ಈ ಅಂತರ...
ನಿನ್ನ ಮಾತಿನ ಮಾದುರ್ಯದ ಸವಿ
ಸವಿಯುವ ಮೊದಲೇ
ಸಜ್ಜಾಗಿ ನಿಂತಿರುವೆ
ನನ್ನಗಲಿ ದೂರವಾಗಲು...
ನಿನ್ನ ಸ್ಪರ್ಶದ ಹಿತ
ಮನದೊಳಗೆ
ಮಾಗುವ ಮೊದಲೇ
ಹೊರಟು ನಿಂತಿರುವೆ
ನನ್ನ ತೊರೆಯಲು..
ಗೊತ್ತು
ಅಲ್ಲಲ್ಲ
ನಂಬಿದ್ದೀನಿ...
ಮತ್ತೆ ನೀನು ವಾಪಸ್ಸಾಗುತ್ತೀಯ ಎಂದು
ಈಗ ಉಂಟಾಗಲಿರುವ ಅಂತರ
ತುಂಬಾ ದಿನ ಅಲ್ಲವೆಂದು...
ಆದರೂ ಹಿಂದಿನ ಅನುಭವ
ಮನದೊಳಗೆ ಕಟ್ಟುತ್ತಿದೆ
ಭಯದ ಬಂಗಲೆಯ..
ನನ್ನನ್ನು ದೂಡಲು ಯತ್ನಿಸುತ್ತಿದೆ
ಹಳೆಯ ನೋವಿನ ಒಡಲಿಗೆ
ಆದರು
ಅದನ್ನೆದುರಿಸಿ ನಿಂತಿರುವೆ
ನಿನ್ನ ಬರುವಿಕೆಗಾಗಿ...
ಖಂಡಿತ ಬರುವೆಯಲ್ಲಾ...
ನಿನ್ನ ಮಾತಿನ ಮಾದುರ್ಯದ ಸವಿ
ಸವಿಯುವ ಮೊದಲೇ
ಸಜ್ಜಾಗಿ ನಿಂತಿರುವೆ
ನನ್ನಗಲಿ ದೂರವಾಗಲು...
ನಿನ್ನ ಸ್ಪರ್ಶದ
ಹಿತ ಮನದೊಳಗೆ
ಮಾಗುವ ಮೊದಲೇ
ನನ್ನ ತೊರೆದು
ಹೊರಟು ನಿಂತಿರುವೆ ..
ಗೊತ್ತು
ಅಲ್ಲಲ್ಲ
ನಂಬಿದ್ದೀನಿ...
ಮತ್ತೆ ನೀನು
ವಾಪಸ್ಸಾಗುತ್ತೀಯ ಎಂದು
ಈಗ ಉಂಟಾಗಲಿರುವ
ಅಂತರ
ತುಂಬಾ ದಿನ ಅಲ್ಲವೆಂದು...
ಆದರೂ
ಹಿಂದಿನ ಅನುಭವ
ಈ "ಅಂತರ "
ಮನದೊಳಗೆ ಕಟ್ಟುತ್ತಿದೆ
ಭಯದ ಬಂಗಲೆಯ..
ನನ್ನನ್ನು ದೂಡಲು ಯತ್ನಿಸುತ್ತಿದೆ
ಹಳೆಯ ನೋವಿನ ಒಡಲಿಗೆ
ಆದರು ಅದನ್ನೆದುರಿಸಿ
ನಿಂತಿರುವೆ ನಿನ್ನ ಬರುವಿಕೆಗಾಗಿ...
ಖಂಡಿತ ಬರುವೆಯಲ್ಲಾ...
Rating
Comments
ಉ: ಈ ಅಂತರ...