ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೨

ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೨

ಪೀಠಿಕೆ.- ಸಾಧಾರಣವಾಗಿ ಪಿಠಿಕೆಯನ್ನು ಬರೆಯುವುದು ಆರಂಭದ ಸಂಚಿಕೆಯಲ್ಲಿ. ಆದರೆ ಈ ಹಿಂದಿನ ಕಂತಿಗೆ ಬಂದ ಪ್ರತಿಕ್ರಿಯೆಯನ್ನು ನೋಡಿ ಪೀಠಿಕೆ ಬರೆಯುತ್ತಿದ್ದೇನೆ.

ನಾನು ಪ್ರಸ್ತುತಪಡಿಸುತ್ತಿರುವುದು. ನನ್ನ ಅನುಭವಗಳನ್ನು.. ಊಟದವಿಷಯವು ಎಷ್ಟು ವೈವಿಧ್ಯಮಯವಾಗಿವೆ ಎಂಬುದನ್ನು ಎದಿರಿಗಿಡುತ್ತಿದ್ದೇನೆ. ಅದರಲ್ಲಿ ಮೇಲು ಕೀಳು ಸರಿ ತಪ್ಪುಗಳ ವಿಮರ್ಷೆ ಅವಶ್ಯವಲ್ಲ ಎಂಬುದು ನನ್ನ ಭಾವನೆ.

ಪ್ರಯಾವಾಣಿ ಪದಸಂಪದದಲ್ಲಿ. ಸ್ಪಷ್ಟ ಕನ್ನಡ ಉಚ್ಚಾರಣೆಯನ್ನು ಮಾಡದಿರುವ ಬಗ್ಗೆ ಓದುಗರು ಕೇಳಿದ ಪ್ರಶ್ನೆಗೆ ಡಾ. ಕೆ ವಿ ನಾರಾಯಣ ಹೀಗೆ ಉತ್ತರಿಸುತ್ತಾರೆ.;- ಅ ಕಾರ ಹ ಕ್ಕಾರ ಸ ಶ ಷ ಮುಂತಾದ ಸ್ವರಗಳನ್ನು ಸ್ಪಷ್ಟವಾಗಿ ಉಚ್ಚರಿಸುವವರು ಮೇಲು, ಇತರರು ಕೀಳು ಎಂದು ನಿರ್ಣಯಿಸಬಾರದು. ಕನ್ನಡದಲ್ಲೆ ಅವರು ಇವರೂ ಭಿನ್ನ ಸಂಪ್ರದಾಯದವರು, ಎಂದು ಭಾವಿಸಬೇಕು. ಎಂಬ ಸಲಹೆ ನೀಡುತ್ತಾರೆ. ಜಾತಿ, ಊಟ ಇತ್ತ್ಯಾದಿಗಳ ಕುರಿತೂ ಇದೇ ಸೂತ್ರ ಒಳ್ಳೆಯದು ಎಂದು ನಾನು ನಂಬುತ್ತೇನೆ.

  • ಬ್ರಾಹ್ಮಣರಲ್ಲಿ, ಊಟವಾದ ಮೆಲೆ ಎದ್ದು ಹೋಗಿ ಕೈಯನ್ನು ತೊಳೆದುಕೊಳ್ಳಲು ಒಂದು ಜಾಗವನ್ನು ಮಾಡಿರುತ್ತಾರೆ. ಆದರೆ ಬ್ರಾಹ್ಮಣೇತರರು ಇದನ್ನು ಅಗೌರವ ಎಂದು ಭಾವಿಸುತ್ತಾರೆ. ಸಾಮಾನ್ಯವಾಗೂ ಊಟಮಾಡಿದ ಗಂಗಾಳದಲ್ಲಿಯೇ ಕೈತೊಳೆಯುತ್ತಾರೆ. ಎಲೆ / ಪತ್ರಾವಳಿಗಳಲ್ಲಿ ಬಡಿಸಿದಾಗ ಹಾಗೆ ಕೈ ತೊಳೆಯುವುದು ಸಾಧ್ಯವಿಲ್ಲ. ಆಗ ಒಂದು ಬಕೆಟ್ / ಡಬರಿ ಇತ್ಯಾದಿಗಳನ್ನು ಪಂಕ್ತಿಯ ಮಧ್ಯದಲ್ಲಿ ತೆಗೆದುಕೊಂಡು ಬರುತ್ತಾರೆ. ಪ್ರತಿಯೊಬ್ಬರೂ ಅಲ್ಲಿಯೇ ಕೈತೊಳೆಯುತ್ತಾರೆ / ಪ್ರತಿಯೊಬ್ಬರಿಗೂ ಅಲ್ಲಿಯೇ ಕೈ ತೊಳೆಸುತ್ತಾರೆ.- ಇದು ಯಜಮಾನನ ಗೌರವದ ಪ್ರಶ್ಣೆ

  • ಹಬ್ಬದ ದಿನಗಳಲ್ಲಿ, ಉತ್ತರ ಕರ್ನಾಟಕದ ಬ್ರಾಹ್ನಣರ ಮನೆಯಲ್ಲಿ ಊಟವು ತೊಗರಿಬೇಳೆ ತೊವೆ ಹಾಗೂ ತುಪ್ಪದಿಂದ ಪ್ರಾರಂಭವಾಗುತ್ತದೆ. . (ಗೋಕರ್ಣ ಭಾಗದಲ್ಲೂ ಹೀಗೇ ಪ್ರಾರಂಭವಾಗುತ್ತದೆ.).ಆಮೆಲೆ ಒಂದುಅಥವಾ ಎರಡು ಮೂರುಸುತ್ತು ಅಮ್ಟಿ ಇತ್ಯಾದಿ. ಅಮೇಲೆ ರೊಟ್ಟಿ/ ಚಪಾತಿ/ ಕಜ್ಜಾಯಗಳು.. ಕೊನೆಯಲ್ಲಿ ಮಜ್ಜಿಗೆ/ಮೊಸರು. ದಕ್ಷಿಣ ಕರ್ನಾಟಕದಲ್ಲಿ ಬ್ರಾಹ್ಮಣರ ಊಟ ಪ್ರಾರಂಭವಾಗುವುದು ಕುಂಬಳಕಾಯಿಯ ಮಜ್ಜಿಗೆಹುಳಿ (ಕುಂಬಳಕಾಯಿ ಪಳದ್ಯ)ಯಿಂದ. ಕೆಲವು ಊರಿನಲ್ಲಿ ಮುಂದಿನ ಪದಾರ್ಥ ತಿಳಿಸಾರು. ಇನ್ನು ಕೆಲವರಲ್ಲಿ ಹುಳಿ. ಆಮೆಲೆ ಕಜ್ಜಾಯ. ಕೊನೆಯಲ್ಲಿ ಮಜ್ಜಿಗೆ/ಮೊಸರು ಹೇಗೆ ಊಟಮಾಡಬೇಕೆಂಬುದು ಗೊತ್ತಗುವುದಿಲ್ಲ. ಅದರೆ ಒಂದು ಗಾದೆಯಮಾತು ರಕ್ಷಣೆಗೆ ಬರುತ್ತದೆ. ಪಂಕ್ತಿ ನೋಡಿ ಉಣ್ಣು” (ಕೇರಿನೋಡಿ ಗೆಯ್ ಎಂಬುದು ಮರೆತು ಬಿಟ್ಟಿದ್ದೇನೆ!)

    ಉತ್ತರ ಹಾಗೂ ದಕ್ಷಿಣಕರ್ನಾಟಕದ ಬ್ರಾಹ್ಮಣೇತರರಲ್ಲಿ ಸಾಮಾನ್ಯವಾಗಿ ಊಟ ಪ್ರಾರಂಭವಾಗುವುದು. ಕಜ್ಜಾಯ ದಿಂದ ಒಂದಕ್ಕಿಂತ ಹೆಚ್ಚುಸಾರೆ ಎಲೆಯಲ್ಲಿ ಹೊಟ್ಟೆ ತುಂಬುವಷ್ಟು, ಕಜ್ಜಾಯವನ್ನು ಸುರಿದ ನಂತರ ಅನ್ನ ಹಾಗೂ ಸಾರಿನಲ್ಲಿ ಮುಕ್ತಾಯವಾಗುತ್ತದೆ. ಮಧ್ಯದಲ್ಲಿ ಒಂದು ಪಲ್ಯ ಇದ್ದರೆ ಹೆಚ್ಚು. ಅಲ್ಲಿ, ಕೊನೆಯಲ್ಲಿ ಮಜ್ಜಿಗೆಯನ್ನು ನಿರೀಕ್ಷಿಸಬಾರದು..

    • ನಾವು ಊಟಕ್ಕೆ ಹೋದದ್ದು ಬ್ರಾಹ್ಮಣರ ಮನೆಯೋ ? ಬ್ರಾಹ್ಮಣೇತರ ಮನೆಯೋ ಗೊತ್ತಿಲ್ಲದಿದ್ದರೆ ಊಟ ಮಾಡುವುದು ಕಷ್ಟ. ಜೊತೆಗೆ ಊಟಕ್ಕೆ ಕುಳಿತುಕೊಳ್ಳುವುದೂ ಕಷ್ಟ. ಊಟಕ್ಕೆ ಹಾಕಿಟ್ಟ ಮಣೆಯ ಮೇಲೆ ಕೂಡ್ರಬೇಕೋ ಮಣೆ ಎದುರಿಗೆ ಇಟ್ಟುಕೊಂಡು, ನೆಲದಮೇಲೆ ಕೂಡ್ರಬೇಕೋ ಗೊತ್ತಾಗುವುದಿಲ್ಲ. ಬ್ರಾಹ್ಮಣರ ಮನೆಯಲ್ಲಾದರೆ ಮಣೆಯ ಮೇಲೆಕುಳಿತು ಕೆಳಗಿಟ್ಟ ಬಟ್ಟಲಿನಲ್ಲು ಉಣಬೇಕು. ಬ್ರಾಹ್ಮಣೇತರ ಮನೆಯಲ್ಲಿ ಊಟದ ಬಟ್ಟಲನ್ನು ಮಣೆಯಮೇಲೆ ಇಟ್ಟು , ನಾವು ಕೆಳಗೆ ಕುಳುತು ಊಟಮಾಡಬೇಕು, ದಿನನಿತ್ಯದ ಊಟದಲ್ಲಿ ಬಟ್ಟಲನ್ನು ಮಣೆಯ ಮೇಲಿಟ್ಟುಕೊಳ್ಳುವುದಿಲ್ಲ. ಅದಕ್ಕಗಿ 'ಆಡ್ಡೋಣಗಿ ' ಯನ್ನು ಉಪಯೋಗಿಸುತ್ತಾರೆ. ಗೇಣಗಲದ ಬಳೆಗೆ ಗೇಣು ಎತ್ತರದ ಮೂರು ಕಾಲು ಇರುವ ಲೋಹದ ಸ್ಟ್ಯಾಂಡ್. (ಅಳತೆಯು ಅಂದಾಜಿನದು.) ಅನ್ನ ದೇವರನ್ನು ನೆಲಕ್ಕೆ ಇಟ್ಟು ಅವಮಾನಿಸುವುದುಂಟೇ? ಅದಕ್ಕೆ ಎತ್ತರದ ಸ್ಥಾನ.

     

  • ಇತರರಿಗೆ, ನಿತ್ಯದಲ್ಲಿ, ಬ್ರಾಹ್ಮಣರಂತೆ ಕುಳಿತೇ ಪದ್ದತೀಷೀರ್ ಊಟ ಮಾಡಬೇಕೆಂಬುದಿಲ್ಲ. ನಿಂತಾದರೂ ಸರಿ ತಿರುಗಾಡುತ್ತಾದರೂ ಸರಿ. ಹೀಗಾಗಿ ಹೊಲಕ್ಕೆ ಹೋಗುವಾಗಲೇ, ದಾರಿ ನಡೆಯುತ್ತಲೇ ಊಟ ಮಾಡುವ ಬಹಳ ಜನರು ಕಂಡುಬರುತ್ತಾರೆ. ಅವರೆಲ್ಲ ಬದುಕಲಿಕ್ಕಾಗಿ ಊಟ ಮಾಡುವವರು.

 

Rating
No votes yet