ಎಂ.ಪಿ. ಪ್ರಕಾಶ್ ಇನ್ನು ನೆನಪು ಮಾತ್ರ

ಎಂ.ಪಿ. ಪ್ರಕಾಶ್ ಇನ್ನು ನೆನಪು ಮಾತ್ರ

ಕುಮಾರಸ್ವಾಮಿ ರಾಜಕೀಯ ಕ್ಷಿಪ್ರ ಕ್ರಾಂತಿ ನಡೆಸಿ ಮುಖ್ಯಮಂತ್ರಿಯಾದ ನಂತರ ವಿಶ್ವಾಸ ಮತ ಕೋರುವ ಸಂಧರ್ಭದಲ್ಲಿ, ನಾನು ಇಡೀ ದಿನ ಟಿವಿ ಮುಂದೆ ಕುಳಿತಿದ್ದೆ. ದೂರದರ್ಶನದಲ್ಲಿ ಅವತ್ತು ವಿಶ್ವಾಸ ಮತದ ನೇರ ಪ್ರಸಾರ ಇತ್ತು. ಅವತ್ತು ಎಂ.ಪಿ. ಪ್ರಕಾಶ್ ಮಾತಾಡಿದ್ದು ಕೇಳಿ ನನಗೆ ರಾಜಕೀಯದಲ್ಲಿ ಇಷ್ಟೊಂದು ತಿಳಿದುಕೊಂಡಿರುವವರು ಇರುತ್ತಾರಾ ಅಂತ ಆಶ್ಚರ್ಯ ಜೊತೆಗೆ ಖುಷಿ ಕೂಡ ಆಯ್ತು. ದೀರ್ಘ ಸಮಯ ಮಾತನಾಡಿದ ಪ್ರಕಾಶ್ ರ ಮಾತುಗಳಲ್ಲಿ. ಸಾಹಿತ್ಯ, ಸಂಸ್ಕೃತಿ, ರೋಮ್ ಸಾಮ್ರಾಜ್ಯ, ಗ್ರೀಕ್ ಸಾಮ್ರಾಜ್ಯ ಹೀಗೆ ಎಲ್ಲವೂ ಬಂದು ಹೋದವು. ಇವೆಲ್ಲವನ್ನು ಅವತ್ತಿನ ಸಂಧರ್ಭಕ್ಕೆ relate ಮಾಡಿ ಮಾತನಾಡುವುದು ಅಷ್ಟು ಸುಲಭದ ಕೆಲಸ ಅಲ್ಲ. ಪ್ರಕಾಶ್ ವಾಗ್ಮಿ, ಸಾಹಿತ್ಯ, ರಂಗಭೂಮಿಗಳಲ್ಲಿ ಅವರಿಗೆ ಆಸಕ್ತಿ ಇತ್ತು. ಅಪಾರ ವಿದ್ವತ್ತನ್ನು ಹೊಂದಿದ್ದರು. ಕನ್ನಡ ನಾಡು ಕಂಡ ಅಪರೂಪದ ಸಜ್ಜನ ರಾಜಕಾರಣಿ ಎಂ.ಪಿ. ಪ್ರಕಾಶ್ ಉಪಮುಖ್ಯಮಂತ್ರಿಯಾಗಿ, ಗೃಹ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಮುಂದಿನ ಚುನಾವಣೆಯಲ್ಲಿ ಕರುಣಾಕರರೆಡ್ಡಿ ಎದುರು ಸೋತರು. ಚುನಾವಣೆಯಲ್ಲಿ  ವಿದ್ವತ್ತು ಕೆಲಸ ಮಾಡುವುದಿಲ್ಲ. ರೆಡ್ಡಿ ಸೋದರರಿಗೂ ಅವರಿಗೂ ಜಟಾಪಟಿ ನಡದೇ ಇತ್ತು. ಹಲವು ತಿಂಗಳುಗಳ ಕೆಳಗೆ ಜನಾರ್ಧನ ರೆಡ್ಡಿ ಪ್ರಕಾಶ್ ರವರ ಬಗ್ಗೆ ಸಾಯೋದಕ್ಕೆ ಸಿದ್ಧವಾಗಿರುವ ಮನುಷ್ಯ ಎಂಬರ್ಥದಲ್ಲಿ ಮಾತನಾಡಿದ್ದರು. ಸಂಸ್ಕಾರಕ್ಕೆ ತಕ್ಕಂತ ಮಾತು. ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಪ್ರಕಾಶ್ ರಂತವರ ಅವಶ್ಯಕತೆ ತುಂಬಾ ಇತ್ತು. ಕಾಲನ ಕರೆ ಮುಂದೆ ಈ ತರದ requirementಗಳು ಕೆಲಸ ಮಾಡುವುದಿಲ್ಲ. ಪ್ರಕಾಶ್ ಇನ್ನು ನೆನಪು ಮಾತ್ರ.

Rating
No votes yet

Comments