ಉದಯ ಸೂರ್ಯ ನನಗೆ ನನ್ನಮ್ಮನಂತೆ!

ಉದಯ ಸೂರ್ಯ ನನಗೆ ನನ್ನಮ್ಮನಂತೆ!

ಉದಯ ಸೂರ್ಯ ನನಗೆ ನನ್ನಮ್ಮನಂತೆ!

ಛಳಿಯಿಂದ ಬಿಸಿಲಿನೆಡೆಗೆ ನಿಧಾನವಾಗಿ ಸಾಗಿಸುತ್ತಾ,
ಕತ್ತಲೆಯಿಂದ ಬೆಳಕಿನೆಡೆಗೆ ಕೈಹಿಡಿದು ನಡೆಸುವನಂತೆ

ಒಂದೊಂದೇ ಮೆಟ್ಟಿಲನು ನಿಧಾನದಿ ಮೇಲೇರಿಸುತ್ತಾ
ಸಾಗುವ ಉದಯ ಸೂರ್ಯನವನೆನಗೆ ನನ್ನಮ್ಮನಂತೆ

ಒಮ್ಮೆಗೇ ಬಡಿದೆಬ್ಬಿಸದೇ, ತಲೆಯ ಮೇಲೆ ಕೈಸವರುತ್ತಾ
ಮೈದಡವಿ ದಿನಾ ನಿದ್ದೆಯಿಂದ ಎಚ್ಚರಿಸುತ್ತಿದ್ದೆನ್ನಮ್ಮನಂತೆ

ಇರಬೇಕೆನ್ನುವರು ಜೀವನದಲಿ ಎಲ್ಲವೂ ನಿಧಾನದಿ ದಕ್ಕುತ್ತಾ
ಅತೀ ಹೆಚ್ಚು ಅತೀ ಶೀಘ್ರದಲಿ ದಕ್ಕಿದರದು ಉಳಿಯದಂತೆ

ಸೂರ್ಯನ ನಡೆಯೂ ಕೂಡ ಸಾರುವಂತಿಹುದು ವೇದಾಂತ
ಎಷ್ಟೇ ದಕ್ಕಿಸಿಕೊಂಡರೂ ಕತ್ತಲ ಶೂನ್ಯದತ್ತಲೇ ಪಯಣವಂತೆ
********


 

Rating
No votes yet

Comments