ಉತ್ತರ ಕರ್ನಾಟಕದಲ್ಲಿ ಕನ್ನಡ-೪
....ಇದಕ್ಕೆ ಕಾರಣಗಳನ್ನು ಶ್ರೀ ದ. ರಾ. ಬೇಂದ್ರೆಯವರು ಹೀಗೆ ಕೊಡುತ್ತಾರೆ .
"ಎಷ್ಟೋ ದಿವಸಗಳಿಂದ ರಾಜಾಶ್ರಯವನ್ನು ಕಳೆದುಕೊಂಡು ತೊಳಲುತ್ತಿರುವ ಕರ್ನಾಟಕವು ಇಂಗ್ಲೀಷರ ಆಳ್ವಿಕೆಯಲ್ಲಿ ಭಿನ್ನಭಿನ್ನವಾಗಿರುವದು ಮೊದಲನೆಯದು. ಪೇಶ್ವೆಯರ ಆಳ್ವಿಕೆ ತೀರಿದ ಮೇಲೆ ಆರೇ ಅಮಲದಾರರ ಆಳ್ವಿಕೆಯು ಎರಡನೆಯದು.ರಾಜಾಶ್ರಯ ದೊರೆತ ಮೈಸೂರ ಕನ್ನಡವು ಯಾವುದೋ ಕಾರಣದಿಂದ ನಮ್ಮ ಕೂಡ ಬಳಕೆ ಮಾಡದೇ ಇದ್ದದ್ದು ಮೂರನೆಯ ಕಾರಣ. ಕಾಲಪ್ರತಿಕೂಲತೆಯು ನಾಲ್ಕನೇ ಕಾರಣ. ಮೊದಲನೆಯ ತರಗತಿಯ ಕರ್ತೃತ್ವಶಾಲಿಗಳು ಹುಟ್ಟದಿದ್ದುದು ಐದನೇಯ ಕಾರಣ".
ಇಂದಿನ ಕನ್ನಡಗಂಡುಮೆಟ್ಟಿನ ಸ್ಥಳವಾದ ಹುಬ್ಬಳ್ಳಿ-ಧಾರವಾಡದಲ್ಲಿ ಮೊಟ್ಟಮೊದಲು ಪ್ರಾರಂಭವಾದ ಶಾಲೆ ಮರಾಠಿ ಭಾಷೆಯದು. ೧೮೨೬ ರಲ್ಲಿ ಒಂದೊಂದು ಮರಾಠಿ ಶಾಲೆಗಳು ಹುಬ್ಬಳ್ಳಿ-ಧಾರವಾಡಗಳಲ್ಲಿ ಪ್ರಾರಂಭವಾದವು . ಇದಾದ ಒಂಬತ್ತು ವರುಷಗಳ ನಂತರ ೧೮೩೫ ರಲ್ಲಿ ಒಂದೊಂದು ಕನ್ನಡ ಶಾಲೆಗಳು ಹುಬ್ಬಳ್ಳಿ-ಧಾರವಾಡಗಳಲ್ಲಿ ಆರಂಭವಾದವು .
ಧಾರವಾಡದಲ್ಲಿ ೧೮೫೪ರಲ್ಲಿ ಪ್ರಾರಂಭವಾದ ನೇಟಿವ್ ಜನರಲ್ ಲೈಬ್ರರಿಯಲ್ಲಿ ೪೫೧ ಪುಸ್ತಕಗಳಿದ್ದವು. ಅದರಲ್ಲಿ ೪೧೪ ಇಂಗ್ಲೀಷು , ೩೦ ಮರಾಠಿ , ೭ ಕನ್ನಡ .
೧೮೮೪ ರ ಸುಮಾರಿಗೆ ಧಾರವಾಡದಲ್ಲಿ ೩ ಪತ್ರಿಕೆಗಳು ಹೊರಡುತ್ತಿದ್ದವು. ಧಾರವಾಡ ವೃತ್ತವು ಮರಾಠಿ .ಅದಕ್ಕೆ ೪೫೦ ಚಂದಾದಾರರು . ಚಂದ್ರೋದಯ ವು ಕನ್ನಡ . ಅದಕ್ಕೆ ೧೫೦ ಚಂದಾದಾರರು .
೧೮೮೪ರ ಮುಂಬೈ ಪ್ರಾಂತದ ಸರಕಾರೀ ಗೆಝೆಟ್ಟಿನಲ್ಲಿ ಹೀಗೆ ಬರೆದಿದೆ .
"Except Brahmans who read Marathi prints , no class of the kanarese population has shown any taste for newspaper reading "
Comments
ಉ: ಉತ್ತರ ಕರ್ನಾಟಕದಲ್ಲಿ ಕನ್ನಡ-೪