ಉಲ್ಟಾ - ಪಲ್ಟಾ
ರಾತ್ರಿ ನಿಧಾನವಾಗಿ ಮಲಗಿ ಅಡಿಗೆಮನೆಗೆ ಬಂದು ಕಾಫಿಯಲ್ಲಿ ಮುಖ ಉಜ್ಜಿ ಹಲ್ಲು ತೊಳೆದು ರಾತ್ರಿ ವಿಧಿಗಳನ್ನು ಮುಗಿಸಿ ನೀರು ತಿಂದು ತಿಂಡಿ ಕುಡಿದು ಆಚೆ ಹೋಗಿ ಹೊದ್ದಿಕೆಯನ್ನು ಹಾಕಿಕೊಂಡು ಬ್ಯಾಗನ್ನು ಕಾಲಿಗೆ ಏರಿಸಿ ಚಪ್ಪಲಿಯನ್ನು ತೆಗೆದುಕೊಂಡು ಮನೆಗೆ ಹೊರಟೆ
ಆಗಸದ ಮೇಲೆಲ್ಲಾ ಎತ್ತಿನ ಬಂಡಿಗಳದ್ದೆ ಸಿಕ್ಕಾಪಟ್ಟೆ ಟ್ರಾಫಿಕ್. ಸದ್ದುಗದ್ದಲವಿಲ್ಲದೆ ಹಾಯಾಗಿ ಸಾಗುತ್ತಿತ್ತು ನನ್ನ ಬಂಡಿ.
ಹಾಗಾಗಿ ನಿಧಾನವಾಗಿ ಮನೆಗೆ ಬಂದು, ನೆಲದ ಮೇಲೆ ಕುಳಿತು ಟಿ.ವಿ ಯನ್ನು ಆನ್ ಮಾಡಿದೆ. ಸಿಕ್ಕಾಪಟ್ಟೆ ಆರಾಮಿತ್ತು.
ಸಂಜೆಯ ವೇಳೆಗೆ ಶತ್ರುಗಳ ಜೊತೆ ಕೆಳಗೆ ಬಚ್ಚಲು ಮನೆಗೆ ಬಂದು ನೀರಿನ ಜೊತೆ ಹಣ್ಣನ್ನು ಅದ್ದಿಕೊಂಡು ತಿಂದು ಮತ್ತೆ ಟಿ.ವಿ.ಯ ಮುಂದೆ ಬಂದು ಕುಳಿತೆ..
ಶ್ರಮವೇ ಇರಲಿಲ್ಲ. ಮನೆ ತುಂಬಾ ಹೀಟರ್ ಆನ್ ಆಗಿತ್ತು.. ಸಿಕ್ಕಾಪಟ್ಟೆ ಸೆಕೆ ಇತ್ತು..
ಬೆಳಗಿನ ವೇಳೆ ಆಗುತ್ತಿದ್ದಂತೆ ನಿದ್ದೆ ಇನ್ನೂ ಮುಗಿದಿರಲಿಲ್ಲ.
ನಿದ್ದೆ ಮುಗಿಸಿ ಮನೆಯಿಂದ ಹೊರಟು ಆಫೀಸಿಗೆ ಬಂಡಿಯೇರಿ ಹೊರಟೆ...
ಯಥಾಪ್ರಕಾರ ಆಗಸವೆಲ್ಲ ಖಾಲಿ ಖಾಲಿ... ಅಷ್ಟರಲ್ಲಿ ನೆಲದಿಂದ ಹಾಲಿನ ಹನಿ ಬೀಳತೊಡಗಿತು..
ಎಷ್ಟು ನಿಧಾನವಾಗಿ ಆಗುತ್ತೋ ಅಷ್ಟು ನಿಧಾನವಾಗಿ ಬಂಡಿಯನ್ನು ನಡೆಸುತ್ತ ಆಫೀಸಿನ ಕಡೆ ಹೊರಟೆ..
ಆಫೀಸಿಗೆ ಬರುವಷ್ಟರಲ್ಲಿ ಹೊದ್ದಿಕೆ ಸಂಪೂರ್ಣ ಒಣಗಿತ್ತು...
ಆಫೀಸಿಗೆ ಬಂದು ಹೊದ್ದಿಕೆ ಮಡಚಿಟ್ಟು..ನೀರು ತಿಂದು ಬರುವಷ್ಟರಲ್ಲಿ ಬಿಸಿಲಾಗಿತ್ತು...
ಜಾಸ್ತಿ ಹೊತ್ತು ನೋಡೋಣ ಎಂದುಕೊಂಡು ಕಂಪ್ಯೂಟರ್ ಆಫ ಮಾಡಿದೆ...Mtv ಚಾನಲ್ ನಲ್ಲಿ ಭಕ್ತಿ ಗೀತೆಗಳು ಬರುತ್ತಿತ್ತು
ಆಫೀಸಿನ ಆಚೆ ಬಂದು ಶರ್ಟನ್ನು ಹೊದ್ದಿಕೊಂಡು ಎದ್ದುಬಿಟ್ಟೆ
Rating
Comments
ಉ: ಉಲ್ಟಾ - ಪಲ್ಟಾ
ಉ: ಉಲ್ಟಾ - ಪಲ್ಟಾ