ಷಣವೇ? ದೇಶದ ಸಮೃಧ್ದತೆಯ ಸಂಕೇತವೇ :-)

Rating
No votes yet

Comments