ಎಂದಿನಂತೆ

ಎಂದಿನಂತೆ

ಮತ್ತೊಮ್ಮೆ ಬೆಳಗಾಗುತ್ತದೆ.
ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಜಗತ್ತೇ ತನ್ನ ರೀತಿಯಲ್ಲಿ.
ಆದರೆ ಕೆಲವು ಸಂಸಾರಗಳ ಜೀವನ ರೀತಿಯೇ ಬದಲಾಗಿರುತ್ತದೆ.

ಎಷ್ಟೊಂದು ವೈರುಧ್ಯ?

ಇವತ್ತು ಮುಂಬಯಿಯ ವಿದ್ಯ್ಮಾನಗಳಲ್ಲಿ ತಲೆಬಿಸಿ ಮಾಡಿಕೊಂಡಸ್ಟನ್ನೂ ಕೇವಲ ದಿನಗಳಲ್ಲಿಯೇ ಮರೆತು ಬಿಡುತ್ತೇವೆ.

ನಮ್ಮ ಜೀವನ ನಮ್ಮದು.

ಇವತ್ತು ಸಂಜೆ ಉದಯ ಟೀವಿಯ ವಾರ್ತೆಯಲ್ಲಿ ಕಂಡ ವಿಷಯವೂ ಅಷ್ಟೇ. ತಾನು ಹುಟ್ಟಿ ಇನ್ನೂ ಕಣ್ತೆರೆದ ಈ ಪ್ರಪಂಚವನ್ನೂ ಸರಿಯಾಅಗಿ ಕಂಡರಿಯದ ಎಳೆ ಕಂದಮ್ಮನನ್ನು ಅದು ಹೇಗೆ ಕತ್ತು ಕೊಯ್ದು ಸಾಯಿಸಲು ಮನಸ್ಸು ಬಂತೋ ....? ಆದರೆ ತನಗೆ ತಿಂಡಿಮಾಡಿ ತಿನ್ನಿಸಿದ ಕುಡಿಯಲು ಜೀವ ಜಲ ಕೊಟ್ಟವರನ್ನೂ ಗುಂಡುಹೊಡೆದು ಸಾಯಿಸುವ ಕೊಲೆಪಾತಕಿಗೂ ಇವರಿಗೂ ಎಲ್ಲಿದೆ ವ್ಯತ್ಯಾಸ?

ಇದೆಂತಹ ಜೀವನ? ಇದೆಂತಹ ರೀತಿ ನೀತಿ..?

Rating
No votes yet