ಎಂದಿನಂತೆ ...
ಎಂದಿನಂತೆ
ಹಾರುವ ಕೂದಲ ಕಟ್ಟದೆ
ಅವಳು ರಸ್ತೆಯ ಅ ಬದಿಯಲ್ಲಿ ನಿಂತಿದ್ದಳು, ಅವಳದೇ ಲೋಕದಲ್ಲಿ
ಅವಳಂತೆಯೇ ಅವನು ರಸ್ತೆಯ ಈ ಬದಿಯಲ್ಲಿ...
ಎಂದಿನಂತೆ
ಅವಳು ಅವನತ್ತ ಒಂದು ನೋಟ ಬೀರಿದಳು,
ಇವನೂ ಒಮ್ಮೆ ಕಣ್ಣು ಹಾಯಿಸಿದ
ಆದರೆ
ಇಂದು ಅವರ ಕಣ್ಣುಗಳು ಏನೋ ಮಾತಾಡಿದವು
ನಂತರ,
ಅವಳು ಅವಳ ದಾರಿಯಲ್ಲಿ ಹೋದಳು
ಅವನ ದಾರಿಯಲ್ಲಿ ಅವನು..
ಆದರೆ
ಅವಳು ಅವಳಾಗಿರಲಿಲ್ಲ
ಅವನು ಅವನಾಗಿರಲಿಲ್ಲ!!!
Rating