ಇಷ್ಟು ದೊರಕಿದರೆ ....
ಇರುವುದೇ ಮುಗಿತಾಯ ಮನದಾಸೆಗಳಿಗಿಲ್ಲಿ
ವರುಷ ಕಳೆದಿರಲೇನು ಸಾವಿರವೊ ಲಕ್ಷ ?
ನೆರವೇರಿರಲು ಒಮ್ಮೆ ಬಯಕೆಗಳ ಸಾಲೊಂದು
ಮರಳಿ ಹುಟ್ಟುವುವಲ್ಲ ಮಗದೊಂದು ಸಾಲು!
ಸಂಸ್ಕೃತ ಮೂಲ (ವಿಷ್ಣುಪುರಾಣ, ೪-೨-೧೧೬):
ಮನೋರಥಾನಾಂ ನ ಸಮಾಪ್ತಿರಸ್ತಿ
ವರ್ಷಾಯುತೇನಾಪಿ ತಥಾಬ್ದ ಲಕ್ಷೈಃ ||
ಪೂರ್ಣೇಷು ಪೂರ್ಣೇಷು ಮನೋರಥಾನಾಂ
ಉತ್ಪತ್ತಯಃ ಸಂತಿ ಪುನರ್ನವಾನಾಮ್ ||
-ಹಂಸಾನಂದಿ
ಕೊ: ಬಿನ್ನಹಕೆ ಬಾಯಿಲ್ಲವಯ್ಯ ಅನ್ನುವುದು ಪುರಂದರದಾಸರ, ಕಾಂಭೋಜಿ ರಾಗದಲ್ಲಿ ಹಾಡುವ ಒಂದು ಪ್ರಸಿದ್ಧ ರಚನೆ. ಅದರ ಕೊನೆಯ ಚರಣ "ಇಷ್ಟುದೊರಕಿದರೆ ಇನ್ನಷ್ಟು ಬೇಕೆಂಬಾಸೆ" ಅನ್ನುವ ಸಾಲು ಈ ಪದ್ಯದ ಹುರುಳಿಗೆ ಬಲು ಹತ್ತಿರವೆನ್ನಿಸಿ ಆ ತಲೆಬರಹ ಕೊಟ್ಟಿದ್ದೇನೆ.
ಕೊ.ಕೊ: ಮೂಲದಲ್ಲಿದ್ದ ಹತ್ತುಸಾವಿರ ವರ್ಷ (ಆಯುತ)ವನ್ನು ನಾನು ಕನ್ನಡದಲ್ಲಿ ಸಾವಿರವಾಗಿಸಿದ್ದೇನೆ. ಇದರಿಂದ ಅರ್ಥಕ್ಕೇನೂ ಹೆಚ್ಚಿನ ಕೊರತೆಯಾಗದೆಂದು ನನ್ನೆಣಿಕೆ.
Rating
Comments
ಉ: ಇಷ್ಟು ದೊರಕಿದರೆ ....
In reply to ಉ: ಇಷ್ಟು ದೊರಕಿದರೆ .... by venkatb83
ಉ: ಇಷ್ಟು ದೊರಕಿದರೆ ....