ಈ ಕ್ಷಣ 'ಬಿ ಅಲರ್ಟ್'

ಈ ಕ್ಷಣ 'ಬಿ ಅಲರ್ಟ್'

ಜೀವನಾವಧಿ ಅಲ್ಪ, ಬಯಕೆಗಳು ಭೋಗ ವಸ್ತುಗಳು ಬಹಳ, ಯಾವನು ಇತರರಿಗಾಗಿ ಬದುಕುತ್ತಾನೋ ಅವನೇ ನಿಜವಾಗಿ ಬದುಕುತ್ತಾನೆ. ತಮಸ್ಸಿನಲ್ಲಿ ಅಂದರೆ ಬ್ರಮೆಯಲ್ಲಿ, ಆಲಸ್ಯದಲ್ಲಿ ಕಳೆವ ಸಮಯ ಸಾವಿಗೆ ಸಮ. ಅಹಂಕಾರ, ಅಲ್ಪತನ, ಸಿಟ್ಟು, ಲೋಭ, ಮೊಹಗಳು ನರಕವೇ ಹೊರತು ಮತ್ತೇನಲ್ಲ. ಪ್ರತಿ ಕ್ಷಣ, ಪ್ರತಿ ನಿಮಿಷ, ಜೀವನದಲ್ಲಿ ಎಚ್ಚರಿಕೆಯಿಂದ ಬದುಕುವವನೆ ಬದುಕುತ್ತಾನೆ. ನಾನು ತೂಕಡಿಸುತ್ತಿರ ಬಹುದಾದ ಈ ಕ್ಷಣ ಮತ್ತಾರಿಗೋ ಸಾಯಲು ಕೊನೆಯ ಕ್ಷಣವಾಗಿರ ಬಹುದು, ಅಪಘಾತದ ಮುಂಚಿನ ಕ್ಷಣವಾಗಿರ ಬಹುದು, ಪರೀಕ್ಷೆಯ ಕೊನೆಯ ಕ್ಷಣವಾಗಿರ ಬಹುದು. ಜೀವನ ಈ ಕ್ಷಣ ನಮ್ಮ ಬಳಿಯಿರಲು, ಕೊನೆಯ ಉಸಿರು ಉಳಿದಿರುವ ವರೆಗು ನಮಗೆ ಅಸಾಧ್ಯವಾದದ್ದು ಮತ್ತೊಂದಿಲ್ಲ.

ಮೂರನೆಯವರು ಏನೆಂದಾರು ಎಂದು ಬಾವಿಸುವುದು ಅಲ್ಪತನ, ತನಗೆ ಸಮಂಜಸವೆಂದು ಕಂಡದನ್ನು ತಕ್ಷಣ ಮಾಡುವುದೇ ಸರಿಯಾದ ನಿರ್ಧಾರ. ಒಬ್ಬ ವ್ಯಕ್ತಿಯ ಗಾಯನ ಮೆಚ್ಚುಗೆ ಆಗಿದೆ, ಹೆಳಬೇಕೆನಿಸಿದೆ ಮುಚ್ಚು ಮರೆಯಿಲ್ಲದೆ ಹೇಳು. ಯಾರಿಗೆ ಗೊತ್ತು ಆ ಗಾಯಕ ನಿನ್ನ ಜೀವನದಲ್ಲಿ ಪುನಃ ಸಿಗದೇ ಇರಬಹುದು. ನಿನ್ನ ಕ್ಷುಲ್ಲಕವಾದ ಕೋಪಕ್ಕೆ ಎಡೆಯಾದ ಆ ಯುವಕ ನೀನು ಕ್ಷಮೆ ಯಾಚಿಸುವ ಮೊದಲೇ ಇಹಲೋಕ ತ್ಯಜಿಸಬಹುದು. ಯಾರಿಗಾಗಿ ಜೀವನ ಹುಟ್ಟುವಾಗ ಒಬ್ಬಂಟಿ ಸಾಯುವಾಗ ಒಬ್ಬಂಟಿ, ನೋಡುಗರ ಹಾಸ್ಯದಿಂದ ಏನಾಗಬೇಕಿದೆ? ನಿನ್ನ ಹೃದಯಕ್ಕೆ ಕಾಣಿಸಿದ್ದು, ಬುದ್ದಿಗೆ ದೃಡಪಟ್ಟದ್ದು ಸರಿಯಾದ ಯಾವುದೇ ಕಾರ್ಯವನ್ನು ಮಾಡಲು ಹಿಂಜರಿಯಲೇ ಬಾರದು.

Rating
No votes yet