ಈ ವಾರ ಅಚ್ಚಾದ ಪುಸ್ತಕಗಳ ಓದು ನನ್ನದು !

ಈ ವಾರ ಅಚ್ಚಾದ ಪುಸ್ತಕಗಳ ಓದು ನನ್ನದು !

ಕಂಪ್ಯೂಟರ್ ಮತ್ತು ಇಂಟರ್ನೆಟ್ಟಿಂದ ದೂರ ಇರುವ ಕಾರಣ ಈ ವಾರ ನಾನು ಅಚ್ಚಾದ ಪುಸ್ತಕಗಳನ್ನು ಓದುತ್ತಿರುವೆ !
೧ ) ನಿರಂಜನ ಹೆಸರಿನ ಆಧ್ಯಾತ್ಮಿಕ ಕಾದಂಬರಿ . ಬಹಳ ಹಳೆಯದು . ದೇವೇಂದ್ರಕುಮಾರ ಹಕಾರಿ ಅವರದು . ೧೨-೧೩ ನೇ ಶತಮಾನದಲ್ಲಿ ಇದಿರಬಹುದಾದ ನಿಜಗುಣ ಶಿವಯೋಗಿಗಳ ಕುರಿತಾದ ಕಾದಂಬರಿ
ಓದದಿದ್ದರೆ ನಷ್ಟವೇನಿರಲಿಲ್ಲ ; ಆದರೆ ಬೀದಿಬದಿಯಲ್ಲಿ ಕೊಂಡ ಪುಸ್ತಕ ; ಎಸೆವ ಮೊದಲು ಕಣ್ಣಾಡಿಸಿದೆನು .

೨) ಪಿ.ವಿ.ಶಾಸ್ತ್ರಿ ಯವರ ಕಥಾಸಂಕಲನ - ೧೯೬೩ ರಲ್ಲಿನದು . ಇದೂ ರದ್ದಿ ಅಂಗಡಿಯಲ್ಲಿ ಕೊಂಡದ್ದು . ಪ್ರಾರಂಬಿಕ ಕಾಲದ ಕಾದಂಬರಿ . ಬಹುಶ: ಆ ಕಾರಣಕ್ಕೋ ಏನೋ ಸೀಮಿತ ಚೌಕಟ್ಟಿನ , ಹೆಚು ಧೈರ್ಯ ತೋರದ , ಬ್ರಾಹ್ಮಣ ಹಿನ್ನೆಲೆಯ ಕತೆಗಳು ಇದ್ದವು . ಇದನ್ನೂ ವಿಲೇವಾರಿ ಮಾಡಿದೆ . ಪ್ರಾರಂಭ ಕಾಲದ ಕತೆ/ಕಾದಂಬರಿಗಳು ಎಲ್ಲವೂ ಹೀಗೇ ಇದ್ದಾವು ಎಂಬ ನನ್ನ ನಂಬಿಕೆಯನ್ನು ಸುಳ್ಳು ಮಾಡಿದು ಮುಂದಿನ ಪುಸ್ತಕ ....

೩) ಕೆರೂರು ವಾಸುದೇವಾಚಾರ್ಯರ ’ಸಂಪೂರ್ಣ- ಕಥೆಗಳು ’ ಎಂಬ ಕಥಾ ಸಂಕಲನ . ಇಲ್ಲಿ ಐತಿಹಾಸಿಕ ತರಹದ , ಸಂಸ್ಕ್ರುತ ಮಯವಾದ ಬರಹಗಳಿದ್ದವು .. ಅಲ್ಲಲ್ಲಿ ಸಂಸ್ಕೃತವನ್ನೇ ಕೋಟ್ ಮಾಡಿದ್ದರು . ಆದರೂ ಎರಡು ಕತೆಗಳು ಅದ್ಭುತವಾಗಿದ್ದವು . ಪತಿಗಳ ಸ್ವಾತಂತ್ರ್ಯ ಹಾನಿಯು ಮತ್ತು ಪಂಡಿತ ಬೃಹತ್ಲಾಂಗೂಲವ್ಯಾಘ್ರ .. ಮೊದಲನೆಯದರಲ್ಲಿ ... ಎಷ್ಟು ಸ್ವಾತಂತ್ರ್ಯ / ದಾಸ್ಯ ಗಂಡದಿರಿಗೆ ಸರಿ ಎಂಬ ವಿವೇಚನೆ ಕತೆಯ ಮೂಲಕ ಇದೆ !!! ಇನ್ನೊಂದರಲ್ಲಿ ಹುಲಿಗಳ ಕಣ್ಣಲ್ಲಿ ಮನುಷ್ಯರ ಬದುಕು - ಪಂಡಿತ್ಯಪೂರ್ಣವಾಗಿಯೂ ಹಾಸ್ಯಮಯವಾಗಿಯೂ ಚಿತ್ರಿತವಾಗಿದೆ .

೪) ತೇಜಸ್ವಿ ಅವರಕಥಾ ಸಂಕಲನ - ಪಾಕಕ್ರಾಂತಿ ಮತ್ತು ಇತರ ಕತೆಗಳು - ಯಥಾಪ್ರಕಾರ ತೇಜಸ್ವಿ ಅವರ ಖುಷಿ ಕೊಡುವ ಶೈಲಿಯ ಕತೆಗಳು .

೫) ಈಗ ಇನ್ನೊಂದು ಕಥಾ ಸಂಕಲನ - ಜೋಗಿಯವರದು .. ಹೆಸರು ಆಮೇಲೆ ಹೇಳುತ್ತೇನೆ - ’ಜೋಗಿ ಕತೆಗಳು’ ಕತೆಯ ಮಟ್ಟದಲ್ಲಿ ಖುಷಿ ಕೊಡುತ್ತಿಲ್ಲ ..

೬) ಬಹಳಷ್ಟು ಸುದ್ದಿಮಾಡಿದ್ದ - ಮಾಯಾಲೋಕ - ೧ ಕೊಂಡಿರುವೆ. ಇದನ್ನೂ ಆರಂಭದ ಭಾಗ ಮಾತ್ರ ಓದಿರುವೆ ... ಮುಗಿದ ಮೇಲೆ ... ಮಾಯಾಲೋಕ ಕುರಿತು ಇಂಟರ್ನೆಟ್ಟಲ್ಲಿ ಯಾರ್ಯಾರು ಏನೇನು ಬರೆದಿದಾರೆ ಎಂಬುದನ್ನೂ ನೋಡಬೇಕಿದೆ .. ನಾನು ಓದಿದ ಭಾಗವಂತೂ ತೇಜಸ್ವಿಯವರ ಉಳಿದ ಕಥೆ-ಕಾದಂಬರಿಗಳಂತಿವೆ ....

ಸಿಗೋಣ ಮತ್ತೆ ... ಇನ್ನಷ್ಟು ಓದಿನ ನಂತರ - ಇನ್ನೊಂದು ವಾರದ ನಂತರ ...

Rating
No votes yet

Comments