ಉದ್ಯಾನ ನಗರಿ ಮತ್ತು ಉದ್ದಾನೆ ಗರಿ
ಬೆಂಗಳೂರು- ಉದ್ಯಾನನಗರಿ
ಹಿಂದೆ ದೈತ್ಯಗಾತ್ರದ ಮರಗಳ ನಡುವೆ ಎಲ್ಲೋ ಒಂದೆರಡು ಕಟ್ಟಡಗಳು, ಮರಕ್ಕಿಂತಲೂ ಮೇಲೆ ತಲೆ ಎತ್ತಿ ಹೊರಜಗತ್ತನ್ನು ನೋಡುತ್ತಿದ್ದವು.
ಈಗ ದೈತ್ಯಕಟ್ಟಡಗಳ ನಡುವೆ ಅಳಿದುಳಿದ ಕೆಲ ಮರಗಳು ಬೊನ್ಸಾಯ್ನಂತೆ ಕಾಣಿಸುತ್ತಿವೆ. ಆ ಮರಗಳಿಗೆ ಇದಕ್ಕಿಂತ ಬೇರೆ ಅವಮಾನ ಬೇಕಾ?
ನಮ್ಮ ಮನೆಯ ಎದುರು ಒಂದು ತೆಂಗಿನಮರವಿತ್ತು. ಹೊರಗಿದ್ದರೂ ಮನೆಮಂದಿಯೊಲ್ಲೊಂದಾಗಿತ್ತು. ಕಾಗೆ,ಅಳಿಲು, ಬಾವಲಿಗಳು ವಾಸಿಸುತ್ತಿದ್ದವು. ಅದ್ಯಾವ ರಸಗೊಬ್ಬರ ಹಾಕಿದ್ದರೋ ಗೊತ್ತಿಲ್ಲ, ಸುತ್ತಲೂ ಮನೆಗಳು ತೆಂಗಿನಮರಕ್ಕಿಂತಲೂ ಎತ್ತರ ಬೆಳೆದವು.
ಮರದ ನೆರಳಲ್ಲಿ ಮಾರುತಿಯಿಂದ ಹಿಡಿದು ಕುಂಭಕರ್ಣನಂತಹ ಕಾರುಗಳು,ಬೈಕು,ಸ್ಕೂಟರ್,ಸೈಕಲ್ಗಳು ನಿಲ್ಲಲು ಸುರು.
ತೆಂಗಿನ ಮರಕ್ಕೆ ತನ್ನ ಉದ್ದಾನೆ ಗರಿಯನ್ನು ಬಿಡಿ ಹೂವನ್ನೂ ಉದುರಿಸಲೂ ಸ್ಥಳವಿಲ್ಲ.
ಮರದ ಕಷ್ಟ ನೋಡಲಾಗದೇ,ಎಲ್ಲರ ಸಲಹೆಯಂತೆ,ತೆಂಗಿನ ಮರಕ್ಕೆ ದಯಾಮರಣ
ನೀಡಲಾಯಿತು.
Rating