ಊಸರುವಳ್ಳಿ ಕ್ಷಣಕೊಂದು ಬಣ್ಣ ಹೇಗೆ ನಂಬ್ಲಿ ನಾ ನಿನ್ನ ......

ಊಸರುವಳ್ಳಿ ಕ್ಷಣಕೊಂದು ಬಣ್ಣ ಹೇಗೆ ನಂಬ್ಲಿ ನಾ ನಿನ್ನ ......

ಊಸರುವಳ್ಳಿ ಕ್ಷಣಕೊಂದು ಬಣ್ಣ
ಹೇಗೆ ನಂಬ್ಲಿ ನಾ ನಿನ್ನ ...

ನಂಜಬಟ್ಟಲ ಕೆಳಗೆ ಕಂಡು ಕಾಣದಂತೆ ಕಾಣಿಸುತ್ತಿದ್ದ ಓತಿಕ್ಯಾತನನ್ನು ಕುರಿತು ಹಾಡಿದಳು ಮಗಳು,
ಊಸರುವಳ್ಳಿ, ಓತಿಕ್ಯಾತ ಅಂಗ್ಲದಲ್ಲಿ 'CHAMELEON'  ಎಲ್ಲರು ಒಂದೇನ ಅಂತ ಅನುಮಾನ ಬೇರೆ
ಸರಿ ಅದನ್ನೆ ಕೇಳೋಣ ಅಂತ ಈಚೆ ಕರೆದರೆ
"ನನ್ನನ್ನು ಕ್ಷಣಕೊಂದು ಬಣ್ಣ ಅಂತಿರಲ್ಲ ನೀವೇನು  ಕಡಿಮೆಯ ಹೇಗೆ ನಂಬೋದು ಮನುಷ್ಯರನ್ನು" ಅಂತ ಸಂದಿಯಿಂದಲೆ ಪ್ರಶ್ನಿಸಿತು.
ಆಗ ನಾನು " ಊಸರುವಳ್ಳಿಯೆ ನಾವಿಬ್ಬರು ಒಂದೆ , ಸಮಯ ಬಂದಾಗ
ಬಣ್ಣ ಬದಲಾಯಿಸಿ ಬಿಡುತ್ತೇವೆ , ನಾವು ಮನುಷ್ಯರು ನೀನು ಓತಿಕ್ಯಾತ ಅಷ್ಟೆ
"ನನಗೂ ನಿನಗು ಅಂತರವೆಲ್ಲಿದೆ" ನಾವೆಲ್ಲರು ಒಂದೆ ಜಾತಿ " ಎಂದೆಲ್ಲ ಪೂಸಿ ಹೊಡೆದು.
"ನಮ್ಮ ಸಂಪದ ಸ್ನೇಹಿತರು ನಿನ್ನ ಚೆಲುವನ್ನು ಕಾಣಬೇಕಂತೆ" ಅಂದೆ.
'ಚೆಲುವು' ಅಂದ ತಕ್ಷಣ ಏಕೊ ನಂಬಿ ಬಿಟ್ಟಿತು,ನರಿಯನ್ನು ನಂಬಿದ ಕಾಗೆಯಂತೆ,
"ಹೋಗಲಿ ಒಂದೆರಡು ಚಿತ್ರಗಳಷ್ಟೆ ಜಾಸ್ತಿ ತೆಗೆಯಕೂಡದು"  ಅಂತ ಕಂಡೀಷನ್ ಹಾಕಿ
ಹೊರಗೆ ಬಂದು ಕುಳಿತು ಕೊಂಡಿತು.
"ವಂದನೆಗಳು" ಎಂದೆ ಎಲ್ಲ ಚಿತ್ರ ತೆಗೆದು,
ಮತ್ತೆ ಅದಕ್ಕೆ ಕಲ್ಲಿನ ಸಂದಿ ಏನೊ ಕಂಡಿತೊ ಓಡಿ ಹೋಗಿ ಒಳಗೆ ಸೇರಿತು

Rating
No votes yet

Comments