ಎಂಜಲ ಬಳಿದ ಶ್ರೀಹರಿ - ಪುರಂದರ ದಾಸರ ಒಂದು ಅಪರೂಪದ ರಚನೆ

ಎಂಜಲ ಬಳಿದ ಶ್ರೀಹರಿ - ಪುರಂದರ ದಾಸರ ಒಂದು ಅಪರೂಪದ ರಚನೆ

ಕಿಂಗ್ ಮೇಕರ್ರೂ , ಸ್ವತಃ ಭಗವ೦ತನೂ ಆದ ಶ್ರೀ ಕೃಷ್ಣನು ರಾಜಸೂಯ ಯಾಗದ ಸಮಯದಲ್ಲಿ ಎಂಜಲು ಬಳಿಯಲೂ ಹಿಂಜರಿಯದ ಸಂಗತಿ ಇಲ್ಲಿದೆ -

ಎಂಜಲವನೆ ಬಳಿದ ಶ್ರೀಹರಿ
ರಾಜಿಸುವ ರಂಜಿಸುವ ರಾಜಸೂಯ ಯಾಗದಲ್ಲಿ

ಉಟ್ಟ ಪೀತಾಂಬರ ಟೊಂಕಕೆ ಕಟ್ಟಿ
ಕಟ್ಟಿದ್ದ ಸರಗಳ ಹಿಂದಕೆ ಸರಿಸಿ
ಸರಸರ ಎಲೆಗಳ ತೆಗೆದು ಬಿಸಾಕಿದ
ಕಟ್ಟ ಕಡೆಗೆ ತಾನೆ ಬಳಿದು ನಿಂತ

ಪೊರಕೆಯ ಪಿಡಿದು ಕಸವನೆ ಗುಡಿಸಿ
ಹೆಂಡಿಯ ನೀರೊಳು ಕಲಸಿ ಥಳಿಯ ಹಾಕಿ
ಸಾಲು ಸಾಲಾಗಿ ಮಣೆಗಳನ್ನಿಟ್ಟು ಎಲೆ ಹಾಕಿ
ರಂಗೋಲಿ ಕೊಳವಿಯ ಎಳೆದು ತಾ ನಿಂತ

ಎನ್ನ ಕೆಲಸಾಯ್ತೆoದ ಇನ್ನೇಕೆ ತಡವೆಂದ
ಇನ್ನೊಂದು ಪಂಕ್ತಿಯ ಕೂಡ ಹೇಳೆಂದ
ಘನ್ನಮಹಿಮ ಸಿರಿಪುರಂದರ ವಿಠಲನು
ಪುಣ್ಯಾತ್ಮರುಂಡ ಎಲೆಗಳನು ಬಳಿದು ನಿಂತ

- ಕೃಪೆ - ಶ್ರೀಮತಿ ಸಂಯುಕ್ತಾ ಮಿಶ್ರೀಕೋಟಿ

ಇದು ಸಮಾರ೦ಭಗಳಲ್ಲಿ ಊಟದ ಸಮಯ ಹಾಡಲು ಸೂಕ್ತ. ಕೇಳಿದವರು ಸಂತಸ ಪಡುವರು. ಅವರು ತಮ್ಮ ಸಂತಸ ವ್ಯಕ್ತಪಡಿಸಿದಲ್ಲಿ ಹಾಡಿದವರೂ ಸಂತಸ ಪಡುವರು!

Rating
Average: 5 (1 vote)