ಈ ಹಾಡನ್ನು ಪೂರ್ಣ ಮಾಡಬಲ್ಲಿರಾ

ಈ ಹಾಡನ್ನು ಪೂರ್ಣ ಮಾಡಬಲ್ಲಿರಾ

ನಾನು ಶಾಲೆಯಲ್ಲಿದ್ದಾಗ ಒಮ್ಮೆ ಕಂಠೀರವ ಸ್ಟೇಡಿಯಮ್ನಲ್ಲಿ ಈ ಹಾಡನ್ನು ಹಾಡಿದ್ದೆವು
ಆ ಹಾಡಿನ ಕೊನೆಯ ೧ ಸಾಲು ನೆನಪಿಲ್ಲ
ಗೊತ್ತಿದ್ದರೆ ಪೂರ್ಣ ಮಾಡಿ

ಕನ್ನಡ ನಾಡಿನ ಮಂಗಳ ಚಂದಿರ ತುಂಬಿ ಬೆಳಗಿ ಬರಲಿ
ತುಂಬಿ ಬೆಳಗಿ ಬರಲಿ
ಹೊನ್ನಿನ ಬೀಡಿನ ಅಂಗಳದಲಿ ಬೆಳದಿಂಗಳು ಚಿರವಿರಲಿ
ತುಂಬಿ ಬೆಳಗಿ ಬರಲಿ

ಧಾರೆ ಧಾರೆ ಝರಿ ಧವಳ ಮಾಲೆ ಸಹ್ಯಾದ್ರಿ ಮೇರುಸಾಲು
ಗೇರು ಸೊಪ್ಪೆ ಜಲ ಜೀವ ಮಾಲೆ ಶ್ರೀ ಗಂಧದ ಮಲೆ ಜಾಲ
ಕಲೆಯ ಬೀಡ ಕರುನಾಡ ಸೊಬಗ ಹಸಿರೆಲೆಯ ಪರದೆ ತೆರೆವಾ
ಶಿಲಾಬಾಲೆಯರ ಶಿಲ್ಪ ವೈಭವ
ಬಾಹುಬಲಿಯು ಇರುವಾ (೨)

ಕನ್ನಡಾ ನಾಡಿನ

ದೇವ ಪಂಪ ರನ್ನಾಧ್ಯ ಕವಿಗಳ ಕಾವ್ಯ ಕಲ್ಪ ನಾಕ
ದಿವ್ಯ ತಾರೆಗಳ ಹಾಲು ಧಾರೆಯ ಚಿರಂಜೀವಿ ಲೋಕ
????????????
ದೇವಿಗಿರಲಿ ಭುವನೇಶ್ವರಿಗೈಸಿರಿ
ಅಮೃತ ಧಾರೆಯ ಜಳಕಾ

ಈ ಮೇಲಿನ ಸಾಲು ಮರೆತು ಹೋಗಿದೆ ತಿಳಿದವರು ಹೇಳಬೇಕು
ಹಾಗೆ ಇದನ್ನು ಬರೆದವರು ಯಾರು ಎಂಬುದು ತಿಳಿದಿದ್ದರೆ ಹೇಳಿ

ರೂಪ

Rating
No votes yet

Comments