ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ 5

ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ 5

 

  • ಮೆಸ್ ಗಳಲ್ಲಿ ಹಲವು ಬಗೆಗಳಿರುತ್ತವೆ. ರೊಟ್ಟಿ ಅಥವಾ ಚಪಾತಿ ಲಿಮಿಟೆಡ್ ; ಅನ್ನ ಅನ್ ಲಿಮಿಟೆಡ್ .ಬೆಳಗಾವಿಯಲ್ಲೊಂದು ಮೆಸ್. ಆತನಲ್ಲಿ ಎಲ್ಲವೂ ಅನ್ ಲಿಮಿಟೆಡ್. ಅಲ್ಲಿ ಊಟವನ್ನು ಬಡಿಸುತ್ತಿರಲಿಲ್ಲ. ನಮಗೆ ಬೇಕಾದ್ದನ್ನು ಬೇಕಾದಷ್ಟನ್ನು ನಾವೇ ಬಡಿಸಿಕೊಳ್ಳಬೇಕು. ಚಪಾತಿ. / ಪೂರಿ, ಅನ್ನ ಪಲ್ಯ ಇತ್ಯಾದಿಗಳನ್ನು ಬಿಸಿಬಿಸಿಯಾಗಿ ನಮ್ಮ ಟೇಬಲ್ ವರೆಗೆ ಸರಬರಾಜು ಮಾಡುವುದಷ್ಟೇ ಮಾಲಿಕನ ಕೆಲಸ. ಉಳಿದದ್ದು ಗ್ರಾಹಕನಿಗೆ ಬಿಟ್ಟ ವಿಚಾರ,

    ಅಲ್ಲಿ ಊಟಕ್ಕೆ ಕೆಲ ಹಿಂದಿ ಭಾಷಿಕ ವಿದ್ಯಾರ್ಥಿಗಳು ಬರುತ್ತಿದ್ದರು. ಮೆಸ್ ನ ಪದ್ಧತಿಯಂತೇ ಅವರವರೇ ಬಡಿಸಿಕೊಳ್ಳುತ್ತಿದ್ದರು. ಅವರು ಬಲಗೈಯಲ್ಲೇ ಬಡಿಸಿಕೊಳ್ಳುತ್ತಿದ್ದರು. ಹಾಗಿ ಬಡಿಸಿಕೊಳ್ಳುವಾಗ ಬಡಿಸುವ ಸವಟುಗಳು ಹೊಲಸಾಗ ಬಾರದೆಂದು ಕೈಗಳನ್ನು ಅತಿಯಾಗಿ ಸ್ವಚ್ಚಗೊಳಿಸಿಕೊಳ್ಳಲು ಮರೆಯುತ್ತಿರಲಿಲ್ಲ.! ಬೆರಳುಗಳನ್ನು ಬಾಯಿಯಲ್ಲಿ ಚೀಪುವುದರ ಮೂಲಕ ಬೆರಳುಗಳನ್ನು ಸ್ವಚ್ಚಗೊಳಿಸಿಕೊತ್ತಿದ್ದರು!!

  • ಮೆಸ್ ಗಳು ಸಾಮಾನ್ಯವಾಗಿ ಶಾಕಾಹಾರದವೇ ಇರುತವೆ. ಮಾಂಸಾಹಾರಿ ಮೆಸ್ ಗಳ ಬಗ್ಗೆ ಗೊತ್ತಿಲ್ಲ.. ಅದರೆ ಬೆಳಗಾವಿಯ ಮೆಸ್ ಒಂದರಲ್ಲಿ ಶಾಕಾಹಾರದ ಊಟದ ಜೊತೆಗೆ ಹೆಚ್ಚಿಗೆ ಹಣ ಪಾವತಿಸುವುದರ ಮೂಲಕ ಕೆಲ ಮಾಂಸಾಹಾರದ ವ್ಯಂಜನವನ್ನು ಪಡೆಯಬಹುದು.

    ನೀವು ಜಗತ್ತನ್ನು ನೋಡಬೇಕಾದರೆ ಕಷ್ಟಪಡಬೇಕಿಲ್ಲ ಗುಲಬರ್ಗಾದಲ್ಲಿ ಡಿ ಸಿ ಆಫೀಸಿನ ಎದುರಿಗೆ ಇರುವ ಜಾಗಕ್ಕೆ ಜಗತ್ ಅನ್ನುತ್ತಾರೆ. ಅಲ್ಲೊಂದು ಮೆಸ್ ಇತ್ತು.(ಈಗ ಇದೆಯೋ ಗೊತ್ತಿಲ್ಲ.) ಅಲ್ಲಿ ಶಾಕಾಹಾರಿ ಊಟದ ಜೊತೆಗೆ ಮೊಟ್ಟೆ ಆಮ್ಲೇಟನ್ನು ಬೇಕಾದವರು ಹಣಪಾವತಿಸಿ ಪಡೆಯಬಹುದಿತ್ತು,. ಅದರ ಮಾಲಿಕನ ಹೆಸರು ಶಿಶುಪಾಲ. ಬೇರೆಲ್ಲೂ ಆ ಹೆಸರನ್ನು ಕೇಳಿಲ್ಲದಿದ್ದರಿಂದ ಎರಡುದಶಕಗಳ ನಂತರವೂ ನೆನಪಿದೆ.

  • ಮಡಿ, ಮೈಲಿಗೆ ಮುಸುರೆ ಇತ್ಯಾದಿಗಳು ಮನೆ ಮಠಗಳಲ್ಲಿ ಇರುತ್ತದೆ. . ಆದರೆ . ಹೋಟೇಲ್ ಗಳಲ್ಲಿ ಅಲ್ಲ.. ಆದರೆ ತಮಿಳುನಾಡಿನ ಹೋಟೇಲ್ ಗಳಲ್ಲೂ ಇದು ಇದೆ ಅಲ್ಲಿ ನೀವು ಯಾವ ಜಾತಿಯವರಾಗಿದ್ದರೂ ಊಟಮಾಡಿದ ಎಲೆಯನ್ನು ಹೋಟೆಲ್ ಕ್ಲೀನರ್ ತೆಗೆದು ಹೊರಗೆ ಒಗೆಯುತ್ತಾನೆ. ಆದರೆ ಟಿಫನ್ ಮಾಡಿದ ಎಲೆಯನ್ನು ಅವನು ಎತ್ತುವುದಿಲ್ಲ. ನೀವು ಯಾರೇ ಆಗಿದ್ದರೂ, ತಿಂಡಿತಿಂದ ನಿಮ್ಮ ಎಲೆಯನ್ನು ನೀವೇ ಎತ್ತಬೇಕು.

  • ಕರ್ನಾಟಕದಲ್ಲಿ ಪ್ಲೇಟ್ ಊಟಕ್ಕಿರುವ ಬೆಲೆಯಲ್ಲಿ ಕೇರಳದಲ್ಲಿ ಫುಲ್ ಊಟ ದೊರೆಯುತ್ತದೆ. ಆದರೆ ಕುಸುಗಲು ಅಕ್ಕಿ ಅನ್ನ. ಊಟ ಚೆನ್ನಾಗಿಯೇ ಇರುತ್ತದೆ.

  • ಅನ್ನ ಸಾರು ಪಾಯಸ ಇತ್ಯಾದಿಗಳನ್ನು ಬಡಿಸುತ್ತಿರುವಾಗ ಊಟಕ್ಕೆ ಕುಳಿತಾತೆ "ಬಿಡು" ಎಂದರೆ ಉತ್ತರ ಕರ್ನಾಟಕದಲ್ಲಿ ಬಡಿಸುವಾತ ಬಡಿಸುವುದನ್ನು ನಿಲ್ಲಿಸುತ್ತಾನೆ. ದಕ್ಷಿಣದಲ್ಲಾದರೆ ಬೆಡು ಎಂದರೆ ಇನ್ನಿಷ್ಟು ಬಡಿಸುತ್ತಾನೆ.

  • ಉತ್ತರಕನ್ನಡ ಜಿಲ್ಲೆ(ಕಾರವಾರ ಜಿಲ್ಲೆ)ಯಲ್ಲಿ ನಿಮಗೆ ಉಪ್ಪಿಟ್ಟನ್ನು ಬಟ್ಟಲಲ್ಲಿ ಕೊಡುತ್ತಾರೆ ಹಾಗೂ ಚಹವನ್ನು ತಟ್ಟೆಯಲಿ ಕೊಡುತ್ತಾರೆ. ಹೇಗೆ ಸೇವಿಸುವುದೆಂದು ಗಾಬರಿಪದುವ ಅವಶ್ಯಕತೆ ಇಲ್ಲ. ಅಲ್ಲಿ ತಟ್ಟೆ ಎಂದರೆ ಚಹಾಕುಡಿಯುವ ಬಟ್ಟಲು! ಬಟ್ಟಲು ಎಂದರೆ ಊಟದ ತಟ್ಟೆ!!

  • ಸಾಧಾರಣವಾಗಿ ತಿಂಡಿ ತಿಂದಾದ ಮೇಲೆ ಚಹಾ / ಕಾಫಿಯನ್ನು ಕೊಡುವುದು ವಾಡಿಕೆ. ಉತ್ತರ ಕನ್ನಡ ಜಿಲ್ಲೆಯವರಿಗ್ಗೆ ಚಹಾದ ಜೊತೆಗೇ ತಿಂಡಿ ಬೇಕು. ಗಟ್ಟಿಯಾದ ತಿಂಡಿಯನ್ನು ಗಂಟಲಿನಲ್ಲಿ ದಾಟಿಸಲು ತೆಳ್ಳನ ಚಹಾ ಬೇಕಿಲ್ಲ!.   ತೆಳ್ಳನ ಚಹಾವನ್ನು ಗಂಟಲಿನಲ್ಲಿ ದಾಟಿಸಲು ಅವರಿಗೆ ಘಟ್ಟಿಯಾದ ಅವಲಕ್ಕಿ ಇತ್ಯಾದಿಗಳು ಬೇಕೇ ಬೇಕು!! (ಸೆರೆ ಕುಡಿಯುವವರನ್ನು ಜ್ನಾಪಿಸಿಕೊಳ್ಳಿ).

  • ಉಪ್ಪಿಲ್ಲದೇ ಅಡುಗೆ ಇಲ್ಲ. ಇದು ಸಾಮಾನ್ಯ ನಿಯಮ. ಬ್ರಾಹ್ಮಣರು ಅನ್ನಕ್ಕೆ ಉಪ್ಪು ಹಾಕುವುದ್ಕಿಲ್ಲ. ಎಲ್ಲಾ ಜನಾಂಗದವರೂ ಜೋಳದ ರೊಟ್ಟಿಗೆ ಉಪ್ಪ್ಜು ಹಾಕುವುದಿಲ್ಲ. ಇತರೇ ಜನರು ಅನ್ನಕ್ಕೆ ಉಪ್ಪು ಹಾಕುತ್ತಾರೆ. ಹೀಗಾಗಿ ಬ್ರಾಹ್ಮಣರ ಮನೆ ಉಡುಪಿ ಹೋತೆಲ್.ಕಲ್ಯಾಣ ಮಂಟಪ ಇತ್ಯಾದಿಗಳಲ್ಲಿ ಊಟ ಸುರುಮಾಡುವುದಕ್ಕಿಂತ ಮುಂಚೆಯೇ ಅವರು ಅನ್ನಕ್ಕೆ ಉಪ್ಪನ್ನು ಕಲಸಿಕೊಳ್ಳುತ್ತಾರೆ.

  • ಧರ್ಮಕ್ಷೆತ್ರದ ಒಂದು ಬ್ರಾಹ್ಮಣರ ಮನೆಯಲ್ಲಿ ಬಾಡಿಗೆಗೆ ಇದ್ದೆವು. ಒಂದು ದಿನ ಮನೆಯ ಯಜಮಾನತಿಯು ಹೇಳಿದಳು. ನಾಳೆಯಿಂದ ಮೂರುದಿನ ನಮ್ಮ ಮನೆಗಳಲ್ಲಿ ಒಲೆಗಳನ್ನು ಹಚ್ಚುವುದಿಲ್ಲ. ಶಿವರಾತ್ರೆ ಉಪವಾಸ ಏಕಾದಶಿ ಉಪವಾಸ ಮುಂತಾದ ಏಕ ದಿನದ ಉಪವಾಸಗಳ ಬಗ್ಗೆ ಗೊತ್ತಿತ್ತು. ಎಡಬಿಡದೆ ಮೂರುದಿವದದ ಉಪವಾಸ ನನಗೆ ಹೊಸತು. ಆ ಬ್ರಾಹ್ಮಣರ ಮನೆಯ ಉಪವಾಸ ಎಂದರೆ ಆಚೇಮನೆ ಸುಬ್ಬಮ್ಮನ ಏಕಾದಶಿ ಉಪವಾಸ ಎಂಬುದು ಗೊತ್ತಿತ್ತು. . ಹೀಗಾಗಿ ಉಪವಾಸಕ್ಕೆ ಏನೇನು ಮಾಡುತ್ತೀರಿ ಎಂದು ಕುತೂಹಲದಿಂದ ಕೇಳಿದೆ. ಅವರ ಉತ್ತರ ಸರಳವಾಗಿತ್ತು. “ಹಾಗೇನೂ ಇಲ್ಲ. ಕಟ್ಟಿಗೆ ಒಲೆಯ ಬದಲು ಚುಮಣಿ ಎಣ್ಣೆ (ಸೀಮೇ ಎಣ್ಣೆ ) .ಸ್ಟೌ ನಲ್ಲಿ ಮೂರುದಿನ ಆಡಿಗೆ ಮಾಡಿಕೊಳ್ಳುತ್ತೇವೆ!!!!!!!!!!! (ಈಗಿನ ಹಾಗೆ ಆಗ ಎಲ್ ಪಿ ಗ್ಯಾಸ್ ಇರಲಿಲ್ಲ. ಎಲ್ಲರ ಮನೆಗಳಲ್ಲೂ ಕಟ್ಟಿಗೆ ಒಲೆಗಳು ಮಾತ್ರ ಇದ್ದವು)

  • ಒಂದೂರಿನ ಒಂದು ಮಠದ ಮಹಾಸ್ವಾಮಿಗಳು ಇಡೀ ಒಂದು ವರ್ಷ ಒಂದು ಕೊಠಡಿಯಲ್ಲಿ ಸ್ವಯಂ ಬಂಧನದಲ್ಲಿ ಧ್ಯಾನ ಉಪವಾಸಗಳನ್ನು ಪೂರೈಸಿ ಹೊರಬಂದಾಗ ಅವರನ್ನು ಸ್ವಾಗತಿಸಲು ಲಕ್ಷೋಪ ಲಕ್ಷ ಜನರು ಸೇರಿದ್ದರು. ಪತ್ರಿಕೆಯಲ್ಲಿ ಅವರ ಫೋಟೋ ಬಂದಿತ್ತು. ಗರಡಿಮನೆಯಿಂದ ಹೊರಬಂದ ಪೈಲ್ವಾನನಂತಿತ್ತು!!

  • ನನ್ನ ಪಕ್ಕದ ಕೊಠಡಿಯಲ್ಲಿ ಒಬ್ಬ ಶಿಕ್ಷಕರು ವಾಸವಾಗಿದ್ದರು. ನೀರಿಗಿಂತ ಹೆಚ್ಚು ಬೇರೆಯದನ್ನೇ ಕುಡಿಯುತ್ತಿದ್ದರು. ಬೀಡಿ ಸಿಗರೇಟನ್ನು ಬಿಟ್ಟು ಬೇರೆಯದನ್ನೇ ಸೇದುತ್ತಿದ್ದರು. ಗಡ್ಡ ಬಿಟ್ಟಿದ್ದರು. ಇಡೀ ಶ್ರಾವಣ ಮಾಸದಲ್ಲಿ ಉಪವಾಸ ಆಚರಿಸುತ್ತಿದ್ದರು.(ಬೇರೆಯದಕ್ಕೆ ಲಗಾಮು ಇರಲಿಲ್ಲ!)ಅವರು ತಾವು ಬೇವಿನ ರಸವನ್ನು ಕುಡಿದು ಉಪವಾಸ ಮಾಡುತ್ತಿರುವುದಾಗಿ ಹೇಳುತ್ತಿದ್ದರು. ಹೊಟ್ಟೆಗೆ ಸಾಬೂದಾನಿ(ಸೀಮೇ ಅಕ್ಕಿ)ಯನ್ನು ನಿತ್ಯ ಸೇವಿಸುತ್ತಿದ್ದರೂ ಅದು ಉಪವಾಸ ಎಂದೇ ಅನ್ನಿಸಿಕೊಳ್ಳುತ್ತಿತ್ತು.. (ಅವರು ಬ್ರಾಹ್ಮಣೇತರರಾಗಿದ್ದರು)

  • ಬ್ರಾಹ್ಮಣೇತರರು ಸಾಮಾನ್ಯವಾಗಿ ಉಪವಾಸ ಮಾಡುವುದಿಲ್ಲ.. .ಶಿವರಾತ್ರೆ ಮುಂತಾದ ದಿನಗಳಲ್ಲಿ ಉಪವಾಸ ಮಾಡಿದರೆ ಪಕ್ಕಾ ಉಪವಾಸ. ನಿನ್ನೆ ರಾತ್ರೆ ಊಟವಾದನಂತರ ಇಂದಿನ ರಾತ್ರೆಯವರೆಗೂ ಏನನ್ನೂ ಸೇವಿಸುವುದಿಲ್ಲ. (ಚಹಾಕ್ಕೆ ಮಾತ್ರ ವಿನಾಯತಿ) ಶಿವರಾತ್ರೆಯಲ್ಲಿ ರಾತ್ರೆ ಸಾಧಾರಣವಾಗಿ ಬೇಯಿಸಿದ ಗೆಣಸು ಮತ್ತು ಅಥವಾ ಸೇಗಾ(ಕಡ್ಲೆಕಾಯಿ)ಮಾತ್ರ ಆಗಿರುತ್ತದೆ.

  • ರುಣಂ ಕ್ುತ್ವಾ ಗ್ುತಮ ಪಿಬೇತ.(ಸಾಲಮಾಡಿಯಾದರೂ ತುಪ್ಪವನ್ನು ಕುಡಿ) ಚಮಚದಲ್ಲಿ ತುಪ್ಪವನ್ನು ವ ನನಗೆ ತುಪ್ಪವನ್ನು ಕುಡಿ ಎಂಬ ಪದದ ಬಗ್ಗೆ ಯಾವಾಗಲೂ ಕುತೂಹಲ. ಬಾಲ್ಯದಿಂದಲೂ ನಾನು ಧಾರಾಳವಾಗಿ ತುಪ್ಪವನ್ನು ಉಂಡವನು. ಆಯುರ್ವೇದ ಚಿಕಿತ್ಸೆಯಲ್ಲಿ ವಾರಕ್ಕೆ ಲೀಟರ ಗಟ್ಟಲೆ ತುಪ್ಪವನ್ನು ಔಷಧ ರೂಪದಲ್ಲಿ ಕುಡಿಸುವುದು  ಗೊತ್ತು. ಆದರೂ 'ತುಪ್ಪವನ್ನು ಕುಡಿ' ಎಂಬುದು ಅರ್ಥವಾಗಿರಲಿಲ್ಲ. ಬಿಜಾಪುರ ಜಿಲ್ಲೆಯಲ್ಲಿ ಒಬ್ಬರ ಮನೆತೆ ಹೋದಾಗ ಅರ್ಧ ಅರ್ಥವಾಯಿತು. ಅಲ್ಲಿ ನನಗೆ ಹೋಳಿಗೆ (ಒಬ್ಬಟ್ಟು) ಜೊತೆಗೆ ತುಪ್ಪವನ್ನು ಒಂದು ಬಸಿಯಲ್ಲಿ (ಸಾಸರ್ ) ಕೊಟ್ಟಿದ್ದರು. ಹೋಳೀಗೆಯನ್ನು ಮುರಿದು ತುಪ್ಪದಲ್ಲಿ ಅದ್ದಿ ಮೆತ್ತಗಾದ ಮೇಲೆ, ಆ ಹೋಳಿಗೆಯ ಜೊತೆಗೆ ತುಪ್ಪವನ್ನೂ ಸೇರಿಸಿ ಸುರ್ ಎಂದು ಸುರಿಯಬೇಕು. ತುಪ್ಪ ಕರ್ಚಾಗುತ್ತಿದ್ದಂತೇ ಮನೆಯ ಯಜಮಾನತಿ  ಭರ್ತಿ ಮಾಡುತ್ತಿದ್ದಳು. ಇದು ಈ ಬರಗಾಲ ದೇಶದ ಸಾಮಾನ್ಯ ಸಂಗತಿ

  • ಗುಲಬರ್ಗಾ ಜಿಲ್ಲೆಯ ಗ್ರಾಮ ಒಂದರಲ್ಲಿ ತುಪ್ಪ ಕುಡಿಯುವುದರ ಪ್ರತ್ಯಕ್ಷ ದರ್ಷನವಾಯಿತು. ಸಂತೆಯ ದಿನ ಊರ ಒಬ್ಬ ಸಾಹುಕಾರ ತುಪ್ಪಮಾರುವವರಿಂದ ಒಂದು ಮಿಳ್ಳಿ (ಅಂದಾಜ್ ೫೦ ಎಂ ಎಲ್ ) ತುಪ್ಪವನ್ನು ಖರೀಧಿಸಿ ಅಲ್ಲಿಯೇ ಕುಡಿದುಬಿಡುವುದನ್ನು ನಾನು ಬಹಳಶ್ಟುಸಾರೆ ನೋಡಿದ್ದಿದೆ.( ಮುಂದೆ ಆತ ಹ್ುದಯಾಘಾತದಿಂದ ಮರಣ ಹೊಂದಿದ. )

  • ಉಂಡ ಗಂಗಾಳದೊಳಗೇ ಕೈ ತೊಳೆಯುವುದರ ಬಗ್ಗೆ ಮೆಲೇ ಹೇಳಿದ್ದೇನೆ. ಕೆಲವು ಆರೋಗ್ಯದ ಬಗ್ಗೆ ಕಾಳಜಿ ಉಳ್ಳ ಜನರು ಗಂಗಾಳದಲ್ಲಿ ಕೈ ತೊಳೆದುಕೊಂಡಮೇಲೆ ಬಾಯಿಯನ್ನೂ ಅಲ್ಲೇ ತೊಳೆದುಕೊಳ್ಳುವುದಿದೆ. ಬೆರಳಿನಲ್ಲಿ ಹಲ್ಲನ್ನು ಗಸ ಗಸ ಉಜ್ಜಿ , ಬಾಯಲ್ಲಿ ನೀರುಹಾಕಿ ಕುಚು ಕುಚುಎಂದು ಬಾಯನ್ನು ಮುಕ್ಕಳಿಸಿ ನೀರನ್ನು ಕುಡಿದು ಬಾಯನ್ನು ಸ್ವಚಗೊಳಿಸಿಕೊಳ್ಳುತ್ತಾರೆ. ತುಮಕೂರು ಜಿಲ್ಲೆಯ ಕೆಲವರು ಗಂಗಾಳದಲ್ಲಿ ಕೈ ತೊಳೆದಮೇಲೆ ಗಂಗಾಳದಲ್ಲಿರುವ ನೀರನ್ನು ಹೊರಗೆ ಚೆಲ್ಲುವುದಿಲ್ಲ ತಾವೇ ಕುಡಿದು ಬಿಡುತ್ತಾರೆ..ಅದರ ಬಗ್ಗೆ ಏನಾದರೂ ವಿಚಾರಿಸಿದರೆ, ಗಂಗಾಳದೊಳಗೆ ಕೈ ತೊಳೆದು ಚೆಲ್ಲುವ ಮಂಗಗಳ ನೋಡು ಎಂದು ಸರ್ವಜ್ನನ ವಚನವನ್ನು ನೆನಪಿಸಿಕೊಡುತಾರೆ

Rating
Average: 5 (1 vote)

Comments