ಇವರ ಕೈಲಿ ಕರ್ನಾಟಕ ಉದ್ಧಾರ ಮಾಡೋಕೆ ಆಗುತ್ತಾ?

ಇವರ ಕೈಲಿ ಕರ್ನಾಟಕ ಉದ್ಧಾರ ಮಾಡೋಕೆ ಆಗುತ್ತಾ?

ಲೋಕಸಭೆ ಚುನಾವಣೆ ಭರಾಟೆಯಲ್ಲಿ ದಿನ ದಿನಕ್ಕೂ ಹೊಸ ಹೊಸ ಮಾಹಿತಿ ಸಿಕ್ಕುತ್ತಾ ಇದೆ. ಇವತ್ತಿನ ವಿಜಯ ಕರ್ನಾಟಕದಲ್ಲಿ ಜೆಡಿ(ಎಸ್) ಪಕ್ಷ ರಾಷ್ಟ್ರೀಯ ಪಕ್ಷಗಳು ಹೇಗೆ ಕರ್ನಾಟಕದ ಹಿತವನ್ನು ಕಡೆಗಣಿಸಿವೆ ಎನ್ನುವ ಒಂದು ಆರೋಪ ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಹೇಗೆಲ್ಲ ರಾಷ್ಟೀಯ ಪಕ್ಷಗಳು ತಮ್ಮ ಮಿತ್ರ ಪಕ್ಷಗಳ ಪಟ್ಟಿಗೆ ಮಣಿದು ಕರ್ನಾಟಕದ ಹಿತವನ್ನು ಕಡೆಗಣಿಸಿವೆ ಎಂಬುದನ್ನು ಜೆಡಿ(ಎಸ್) ಹೇಳಿಕೊಂಡಿದೆ.
Photobucket
Photobucket

ರಾಷ್ಟ್ರೀಯ ಪಕ್ಷಗಳ ಹಣೆ ಬರಹ ಹೀಗಾದ್ರೆ, ಮಾತಿಗೊಮ್ಮೆ ತನ್ನನ್ನು ತಾನು
ಕರ್ನಾಟಕ-ಕನ್ನಡಿಗರನ್ನು ಪ್ರತಿನಿಧಿಸುವ ಪ್ರಾದೇಶಿಕ ಪಕ್ಷ ಎಂದು ಕರೆದುಕೊಳ್ಳುವ
ಜೆಡಿ(ಎಸ್) ಎಂದಿಗಾದರೂ ಒಂದು ಪ್ರಾದೇಶಿಕ ಪಕ್ಷ ನಡೆದುಕೊಳ್ಳುವ ರೀತಿಯಲ್ಲಿ
ನಡೆದುಕೊಂಡಿದೆಯಾ?  ಮತ ಗಳಿಸಬೇಕು ಅಂತ ತಮಿಳರ ಮತ ನಮಗೆ ಕೊಡಿಸಿ ಅಂತ ಎಐಎಡಿಎಮ್ ಕೆ
ಪಕ್ಷದ ಜಯಲಲಿತಾಗೆ ದುಂಬಾಲು ಬೀಳೊದು, ವೋಟು ಸಿಗಲಿ ಅಂತ
ವಲಸಿಗರಿಂದ ತುಂಬಿರೋ ಕೊಳೆಗೇರಿಗಳನ್ನು ಸಕ್ರಮ ಮಾಡಿ ಅವರಿಗೆ ಹಕ್ಕುಪತ್ರ ನೀಡ್ತೀವಿ
ಅನ್ನೋದು, ದಿಲ್ಲೀಲಿ ಸಲ್ಲಲಾಗದ ಕಾರಣದಿಂದ ಇಲ್ಲಿ ಪ್ರಾದೇಶಿಕ ಪಕ್ಷ ಅನ್ನೋ
ದೊಂಬರಾಟಗಳನ್ನ ಆಡೋರು ಅದು ಹೇಗೆ ಪ್ರಾದೇಶಿಕ ಪಕ್ಷ ಆಗ್ತಾರೆ ? ತಮ್ಮನ್ನು ತಾವು
ಒಂದು ಸಮುದಾಯಕ್ಕೋ, ಜಾತಿಗೋ ಮಿತಿಗೊಳಿಸಿಕೊಂಡ್ರೆ. ಇಡೀ ಕನ್ನಡ ನಾಡಿಗೆ ನಾಯಕತ್ವ
ಕೊಡಲು ಆಗಲ್ಲ ಅನ್ನೋದನ್ನು ಅರ್ಥ ಮಾಡ್ಕೊಳ್ಳದೇ ಇರೋರು ಇಡೀ ಕನ್ನಡ ನಾಡಿನ ಹಿತ ಕಾಯೋ
ಪ್ರಾದೇಶಿಕ ಪಕ್ಷ ಕಟ್ಟೋಕೆ ಎಂದಿಗಾದ್ರೂ ಆದೀತಾ ? ಇವರ ಕೈಲಿ ಕರ್ನಾಟಕದ ಉದ್ಧಾರ ಯಾವತ್ತಿಗಾದ್ರೂ ಆಗುತ್ತಾ? ನೀವೇನ್ ಅಂತೀರಾ ಗೆಳೆಯರೇ?

Rating
No votes yet