ಉಪಕಾರ....(?)

ಉಪಕಾರ....(?)

ಉಪಕಾರ.
ಸಂತಾ ಸಿಂಗ್ ಯಾವುದೋ ಸಭೆಯಲ್ಲಿ ಭಾಗವಹಿಸಿದ್ದ. ಮುಖ್ಯ ಅಥಿತಿಗಳು ತುಂಬಾ ಚೆನ್ನಾಗಿ 'ನಾವು ಬೇರೆಯವರಿಗೆ ಉಪಾಕಾರ ಮಾಡಲು ಹಿಂಜರಿಯಬಾರದು'ಎಂದು ಮನದಟ್ಟುವಂತೆ ವಿವರಿಸಿದರು.ಸಂತಾಸಿಂಗ್ ತಾನೂ ಆದಷ್ಟೂ ಉಪಕಾರಿ ಆಗಬೇಕೆಂದು ನಿರ್ಧರಿಸಿದ.ಬರುವಾಗ ದಾರಿಯಲ್ಲಿ ಮನೆಯೊಂದರ ಮುಂದೆ ಜನ ಗುಂಪಾಗಿ ನೆರೆದಿದ್ದರು.ಕುತೂಹಲದಿಂದ ನುಗ್ಗಿ ನೋಡಿದರೆ-ಮನೆ ಬೆಂಕಿ ಹತ್ತಿ ಉರಿಯುತ್ತಿದೆ.ಒಳಗೆ ಮೂರು ಜನರಿರುವುದನ್ನು ಕಂಡ ಸಂತಾ, ಹಿಂದೆ ಮುಂದೆ ಯೋಚಿಸದೆ ಜೋರಾಗಿ....
"ದಾರಿ ಬಿಡಿ... ದಾರಿ ಬಿಡಿ" ಎಂದು ಕೂಗುತ್ತಾ ಓಡಿದ. ಜನರೆಲ್ಲಾ ಬೇಡ...ಬೇಡ ಎಂದು ಕೂಗಿದರು. ಒಳಗಿದ್ದ ಮೂವರನ್ನು ಹೊರತರಲು ಪ್ರಯತ್ನ ಮಾಡಿದ. ಜನರಂತೂ ಜೋರಾಗಿ "ಬೇಡ" ಎಂದು ಕೂಗುತ್ತಲೇ ಇದ್ದರು....
ಸಂತಾ ಯಾವುದನ್ನೂ ಲೆಕ್ಕಿಸದೆ ತುಂಬಾ ಕಷ್ಟಪಟ್ಟು ಮೂವರನ್ನು ಸುರಕ್ಷಿತವಾಗಿ ಹೊರಕ್ಕೆಳೆದು ತಂದ. ಸುಸ್ತಾಗಿದ್ದ ಸಂತಾನನ್ನು ಜನರೆಲ್ಲಾ ಸೇರಿ ಹೋಡೆಯಲಾರಂಭಿಸಿದರು. ಸಂತಾಗೆ ತುಂಬಾ ಬೇಜಾರಾಯಿತು.
ದು:ಖದಿಂದಲೇ ಕೇಳಿದ-
ಯಾಕ್ರಿ? ಕಷ್ಟಪಟ್ಟು ನನ್ನ ಜೀವ ಒತ್ತೆ ಇಟ್ಟು ಅವರನ್ನು ಎಳೆದು ತಂದಿದ್ದಕ್ಕೆ ಈ ರೀತಿ ಮಾಡೋದಾ...? ಅವರೇನು ಕಳ್ಳರಾ...ಕೊಲೆಗಾರರಾ..? ಜನರೆಲ್ಲಾ ಕೂಗಿದರು..ಕಳ್ಳರೂ ಅಲ್ಲ,ಕೊಲೆಗಾರರೂ ಅಲ್ಲ...........
"ಬೆಂಕಿಯನ್ನು ನಂದಿಸಲು ಬಂದ ಅಗ್ನಿಶಾಮಕ ದಳದವರು........!!!!
ಸಂತಾ ಸಿಂಗ್ ಮೂರ್ಛೆ ಹೋದ................................":

: ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ

Rating
No votes yet