ಇವ ಯಾರವ್ವಾ....

ಇವ ಯಾರವ್ವಾ....

    ಇವ ಯಾರವ್ವಾ.

           ಇವ ಯಾರೆಂದು ಕೇಳುವೆಯಾ ಅವ್ವಾ

                   ಮುಡಿಗೆ ಮಲ್ಲಿಗೆ ಮುಡಿಸಾವ,

                   ಹಣೆಗೆ ಬೊಟ್ಟು ಇಟ್ಟಾವ,

                  ಕೈಗೆ ಬಳೆ ತೊಡಿಸಾವ,

                 ಇವ ನನ್ನಾವ, ಇವನನ್ನಾವ!!

 ಮುತ್ತ ಕೊಟ್ಟಾವ,

ತುತ್ತಾ ಕೊಡಾವ,

ಮುದ್ದು ಮಾತಾಡುವ,

ಮುದ್ದು ಮೊಗದಾವ,

ಇವ ನನ್ನಾವ, ಇವನನ್ನಾವ!!

            ಆಶಾವಾದಿ ಇವ,

            ಆಸೆ ತುಂಬಾವ ಇವ,

            ಅರೆಗಳಿಗೆ ಬಿಟ್ಟಿರದವ,

            ನನ್ನಲ್ಲೆ ಬೆರೆತು ಹೋದಾವ,

            ಇವ ನನ್ನಾವ, ಇವ ನನ್ನಾವ!!

ತಾಳಿ ಕಟ್ಟಾವ,

ಬದುಕ ಕೊಟ್ಟಾವ,

ಜೊತೆಗೂಡಿ ಬರುವ,

ಇವ ನನ್ನಾವ, ಇವ ನನ್ನಾವ!!

ಈ ಕವನ 2000 ಫೆಬ್ರವರಿ 14ರಂದು ನಡೆದ ರಾಜ್ಯ ಮಟ್ಟದ ಪ್ರೇಮ ಕವಿಗೋಷ್ಠಿಗೆ ಆಯ್ಕೆ ಈಗಿದ್ದ ಕವನ.( "ಸಮ್ಮಿಲನ" ಕವನ ಸಂಕಲನ)

 

 

Rating
No votes yet

Comments