ಊರೂರು ವಿಶೇಷ ?
ನಿಮ್ಮ ಸುತ್ತಮುತ್ತಲಿರುವ, ನೀವು ನೋಡಿರುವ ಸ್ಥಳಗಳ, ಮತ್ತು ಅದರ ವಿಶೇಷಗಳ ಕುತೂಹಲಕರ ಸಣ್ಣ-ಪುಟ್ಟ ವಿಚಾರಗಳನ್ನು, ಮತ್ತು ಅದು ಎಷ್ಟು ದೂರದ ಹಾದಿ ?, ಅಲ್ಲಿಗೆ ತಲುಪುವ ರೀತಿ, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಸವಿವರವಾಗಿ ತಿಳಿಸೋಣವೆ ?
ಉದಾಹರಣೆ : ಸ್ಥಳ : ಧರ್ಮಸ್ಥಳ
ವಿಶೇಷ : ಮಂಜುನಾಥ ದೇವರು,
ವಿಶೇಷ ವ್ಯಕ್ತಿ : ವೀರೇಂದ್ರ ಹೆಗ್ಡೆ
ತಲುಪುವ ಬಗೆ : ಬಸ್ಸು - ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ನಿತ್ಯವೂ ನೂರಾರು ಬಸ್ಸುಗಳು
ಹೊರಡುತ್ತವೆ. ರಾತ್ರಿ ಹೊತ್ತಿನಲ್ಲಿ ಹೆಚ್ಚಿನ ಬಸ್ಸುಗಳು ನೇರವಾಗಿ ಅಲ್ಲಿಗೆ ತಲುಪುತ್ತವೆ.
ತಲುಪುವ ದಾರಿ : (ಸ್ವಂತ ವಾಹನದಲ್ಲಿ ಹೋಗುವವರ ಉಪಯೋಗಕ್ಕೆ)
ಬೆಂಗಳೂರು --- ನೆಲಮಂಗಲ -- ಕುಣಿಗಲ್ - ಹಿರಿಸಾವೆ -- ಚನ್ನರಾಯಪಟ್ಟಣ -- ಹಾಸನ
ಸಕಲೇಶಪುರ -- ಶಿರಾಡಿ ಘಾಟ್ - ಬೆಳ್ತಂಗಡಿ-- ಧರ್ಮಸ್ಥಳ.
ಪ್ರಯಾಣದ ಅವಧಿ - ಸಾಮಾನ್ಯ ೭ ಘಂಟೆ
ನಿಮಗೆ ಗೊತ್ತಿರುವ ಇನ್ನಿತಿರ ಮಾಹಿತಿ, ಚಿತ್ರ ಮತ್ತು ವಿಶೇಷಗಳನ್ನು ಹಂಚಿಕೊಳ್ಳಿ
----
ಅರವಿಂದ್