ಈಗ ಜಿ ಎನ್ ಯು / ಗ್ನೂ ಕನ್ನಡದಲ್ಲಿ
ಎಲ್ಲರಿಗೂ ಸ್ವಾತಂತ್ರೊತ್ಸವದ ಶುಭಾಶಯಗಳು,
ಮುಕ್ತ ತಂತ್ರಾಂಶ ಪ್ರತಿಷ್ಠಾನ (ಎಪ್ಸೆಪ್) ದ ಜಿ ಎನ್ ಯು (ಗ್ನೂ) ವೆಬ್ ಸೈಟನ್ನು ಕನ್ನಡಕ್ಕೆ ಅನುವಾದಿಸುವ ಕೆಲಸವನ್ನ ಶುರು ಮಾಡಿದ್ದೇನೆ. ಗ್ನೂ ಬಗ್ಗೆ ತಿಳಿಯಲಿಚ್ಚಿಸುವ ಎಲ್ಲ ಕನ್ನಡಗರು ಇದರ ಉಪಯೊಗ ಪಡೆದು ಕೊಳ್ಳಬಹುದು.
ಮುಕ್ತ ತಂತ್ರಾಂಶವನ್ನು ಬಹುದಿನಗಳಿಂದ ಉಪಯೊಗಿಸುತ್ತಿರುವ ನಾವು ನಮ್ಮ ಭಾಷೆಯಲ್ಲಿ ಗ್ನೂನ ವೆಬ್ ಸೈಟ್ ಏಕೆ ಅನುವಾದಿಸಿಲ್ಲ ಎಂಬ ಚಿಂತೆ ನನಗೆ ಈ ಕಾರ್ಯವನ್ನ ಶುರು ಮಾಡಲು ಪ್ರೇರೇಪಿಸಿದ ಅಂಶ.
ಮೂಲ ವೆಬ್ ಸೈಟ್ : http://www.gnu.org
ಅನುವಾದಗಳ ಪಟ್ಟಿಯಲ್ಲಿ "ಕನ್ನಡ" ಕ್ಲಿಕ್ಕಿಸಿ :
ಕನ್ನಡ ಪುಟ http://www.gnu.org/home.kn.html
ಇಲ್ಲಿ ಕೆಲ ತಪ್ಪುಗಳಿವೆ, ಹೊಸ ಪುಟವನ್ನು ಬಹು ಬೇಗ ಅಪ್ ಲೋಡ್ ಮಾಡಿ ತಿದ್ದುತ್ತೇನೆ, ತಪ್ಪುಗಳಿಗೆ ಕ್ಷಮಯಿರಲಿ.
ನಿಮಗೆ ಈ ಅನುವಾದದಲ್ಲಿ ನಿಮ್ಮನ್ನ ತೊಡಗಿಸಿ ಕೊಳ್ಳುವ ಆಸಕ್ತಿ ಇದ್ದರೆ ನನ್ನನ್ನು ಸಂಪರ್ಕಿಸಿ
ಈ-ಮೈಲ್ : omshivaprakash@sampada.net
ಧನ್ಯವಾದಗಳೊಂದಿಗೆ,
ಓಂ ಶಿವಪ್ರಕಾಶ್