ಇಷ್ಟೊಂದು ಕನ್ನಡ ಬ್ಲಾಗುಗಳನ್ನು ದಿನಾಲೂ ಓದುವುದು ಹೇಗೆ? (ಗೂಗಲ್ ರೀಡರ್)
ನಾನೊಬ್ಬ ಡಾಕ್ಟರ್, ಐಟಿ ಅಲ್ಲ. ನನ್ನ ಗೆಳೆಯನೊಬ್ಬ ಕೇಳುತ್ತಿದ್ದ ಈ ಮೇಲಿನ ಪ್ರಶ್ನೆಗೆ ನಾನು ಬ್ಲಾಗಿಸಿದರೆ ಬೇರೆಯವರಿಗೂ ಉಪಯೋಗವಾದೀತು ಎಂದು ಬ್ಲಾಗಿಸುತ್ತಿದ್ದೇನೆ. ನನಗೆ ಗೊತ್ತು, ಬ್ಲಾಗಿಸುವವರಲ್ಲಿ ತುಂಬಾ ಜನ ಐಟಿಯವರೇ. ಅವರಿಗೇನೂ ಈ ವಿಷಯ ಹೊಸದಲ್ಲ. ನನ್ನ ಬ್ಲಾಗಿನಲ್ಲಿ ಕನ್ನಡ ಬ್ಲಾಗುಲೋಕ ಎಂಬ ಖಾನೆಯಲ್ಲಿ ಕನ್ನಡದ ನೂರಾರೊ ಬ್ಲಾಗುಗಳ ಕೊಂಡಿಯನ್ನು ಕೊಟ್ಟಿದ್ದೇನೆ. ನಿಮಗೆ ಇಷ್ಟವಾಗಿರುವ ಎಲ್ಲ ಬ್ಲಾಗುಗಳನ್ನು ದಿನಾಲೂ ಸರ್ಫ್ ಮಾಡುವುದು ಅಸಾಧ್ಯದ ಮಾತು. ವೆಬ್ ನ RSS feed ಬಳಸಿ ಗೂಗಲ್ ರೀಡರ್ ನಲ್ಲಿ ಬ್ಲಾಗಿನಲ್ಲಿ ಸೇರ್ಪಡೆಯಾದ ಎಲ್ಲ ಹೊಸ ಬರಹಗಳನ್ನು ಅರ್ಧ ಗಂಟೆಯಲ್ಲಿ ಓದಬಹುದು.
(ಸೂಚನೆ: ಕೆಳಗಿನ ಚಿತ್ರಗಳನ್ನು ದೊಡ್ಡದಾಗಿಸಲು ಚಿತ್ರದ ಮೇಲೆ ಕ್ಲಿಕ್ಕಿಸಿರಿ).
ಸ್ಟೆಪ್ ೧: http://www.google.com/ ನಲ್ಲಿ google reader ಅಂಥ ಸರ್ಚ್ ಮಾಡಿ. ಗೂಗಲ್ ರೀಡರ್ ಹೋಮ್ ಪೇಜ್ ಮೇಲೆ ಕ್ಲಿಕ್ಕಿಸಿ.
ಸ್ಟೆಪ್ ೨: GMail ಅಕೌಂಟ್ ಇದ್ದರೆ ನೊಂದಾಯಿಸುವುದು ಸುಲಭ, ಇಲ್ಲಾದ್ದಿದ್ದರೆ ಹೊಸ ಮೆಂಬರ್ ಆಗಿ.
ಸ್ಟೆಪ್ ೩: ಕೆಳಗಿನ ಚಿತ್ರ ಗೂಗಲ್ ರೀಡರ್ ನ ಸೈನ್-ಅಪ್ ಮಾಡಿದ ಪೇಜ್. ನಿಮ್ಮ ಇಷ್ಟದ ಬ್ಲಾಗನ್ನು ನಿಮ್ಮ ರೀಡರ್ ನಲ್ಲಿ ಹಾಕಲು, Add subscription ಮೇಲೆ ಕ್ಲಿಕ್ಕಿಸಿ.
ಸ್ಟೆಪ್ ೪: Add subscription ಖಾನೆಯಲ್ಲಿ ನಿಮ್ಮ ಇಷ್ಟದ ಬ್ಲಾಗಿನ ಅಡ್ರೆಸ್ಸನ್ನು (URL), ಅದರ ' http://' ಸಮೇತ ಟೈಪ್ ಮಾಡಿ add ಕೊಡಿ. ಹಾಗೇ ಎಷ್ಟು ಬ್ಲಾಗುಗಳನ್ನು ಬೇಕಾದರೂ ಹಾಕಿಕೊಳ್ಳಿ.
ಸ್ಟೆಪ್ ೫: ಪ್ರತಿದಿನ ನಿಮ್ಮ ಈ-ಮೇಲ್ ಚೆಕ್ ಮಾಡುವಂತೆ, ರೀಡರ್ ಅನ್ನೂ ಚೆಕ್ ಮಾಡಿದರೆ ಆಯಿತು. ನಿಮ್ಮ ಇಷ್ಟದ ಎಲ್ಲ ಬ್ಲಾಗುಗಳ ಹೊಸ ಬರಹಗಳನ್ನು ಆರಾಮಾಗಿ ಓದಬಹುದು. ಅಷ್ಟೇ ಅಲ್ಲ, ಆ ಬರಹಗಳಿಗೆ ಸ್ಟಾರ್ ಸೇರಿಸಬಹುದು, tag ಮಾಡಬಹುದು.
Comments
ಉ: ಇಷ್ಟೊಂದು ಕನ್ನಡ ಬ್ಲಾಗುಗಳನ್ನು ದಿನಾಲೂ ಓದುವುದು ಹೇಗೆ? (ಗೂಗಲ್ ರೀಡರ್)
In reply to ಉ: ಇಷ್ಟೊಂದು ಕನ್ನಡ ಬ್ಲಾಗುಗಳನ್ನು ದಿನಾಲೂ ಓದುವುದು ಹೇಗೆ? (ಗೂಗಲ್ ರೀಡರ್) by createam
ಉ: ಇಷ್ಟೊಂದು ಕನ್ನಡ ಬ್ಲಾಗುಗಳನ್ನು ದಿನಾಲೂ ಓದುವುದು ಹೇಗೆ? (ಗೂಗಲ್ ರೀಡರ್)
In reply to ಉ: ಇಷ್ಟೊಂದು ಕನ್ನಡ ಬ್ಲಾಗುಗಳನ್ನು ದಿನಾಲೂ ಓದುವುದು ಹೇಗೆ? (ಗೂಗಲ್ ರೀಡರ್) by keshav

In reply to ಉ: ಇಷ್ಟೊಂದು ಕನ್ನಡ ಬ್ಲಾಗುಗಳನ್ನು ದಿನಾಲೂ ಓದುವುದು ಹೇಗೆ? (ಗೂಗಲ್ ರೀಡರ್) by ಶ್ರೀನಿಧಿ
ಉ: ಇಷ್ಟೊಂದು ಕನ್ನಡ ಬ್ಲಾಗುಗಳನ್ನು ದಿನಾಲೂ ಓದುವುದು ಹೇಗೆ? (ಗೂಗಲ್ ರೀಡರ್)