ಈಗಷ್ಟೆ ನೋಡಿದ್ದು!

ಈಗಷ್ಟೆ ನೋಡಿದ್ದು!

ಏನೋ ಕೆಲಸದ ನಿಮಿತ್ತ ಆ ದಾರಿಯಲ್ಲಿ ನಡೆದು ಸಾಗುತ್ತಿದ್ದೆ. ದೂರದಲ್ಲಿ ಜನರಗುಂಪೊಂದು ಸೇರಿರುವುದು ನನ್ನ ಕಣ್ಣಿಗೆ ಬಿತ್ತು. ಅದರ ಹತ್ತಿರ ಸಾಗುತ್ತಿದ್ದಂತೆ "ಕನ್ನಡ ವಿರೋಧಿಗಳಿಗೆ ಧಿಕ್ಕಾರ,ಕನ್ನಡ ವಿರೋಧಿ ವರ್ತಕರಿಗೆ ಧಿಕ್ಕಾರ,ಕನ್ನಡ ವಿರೊಧಿ ಕಂಪನಿಗಳಿಗೆ ಧಿಕ್ಕಾರ" ಎನ್ನುತ್ತಿರುವುದು ಸ್ಪಷ್ಟವಾಗಿ ಕೇಳುತ್ತಿತ್ತು. ಆ ಗುಂಪು ಸೇರಿರುವುದು hutch ಆಫಿಸ್ ನ ಎದಿರು, ಅದರ ಬಾಗಿಲು ಮುಚ್ಹಿತ್ತು ಅನ್ನುವುದಕ್ಕಿಂತ ಮುಚ್ಹಿಸಿದ್ದರು ಎನ್ನಬಹುದು. ಇದು hutch ಅವರ ವಿರುದ್ಧ ಎಂಬುದು ಎಲ್ಲರಿಗೂ ಅರ್ಥವಾಗುತ್ತಿತ್ತು. ನಾನು'ಪವನಜ' ಅವರ 'ಹಚ್ ಅವರ ಹುಚ್ಹು ಬಿಡಿಸಿ' ಲೇಖನವನ್ನು ಸ್ವಲ್ಪ ಓದಿದ್ದರಿಂದ ತಲವಾರ್ ಅವರು ಕ್ಷಮೆ ಕೇಳಬೇಕೆಂದು ಹೇಳಿ ಸ್ಟ್ರೈಕ್ ಮಾಡುತ್ತಿರಬೇಕು ಅಂದುಕೊಂಡೆ. ಆದರೂ ಅಲ್ಲಿ ನೆರೆದವರು ಏನೆನ್ನಬಹುದು ಎಂಬುದನ್ನು ತಿಳಿಯಲು ಪಕ್ಕದಲ್ಲಿ ನಿಂತವರಲ್ಲಿ ಏನಕ್ಕಾಗಿ ಇಲ್ಲಿ ಸ್ಟ್ರ್ರೈಕ್ ನಡೀತಿದೆ ಅಂತ ಕೇಳಿದೆ. ಆಗ ಆತ "mam i dont know kannada" ಎಂದು ಕೊಂಕಿನ ಇಂಗ್ಲಿಷಿನಲ್ಲಿ ಹೇಳಿದ. ಇಲ್ಲಿ ಸೇರಿರುವವರಲ್ಲಿ, ಒಂದಿಷ್ಟು ಜನ ಧಿಕ್ಕರಿಸುತ್ತಿದ್ದವರ ಹೊರತಾಗಿ ಕನ್ನಡವರನ್ನು ಹುಡುಕುವುದೇ ಕಷ್ಟವಾಗಿತ್ತು. ಇದು ಕನ್ನಡನೆಲದಲ್ಲಿ ಕನ್ನಡವಿರೋಧಿ ನೀತಿಯ ವಿರುದ್ದ ವಿರೋಧಿಸುತ್ತಿದ್ದಲ್ಲಿ ನನಗೆ ಕಂಡ ದ್ರುಶ್ಯ . ಇದು ಕನ್ನಡನೆಲದಲ್ಲಿ ಕಾಣುವ ಕನ್ನಡದ ಸ್ಥಿತಿ. ವಿಪರ್ಯಾಸವೆಂದರೆ ಕನ್ನಡಿಗರೇ ನಾವು ಕನ್ನಡದವರೆಂದು ಹೇಳಿಕೊಳ್ಳಲು ಇಷ್ಟಪಡದಿರುವುದು. (ನನಗೆ ಈಗೂ ತಿಳಿದಿಲ್ಲ ತಲವಾರ್ ಅವರು ಏನೆಂದಿದ್ದಾರೆ ಎಂಬುದು... ಏಕೆಂದರೆ ಪವನಜ ಅವರ ಲೇಖನದ ಜೊತೆಗೆ attach ಮಾಡಿರೋ ಫೇಜ್ display ಆಗ್ತಾ ಇಲ್ಲಾ)
Rating
No votes yet

Comments