ಈ ಜೀವನ ಚಕ್ರದಲಿ ಆ ದೇವರ ಚದುರಂಗದಾಟದಲಿ
ಇಂದು ಅಪರೂಪಕ್ಕೆ ಘಂಟಸಾಲ ಅವರ ಹಾಡುಗಳನ್ನು ಕೇಳುತ್ತಿದ್ದಾಗ ಒಂದು ಹಾಡು ಬಹಳವಾಗಿ ಕಾಡಿತು. ಆ ಹಾಡು ತೆಲುಗಿನಲ್ಲಿದ್ದು ಅದರ ಸಾಹಿತ್ಯವನ್ನು ಕನ್ನಡಕ್ಕೆ ಯಥಾವತ್ತಾಗಿ ತರ್ಜುಮೆ ಮಾಡಿದ್ದೇನೆ. ತಾಯಿಯೊಬ್ಬಳು ಸತ್ತ ನಂತರದ ಸನ್ನಿವೇಶವನ್ನು ಅದ್ಭುತವಾಗಿ ಹೇಳಿದ್ದಾರೆ ಈ ಹಾಡಲ್ಲಿ.
ನವಮಾಸಗಳು ಹೊತ್ತೆ ನೀ ಮಕ್ಕಳನು
ಬದುಕೆಲ್ಲ ಹೊತ್ತೆ ನೀ ಭಾದೆಗಳನು
ಇಷ್ಟು ಹೊತ್ತ ನಿನ್ನ ಹೊರುವವರೇ ಇಲ್ಲದೆ ಹೊರಟಿರುವೆ ನೀ...
ಈ ಜೀವನ ಚಕ್ರದಲಿ ಆ ದೇವರ ಚದುರಂಗದಾಟದಲಿ
ಯಾರಿಗೆ ಯಾರು ಸ್ವಂತವು ಎಲ್ಲಿಯವರೆಗೆ ಈ ಬಂಧವು
ಗರ್ಭವ ಸೀಳಿಕೊಂಡು ಹುಟ್ಟಿದವರೊಬ್ಬರು
ಮಸಣಕೆ ನಿನ್ನ ಹೊತ್ತೊಯ್ಯುವವರೊಬ್ಬರು
ತಲೆಗೆ ಕೊಳ್ಳಿಯ ಇಡುವವರೊಬ್ಬರು
ನಂತರ ನಿನ್ನ ಸಂಗಡ ಬರುವವರ್ಯಾರು
ಮಮತೆಯೇ ಮಾನವನಿಗೆ ಬಂಧೀಖಾನೆ
ಭಯಬಿದ್ದು ಸಂಬಂಧವ ಹರಿದುಕೊಂಡು ಹೋದರೂ
ತಿಳಿಯದ ಪಾಶವೊಂದು ಹಿಂಬಾಲಿಸಿ ಋಣವ ತೀರಿಸಿಕೊ ಎನ್ನುತ್ತಿದೆ
ನಿನ್ನ ಭುಜವ ಬದಲಿಸಿಕೊ ಎನ್ನುತ್ತಿದೆ.
ತಾಳಿ ಕಟ್ಟಿದ ಗಂಡನು ಇಲ್ಲವೆಂದು ಅರಸಿ ಬಂದ ಮೃತ್ಯುವು ನಿಲ್ಲದು
ಕಟ್ಟಿಗೆಗಳು ನಿನ್ನನು ಸುಡದೆ ಬಿಡದು, ಕಣ್ಣೀರಿಗೆ ಚಿತೆ ಆರದು
ಈ ಬೆಂಕಿಯು ಆ ಹೃದಯವ ಸುಡದೆ ಇರದು....
ಈ ಜೀವನ ಚಕ್ರದಲಿ ಆ ದೇವರ ಚದುರಂಗದಾಟದಲಿ
ಯಾರಿಗೆ ಯಾರು ಸ್ವಂತವು ಎಲ್ಲಿಯವರೆಗೆ ಈ ಬಂಧವು
Rating
Comments
ಉ: ಈ ಜೀವನ ಚಕ್ರದಲಿ ಆ ದೇವರ ಚದುರಂಗದಾಟದಲಿ
In reply to ಉ: ಈ ಜೀವನ ಚಕ್ರದಲಿ ಆ ದೇವರ ಚದುರಂಗದಾಟದಲಿ by kavinagaraj
ಉ: ಈ ಜೀವನ ಚಕ್ರದಲಿ ಆ ದೇವರ ಚದುರಂಗದಾಟದಲಿ
ಉ: ಈ ಜೀವನ ಚಕ್ರದಲಿ ಆ ದೇವರ ಚದುರಂಗದಾಟದಲಿ
In reply to ಉ: ಈ ಜೀವನ ಚಕ್ರದಲಿ ಆ ದೇವರ ಚದುರಂಗದಾಟದಲಿ by ಭಾಗ್ವತ
ಉ: ಈ ಜೀವನ ಚಕ್ರದಲಿ ಆ ದೇವರ ಚದುರಂಗದಾಟದಲಿ