ಉತ್ತರಕುಮಾರಚರಿತೆ
ಉತ್ತರಕುಮಾರರು ಉತ್ತರಕ್ರಿಯೆಯಲ್ಲಿ ತೊಡಗಿದ್ದರು. ಅದೆಷ್ಟು ಸರಾಗ ಬರವಣಿಗೆ. ಅದೆಂತ ಗಂಭೀರ ಮುಖಭಾವ. ಅವರ ಮುಖದಲ್ಲಿ ‘ನಾನು ತಿಳಿದಿದ್ದೇನೆ’ ಎಂಬ ಜಂಬ ಇಲ್ಲ. ತಿಳಿದಿದ್ದನ್ನು ತಿಳಿದ ಹಾಗೆಯೇ ಉತ್ತರಿಸುವ ಅವರ ಕ್ರಿಯೆಯನ್ನು ನೋಡುವುದೇ ಒಂದು ಭಾಗ್ಯ. ಪ್ರಶ್ನೆಪತ್ರಿಕೆಯಲ್ಲಿ ಎಂತಹದೇ ಕಠಿನ ಪ್ರಶ್ನೆ ಕೇಳಿರಲಿ. ಇವರಿಗೆ ಅದು ಸುಲಭ. ನನಗಂತೂ ’ನಾನು ಚೆನ್ನಾಗಿಯೇ ಪಾಠ ಮಾಡಿದ್ದೇನೆ , ಹಾಗಾಗಿಯೇ ಉತ್ತರಕ್ರಿಯೆ ನಿರಾತಂಕವಾಗಿ ಸಾಗುತ್ತಿದೆ’ ಎಂಬ ಒಣ ಜಂಭ. ಪರೀಕ್ಷೆ ಮುಗಿದು ಉತ್ತರಪತ್ರಿಕೆಗಳನ್ನು ಮನೆಗೆ ತಂದು ಮೌಲ್ಯಮಾಪನಕ್ಕೆ ಕುಳಿತಾಗಲೇ ತಿಳಿಯುವುದು. ಉತ್ತರಕುಮಾರರು ನಿಜವಾಗಿಯೂ ಉಪನ್ಯಾಸಕರ ಉತ್ತರಕ್ರಿಯೆಯನ್ನೇ ಮಾಡಿರುತ್ತಾರೆ ಎಂದು. ಭಲೇ ಉತ್ತರಕುಮಾರ..........ಮೆಚ್ಚಿದೆ ನಿನ್ನ ಉತ್ತರಕ್ಕೆ...
೧. ನೀವು ಭೇಟಿ ಮಾಡಿದ ನ್ಯಾಯಬೆಲೆ ಅಂಗಡಿಯ ಕಾರ್ಯವಿಧಾನದ ಬಗ್ಗೆ ವರದಿ ತಯಾರಿಸಿ.
ಉತ್ತರ: ನಾನು ನಮ್ಮ ಊರಿನ ನ್ಯಾಯಬೆಲೆ ಅಂಗಡಿಗೆ ಅಪ್ಪನ ಜೊತೆಗೆ ಹೋಗಿದ್ದೆ. "ಇಂದು ಭಾನುವಾರ ರಜೆ" ಎಂದು ಸೂಚನಾಫಲಕದಲ್ಲಿ ಹಾಕಿದ್ದರು. ಹಿಂತಿರುಗಿ ಮನೆಗೆ ಬಂದೆವು ಇದು ನನ್ನ ವರದಿ.
೨. ನಿಮ್ಮ ಊರಿನಲ್ಲಿ ಅಳವಡಿಸಿರುವ ಮಳೆಕೊಯ್ಲು ವಿಧಾನಗಳ ಬಗ್ಗೆ ವರದಿ ತಯಾರಿಸಿ.
ಉತ್ತರ: ನಮ್ಮದು ಮಲೆನಾಡು. ಮಳೆಕೊಯ್ಲಿನ ಅಗತ್ಯವಿಲ್ಲ. ಶರಾವತಿ ಹಿನ್ನೀರೇ ದೊಡ್ಡದಾದ ಇಂಗುಗುಂಡಿ. ಇದಕ್ಕಿಂತ ಬೇರೆ ಇಂಗುಗುಂಡಿಯ ಅಗತ್ಯವಿದೆಯೇ? ನೀವೇ ಹೇಳಿ? (ನನಗೆ ಹೊಳೆಯದೇ ಇರದ ನಿಜಾಂಶವನ್ನು ವಿದ್ಯಾರ್ಥಿ ನನಗೆ ತಿಳಿಸಿದ್ದ.)
೩. ಸಂಪರ್ಕಸಾಧನಗಳ ಯಾವುದಾದರೂ ನಾಲ್ಕು ಉಪಯೋಗಗಳನ್ನು ತಿಳಿಸಿರಿ.
ಉತ್ತರ: ಮೊದಲು ನೀವು ನಿಮ್ಮ ೧೧೦೦ ನೋಕಿಯಾ ಸೆಟ್ ನ್ನು ಗಣಪತಿಕೆರೆಗೆ ಎಸೆಯಿರಿ. ಅದರ ಉಪಯೋಗ ಕಡಿಮೆ. ನನ್ನ ಹತ್ರ ತ್ರೀಜಿ ಫೋನ್ ಇದೆ. ನೀವು ಪಾಠ ಮಾಡುವಾಗ ರಿಕಾರ್ಡ್ ಮಾಡಿದ್ದೇನೆ. ನಿಮ್ಮ ಪೋಟೋ ತೆಗೆದಿದ್ದೇನೆ. ನಮ್ಮ ತರಗತಿಯ ಎಲ್ಲರ ಫೋಟೋ ಇದರಲ್ಲಿದೆ. ಕೂಡಲೇ ಒಳ್ಳೆಯ ಫೋನ್ ತೆಗೆದುಕೊಳ್ಳಿ. ಉಪಯೋಗಗಳೆಲ್ಲ ನಿಧಾನವಾಗಿ ತಿಳಿಯುತ್ತೆ.
ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಾರೆಂಬ ಸಾಮಾನ್ಯ ನಂಬಿಕೆ ತಪ್ಪೇ ಇರಬೇಕು. ವಿದ್ಯಾರ್ಥಿಗಳ ವಿಭಿನ್ನ ಉತ್ತರಗಳಿಂದ ಉಪನ್ಯಾಸಕ ಕಲಿಯುತ್ತಾ ಬೆಳೆಯುತ್ತಾನೆ.
Rating
Comments
ಉ: ಉತ್ತರಕುಮಾರಚರಿತೆ:ಗುರುವನ್ನೇ ಮೀರಿಸಿದ...???
In reply to ಉ: ಉತ್ತರಕುಮಾರಚರಿತೆ:ಗುರುವನ್ನೇ ಮೀರಿಸಿದ...??? by venkatb83
ಉ: ಉತ್ತರಕುಮಾರಚರಿತೆ:ಗುರುವನ್ನೇ ಮೀರಿಸಿದ...???
In reply to ಉ: ಉತ್ತರಕುಮಾರಚರಿತೆ:ಗುರುವನ್ನೇ ಮೀರಿಸಿದ...??? by nanjunda
ಉ: ಉತ್ತರಕುಮಾರಚರಿತೆ: