'ಈ ಹೊತ್ತಿನ ತಲ್ಲಣ'

'ಈ ಹೊತ್ತಿನ ತಲ್ಲಣ'

ಮನದಲ್ಲಿ ವಿಚಾರ
ಮಂಥನ ನಡೆದಿರಲು
ಮೂಡಿದ ಜಗದ
ತಲ್ಲಣಗಳು,ಸವಾಲುಗಳು
ಸಾವಿರಾರು...

ಸಮಾಜದಲ್ಲಿ ಹೆಚ್ಚುತ್ತಿರೋ
ಭ್ರಷ್ಠಾಚಾರದ ಬಗ್ಗೆ
ಬರೆಯಲೇ, ಅಹಿಂಸೆಯ
ನಾಡು ಆತಂಕವಾದದ ಸುಳಿಗೆ
ಸಿಕ್ಕು ಭಯದ ನೆರಳಲ್ಲಿ
ಬದುಕು ದೂಡುತ್ತಿರುವ
ಜನರ ಬಗ್ಗೆ ಬರೆಯಲೇ,
ದಿನೇ ದಿನೇ ಹೆಚ್ಚುತ್ತಿರೋ
ಪ್ರದೂಷಣೆ,ದಿನೇ ದಿನೇ
ಕುಸೀತಿರೋ ಮಾನವ
ಮೌಲ್ಯಗಳ ಬಗ್ಗೆ ಬರೆಯಲೇ...

ಬದುಕ ಯಾಂತ್ರಿಕತೆ,
ಆತಂಕಕಾರೀ ಆಧುನಿಕ
ವಿಚಾರ ಧಾರೆಯ ನೆರಳಲ್ಲಿ
ಮಾಯವಾದ ಬಾಲ್ಯದ
ಮುಗ್ಧತೆ, ಕುಸಿದ ಸಾಮಾಜಿಕ
ಬದ್ಧತೆ, ಕಳಕಳಿ,ಹೆಚ್ಚುತ್ತಿರುವ
ಪಾಶವೀ ಪ್ರವೃತ್ತಿ, ಇದುವೇ
ಬದಲಾದ ಕೌಟುಂಬಿಕ ಮುಖ ಚಿತ್ರಣ....

ಮನದಲ್ಲಿ ಅಸಹಿಷ್ಣುತೆ
ಬಾಯಲ್ಲಿ 'ವಂದೇ ಮಾತರಂ'
ಉಚ್ಛಾರಣೆ; ದೇಶೋದ್ಧಾರದ
ಘೋಷಣೆ,ರಕ್ಷಣೆಯ
ಹೆಸರಲ್ಲಿ ಭಕ್ಷಣೆ, ಶೋಷಣೆ
ಬದಲಾದ ರಾಜನೀತಿಯ
ಪರಿಭಾಷೆಯಿದುವೇ.....

ಲಕ್ಷ ಲಕ್ಷ ಜನರ ಆಸ್ತಿಪಾಸ್ತಿ,
ಪ್ರಾಣದಾಹುತಿಯನ್ನಿತ್ತು
ಪಡೆದ ಸ್ವತಂತ್ರ ದೇಶವೀಗ
ರಕ್ತಪಿಪಾಸುಗಳ ಕೈಯಲ್ಲಿ...
ಮುಷ್ಕರ, ಧರಣಿಗಳು
ಅಗ್ಗದ ವಸ್ತುಗಳಾಗಿವೆ..

ಗಾಂಧಿಜೀ ಕಂಡ ರಾಮ
ರಾಜ್ಯದ ಕನಸು ಕನಸಾಗೇ
ಉಳಿಯುವ ಎಲ್ಲಾ
ಲಕ್ಷಣಗಳು ಮನೆ ಮಾಡಿವೆ....

Rating
No votes yet