ಎಗ್ಲೆಸ್ ಕೇಕ್
ಬೇಕಾಗುವ ಸಾಮಾಗ್ರಿಗಳು :
-ಪಾರ್ಲೇ ಜಿ ಗ್ಲುಕೋಸ್ ಬಿಸ್ಕೇಟ್!! ಕೇಕ್ ಹಾಳಾದರೆ ಬಿಸ್ಕೇಟ್ ಆದರೂ ತಿನ್ನಲಿಕ್ಕಿರಲಿ ಎಂದಲ್ಲ. (೧೦ರೂ.ನ ಒಂದು ಪ್ಯಾಕೆಟ್ ತನ್ನಿ)
-"ಇನೋ"( eno) ಒಂದು ಸಣ್ಣ ಪ್ಯಾಕೆಟ್!! (ತಿಂದು ಹೊಟ್ಟೆನೋವಾದರೆ ತೆಗೆದುಕೊಳ್ಳಲು ಅಲ್ಲ..ಅದೂ ಬೇಕು!)
-ಕೊಕೋ ಪೌಡರ್ (೧-೨ ಸ್ಪೂನ್)
-ಹಾಲು (ಅಂದಾಜು ಒಂದು ಲೋಟ)
-ಸಕ್ಕರೆ (೫-೬ ಸ್ಪೂನ್)
ಮಾಡುವ ವಿಧಾನ :
ಮೊದಲಿಗೆ ಗ್ಲುಕೋಸ್ ಬಿಸ್ಕೇಟನ್ನು ತುಂಡು ಮಾಡಿ ಮಿಕ್ಸಿಗೆ ಹಾಕಿ ಪೌಡರ್ ಮಾಡಬೇಕು.
ಆಮೇಲೆ ಅದಕ್ಕೆ ಇನೋ ಪ್ಯಾಕೆಟ್ ಪೂರ್ತಿ ಹಾಕಿ, ಹಾಲು, ಸಕ್ಕರೆ ಸೇರಿಸಿ, ಕಲಸಿ, ೨೦ ನಿಮಿಷ ಬಿಡಿ.
ದೋಸೆ ಹಿಟ್ಟಿನಕ್ಕಿಂತ ಸ್ವಲ್ಪ ದಪ್ಪ ಹದಕ್ಕಿರಬೇಕು. ಅದಕ್ಕೆ ಕೊಕೋ ಪೌಡರ್ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ( ಬೇಕಿದ್ದರೆ ಟೂಟಿ ಫ್ರೂಟಿ /ಗೋಡಂಬಿ/ಒಣದ್ರಾಕ್ಷಿ ಸೇರಿಸಬಹುದು)
ಈಗ ದೊಡ್ಡ ಸ್ಟೀಲ್ ಬೌಲ್ಗೆ ತುಪ್ಪ ಸವರಿ ಮಿಶ್ರಣವನ್ನು ಅದಕ್ಕೆ ಹಾಕಬೇಕು.
ಕುಕ್ಕರ್ನೊಳಗೆ ೩ ಗ್ಲಾಸ್ ನೀರು ಹಾಕಿ, ದೊಡ್ಡ ಖಾಲಿ ಪಾತ್ರೆಯನ್ನು ಅದರ ಒಳಗಿಟ್ಟು, ಅದಕ್ಕೆ ಪ್ಲೇಟು ಮುಚ್ಚಿ,ಆ ಪ್ಲೇಟ್ನ ಮೇಲೆ ಮಿಶ್ರಣದ ಬೌಲ್ ಅನ್ನು ಇಡಿ.
ಕುಕ್ಕರ್ನ ಮುಚ್ಚಳ ಮುಚ್ಚಿ, ವೈಟ್ನ್ನು ಹಾಕದೇ, ೨೦ ನಿಮಿಷ ಬೇಯಲು ಬಿಡಿ.
ಗಮಗಮ ಕೇಕ್ ತಿನ್ನಲು ರೆಡಿ..
Comments
ಉ: ಎಗ್ಲೆಸ್ ಕೇಕ್
ಗಣೇಶ್ ಜೀ, ಇದು ಯಾವುದೊ ಟಿವಿ ಪ್ರೋಗ್ರಾಮ್ ನೋಡಿ ಮಾಡಿದ ಕೇಕಿನ ಹಾಗೆ ಕಾಣುತ್ತಿಲ್ಲ. ನಿಮ್ಮದೆ 'ಹೊಸರುಚಿ' ಪ್ರಯೋಗದ ಹಾಗೆ ಕಾಣುತ್ತಿದೆ..? ಅದೇನೆ ಇರಲಿ - ಕೊನೆಯ ಚಿತ್ರ ನೋಡುವವರೆಗೂ ಕೇಕೆ ಆಗುತ್ತಿರುವುದು ಅಂತ ನಂಬಿಕೆಯಿರಲಿಲ್ಲ. ಕೊನೆಗೂ ನೋಡಿದರೆ ಕೇಕೆ ಆವಿರ್ಭವಿಸಿಬಿಟ್ಟಿದೆ. ಪರ್ಲೆ, ಕೋಕೊ ಎಲ್ಲಾ ಸೇರಿರುವುದರಿಂದ ಗಮ ಗಮ ರುಚಿಯು ಊಹೆಗೆ ನಿಲುಕುವಂತಾಯ್ತು. ಎಲ್ಲಾ ವಿಶೇಷ ಓವನ್ ಬಳಸಿ ಕೇಕ್ ಮಾಡ್ತಾರೆ, ನೀವು ಕುಕ್ಕರನ್ನೆ ಓವನ್ನಾಗಿಸೊ 'ಏ ವನ್' ಐಡಿಯನೂ ತೋರಿಸಿಕೊಟ್ಟಿದ್ದಿರ..(ರಾಮ್ರಾಮ ...ಮೂರು ಲೋಟ ನೀರು ಹಾಕಿ, ಖಾಲಿ ಪಾತ್ರೆಯಿಟ್ಟು ಮುಚ್ಚಳ ಮುಚ್ಚಿ, ಅದರ ಮೇಲೆ ಕೇಕಿನ ಹಿಟ್ಟು ಇಟ್ಟು, ವೈಟ್ ಹಾಕದೆ ಬೇಯಿಸಿ....ಏಲ್ಲಾ ಇನ್ನೊವೇಶನ್ ಇನ್ ಕಿಚನ್ ...) :-)
In reply to ಉ: ಎಗ್ಲೆಸ್ ಕೇಕ್ by nageshamysore
ಉ: ಎಗ್ಲೆಸ್ ಕೇಕ್
ನಾಗೇಶರೆ, -"ಕೊನೆಯ ಚಿತ್ರ ನೋಡುವವರೆಗೂ ಕೇಕೆ ಆಗುತ್ತಿರುವುದು ಅಂತ ನಂಬಿಕೆಯಿರಲಿಲ್ಲ.":) :) ಸುಮ ಅವರ "ನೆಲಕಡಲೆ ಟಿಕ್ಕಿ" ಲೇಖನದಲ್ಲಿ ನನ್ನ ಪ್ರತಿಕ್ರಿಯೆಗೆ- "Eggless ಕೇಕ್ ರುಚಿ (recipe) ಕಳುಹಿಸಿ ಕೊಡಿ. ನಾನು ತಯಾರಿಸಿ ಅದರ ಪೂರ್ಣ ಫೋಟೋ ಹಾಕುವೆ." ಅಂದಾಗ ನನಗೂ ಇದೇ ಯೋಚನೆಯಾಯಿತು. ರೆಸಿಪಿ ನೋಡಿ ಇದೇನೋ ಜೋಕ್ ಅಂದುಕೊಂಡಾರು ಅಂತ. ಅದಕ್ಕೇ ಕೇಕ್ ಪೀಸಿನ ಚಿತ್ರನೇ ಹಾಕಿ ಬರೆದೆ. ಇದರಲ್ಲಿ ನನ್ನ ಇನ್ನೊವೇಶನ್ ಏನೂ ಇಲ್ಲ- ಅಲ್ಲಿ ಇಲ್ಲಿ ಕೇಳಿದ್ದು/ನೋಡಿದ್ದು. ನಿಮ್ಮ ಮೆಚ್ಚುಗೆಯಿಂದ ನನಗೆ ಕೇಕ್ ತಿಂದಷ್ಟೇ ಖುಷಿಯಾಯಿತು. ಧನ್ಯವಾದಗಳು.
ಉ: ಎಗ್ಲೆಸ್ ಕೇಕ್
ಆ ಗಣೇಶ ಬಂದ ಕಾಯ್ ಕಡುಬು ತಿಂದ...!! ಚ್ಹಿಕ್ಕ್ ಕೆರೆಲ್ ಎದ್ದ ದೊಡ್ಡ ಕೆರೆಲ್ ಬಿದ್ದ...!! ನಮ್ ಗಣೇಶ ಅಣ್ನ ಅವರು ಒಂದು ಒಳ್ಳೇ ಬಾಯಲ್ ನೀರ್ ಊರಿಸೊ ರೀತಿಯ ಸರ್ಳ ಕೇಕ್ ತಯಾರಿಸುವ ಅದೂ ಅತಿ ಕಡಿಮೆ ವೆಚ್ಹ್ಹದಲ್ಲಿ ತಿಳಿಸಿರುವರು.. ಇದನ್ನು ನಾನು ಫೇಸ್ಬುಕ್ಕಲ್ಲಿ ಎಲ್ರಿಗೂ ತಿಳಿಸುವೆ..
ನಾಗೇಶ್ ಅವರ ಪ್ರತಿಕ್ರಿಯೆ ಸಖತ್..!!
ಇಲ್ಲಿ ಕೆಲವು ಬೇರೆ ವಿಧಾನಗಳು ಇವೆ..
http://brindavanreci...
http://www.aayisreci...
http://www.pachakam....
ಆದರೆ ಗಣೇಶ ಅಣ್ಣ ಅವರದೇ ಸರಳ ವಿಧಾನ..
ಗಣೇಶ ಅಣ್ಣ ನನ್ನಿ.
ಶ್ಹುಭವಾಗಲಿ..
\|
In reply to ಉ: ಎಗ್ಲೆಸ್ ಕೇಕ್ by venkatb83
ಉ: ಎಗ್ಲೆಸ್ ಕೇಕ್
ಅಂತು ಗಣೇಶ್ ರವರೆ ಬಿಸ್ಕತ್ತು ತಂದು ಅದರಲ್ಲಿ ಕೇಕ್ ಮಾಡಬಹುದೆಂದು ತಿಳಿಸಿರುವಿರಿ ಅದು ಸರಳ ವಿಧಾನದಲ್ಲಿ.
ಇಗ ಆ ಕೇಕನ್ನು ಪುನಃ ಬಿಸ್ಕತ್ತು ಮಾಡಬೇಕೆಂದರೆ ಹೇಗೆ ಆದೀತ ?
- ಸುಮ್ಮನೆ ಪ್ರಯತ್ನಿಸುವ ಅಂತ ಕೇಳಿದೆ :-)
In reply to ಉ: ಎಗ್ಲೆಸ್ ಕೇಕ್ by partha1059
ಉ: ಎಗ್ಲೆಸ್ ಕೇಕ್
:)))))) ಪಾರ್ಥರೆ, ಐಡಿಯಾ ಏನೋ ಬಹಳ ಇದೆ...
ಮೊದಲು ಕೇಕ್ ಮಾಡಿ ಇಡಿ. ಒಂದು ಪೀಸಾದರೂ ಉಳಿದರೆ ಹೇಳಿ..ತಿಳಿಸುವೆ.:)
In reply to ಉ: ಎಗ್ಲೆಸ್ ಕೇಕ್ by venkatb83
ಉ: ಎಗ್ಲೆಸ್ ಕೇಕ್
ಸಪ್ತಗಿರಿವಾಸಿ,-"ಆ ಗಣೇಶ ಬಂದ ಕಾಯ್ ಕಡುಬು ತಿಂದ...!! ಚ್ಹಿಕ್ಕ್ ಕೆರೆಲ್ ಎದ್ದ ದೊಡ್ಡ ಕೆರೆಲ್ ಬಿದ್ದ...!!" ಆ ಗಣೇಶ ಬಂದ..ಕೆರೆಲ್ ಬಿದ್ದ" ಕಡುಬು ರಾಶಿ ರಾಶಿ ತಿನ್ನೋ ಕೆಲಸ ನನಗೇ ಬಿಟ್ಟು ಹೋದ..:) ಅದು ತಿಂದು ಮುಗಿಸುವ ಹೊತ್ತಿಗೆ "ಓಣಂ ಸಿಹಿ"ಗಳು...ಈಗ ತೂಕ ಇಳಿಸೋ ಕೆಲಸದಲ್ಲಿ ನಿರತನಾಗಿದ್ದೇನೆ. ದಸರಾಕ್ಕೆ ತಯಾರಿ. :)
-ನಿಮ್ಮ ಕೊಂಡಿಗಳಿಂದ ಇನ್ನಷ್ಟು ವೆರೈಟಿಗಳು ಗೊತ್ತಾಯಿತು. ತುಂಬಾ ಥ್ಯಾಂಕ್ಸ್.
ನಾಗೇಶರೆ, ನೀವು ಕೊಂಡಿ ಕೊಡುವ ವಿಧಾನ ತಿಳಿಸಿ.ನಾನು ಮತ್ತು ಸಪ್ತಗಿರಿವಾಸಿ ಕೊಂಡಿ ಕೊಡುವಾಗ a href ಎಲ್ಲಾ ಯಾಕೆ ಬರುತ್ತಿವೆ?
In reply to ಉ: ಎಗ್ಲೆಸ್ ಕೇಕ್ by ಗಣೇಶ
ಉ: ಎಗ್ಲೆಸ್ ಕೇಕ್
ಗಣೇಶ್ ಜೀ, ನನಗೂ ಕೆಲವು ಬಾರಿ ಇದೆ ಲಿಂಕು ತೊಂದರೆ ಬರುತ್ತಿತ್ತು. ಆದರೆ ಟಿಕ್ಕಿಯಲ್ಲಿ ಹಾಕಿದಾಗ ತೊಂದರೆಯಾಗಲಿಲ್ಲ. ನನಗನಿಸುವಂತೆ ಬಹುಶಃ ತೀರಾ ಉದ್ದದ, ಹಲವು ಹಂತದ ಲಿಂಕು ಕೊಟ್ಟರೆ ಈ ತೊಂದರೆ ಬರುತ್ತದೆಯೆಂದು ಕಾಣುತ್ತದೆ. ನಾನು ಕೊಟ್ಟಿದ್ದು ಮೂರು ಲಿಂಕುಗಳು ಹೆಚ್ಚು ಕಡಿಮೆ ಹೋಮ್ ಪೇಜಿನತನಕ ಇದ್ದುವಷ್ಟೆ - ಬಹುಶಃ ಅದೆ ಕಾರಣವಿರಬಹುದೇನೊ..? ಯಾವುದಕ್ಕೂ ಪರೀಕ್ಷಿಸಲೆಂದೆ ಮತ್ತೊಮ್ಮೆ ಆ ಮೂರು ಲಿಂಕು ಕೊಡುತ್ತಿದ್ದೇನೆ, ನೋಡುವ :-)
ಅಂದಹಾಗೆ ನಾನು ಸಾಮಾನ್ಯವಾಗಿ ಎಡಿಟರೊಂದರಲ್ಲಿ ಹಾಕಿ ನಂತರ ಸಂಪದಕ್ಕೆ ಪೇಸ್ಟ್ ಮಾಡುತ್ತೇನೆ (ಬರಹ ಅಲ್ಲ - ಐ ಪ್ಯಾಡಿನಲ್ಲಿರುವ ಫ್ರೀವೇರೋಂದನ್ನು ಉಪಯೋಗಿಸುತ್ತಿದ್ದೇನೆ)
http://www.egglessco...
http://www.divinetas...
http://gayathriscook...
ಧನ್ಯವಾದಗಳೊಂದಿಗೆ
-ನಾಗೇಶ ಮೈಸೂರು
In reply to ಉ: ಎಗ್ಲೆಸ್ ಕೇಕ್ by nageshamysore
ಉ: ಎಗ್ಲೆಸ್ ಕೇಕ್
one more try-combining link with some continuous text:http://www.egglessco...
In reply to ಉ: ಎಗ್ಲೆಸ್ ಕೇಕ್ by nageshamysore
ಉ: ಎಗ್ಲೆಸ್ ಕೇಕ್
ಬಹುಶಃ 'ರುಚಿ' ವಿಭಾಗದಲ್ಲಿ ಲೇಖನ ಹಾಕಿದ್ದರೆ ಮಾತ್ರ ಲಿಂಕು ಕೆಲಸ ಮಾಡುತ್ತಿದೆಯೆಂದು ಕಾಣುತ್ತಿದೆ :-)
In reply to ಉ: ಎಗ್ಲೆಸ್ ಕೇಕ್ by nageshamysore
ಉ: ಎಗ್ಲೆಸ್ ಕೇಕ್
ಲಿಂಕಿಗೂ ನನ್ನ ಲೇಖನಗಳು ರುಚಿಸುತ್ತಿಲ್ಲವೋ ಏನೋ..:(
ನಾಗೇಶರೆ, ತಾವು ನನ್ನ ಕೋರಿಕೆ ಮನ್ನಿಸಿ ಪ್ರಯತ್ನಿಸಿದ್ದಕ್ಕೆ ಧನ್ಯವಾದಗಳು.
-ಗಣೇಶ.
In reply to ಉ: ಎಗ್ಲೆಸ್ ಕೇಕ್ by nageshamysore
ಉ: ಎಗ್ಲೆಸ್ ಕೇಕ್
ಎಲ್ರೂ ಹಾಕುವ ಲಿಂಕ್ ಗಳು - ಲಿಂಕ್ +ಲಿಂಕ್ ಆಗ್ತಿವೆ ....!ನಾನು ದೊಡ್ಡ ಅದೊಡ್ಡ ಲಿಂಕ್ಗಳನ್ನ ಬಿಟ್ಲಿ https://bitly.com/ (ದೊಡ್ಡ ದೊಡ ಯೂ ಆರ್ನ ಎಲ್ಲ್ಲಿ ಚಿಕ್ಕದು ಶಾರ್ಟ್ ಮಾಡುವ ) ಹಾಕಿ ಚಿಕ್ ಚೊಕ್ಕ ಮಾಡಿ ಹಾಕಿದರೂ ಅದೇ ಕಥೆ ... ನಿರ್ವಾಹಕರಿಗೆ ಈ ಬಗ್ಗೆ ತಿಳಿಸುವ ..!!
ಶುಭವಾಗಲಿ ..
\।
ಉ: ಎಗ್ಲೆಸ್ ಕೇಕ್
ಬಿಸ್ಕತ್ ನಲ್ಲಿ ಕೇಕ್ ಪ್ರಯತ್ನಿಸುತ್ತೇನೆ ಗಣೇಸ್ ರವರೇ. ಒಂದು ಅನುಮಾನ ಪಾರ್ಲೆ ಜಿ ಬಿಸ್ಕತ್ ಸಿಗದಿದ್ದರೆ ಬೇರೆ ಬಿಸ್ಕತ್ ಹಾಕಿ ಮಾಡಬಹುದೇ ???..........ಸತೀಶ್
In reply to ಉ: ಎಗ್ಲೆಸ್ ಕೇಕ್ by sathishnasa
ಉ: ಎಗ್ಲೆಸ್ ಕೇಕ್
ಹಾಗೆಲ್ಲಾ ಆಗುವುದಿಲ್ಲ ಸತೀಶರೆ,
ಬೇರೆ ಬಿಸ್ಕತ್ ಹಾಕಿ ಮಾಡಿದರೆ ಸ್ಯಾಂಪ್ಲ್ ಪೀಸ್ ನನಗೂ ಕಳುಹಿಸಬೇಕು. :)
ಉ: ಎಗ್ಲೆಸ್ ಕೇಕ್
ಅರ್ಥವಾಯಿತು ಬಿಡಿ, ಗಣೇಶ್ಜಿ ಎಗ್-ಲೆಸ್ ಕೇಕ್ ಎಂದರೆ ಮೊದಲು ಎಗ್ಗನ್ನು ತಿಂದು ಆಮೇಲೆ ಕೇಕನ್ನು ತಯಾರಿಸಿದರೆ ಅದು ಎಗ್-ಲೆಸ್ ಕೇಕ್ ಅಲ್ಲವೇ? :))
In reply to ಉ: ಎಗ್ಲೆಸ್ ಕೇಕ್ by makara
ಉ: ಎಗ್ಲೆಸ್ ಕೇಕ್
:) ಶ್ರೀಧರ್ಜಿ, ಶುಗರ್ಲೆಸ್ ಕಾಫಿ ಕೇಳಿದವರ ಗಂಟಲಿಗೆ ಸಕ್ಕರೆ ಸುರೀಬೇಡಿ.:)
ಉ: ಎಗ್ಲೆಸ್ ಕೇಕ್
ಗಣೇಶಣ್ಣ,
ಬಿಸ್ ಕತ್ ನಿಂದ ಕೇಕ್ recipe ಪ್ರಯತ್ನ ಮಾಡಿ ನೋಡುವೆ....
In reply to ಉ: ಎಗ್ಲೆಸ್ ಕೇಕ್ by ಸುಮ ನಾಡಿಗ್
ಉ: ಎಗ್ಲೆಸ್ ಕೇಕ್
"ಪ್ರಯತ್ನ ಮಾಡಿ ನೋಡುವೆ..!" ಇದು ಬ್ರೆಡ್ ಒಗ್ಗರಣೆಗಿಂತಲೂ ಸುಲಭ..ಇದರಲ್ಲಿ ಮೇಲೆ ಕ್ರೀಂ ಹಾಕಿ, ಚೆರ್ರಿ ಹಾಕಿ... ಬೇರೆ ವೆರೈಟಿ ಮಾಡಲು ಪ್ರಯತ್ನಿಸಿ. :)ನಮಗೂ ತಿಳಿಸಿ.
-ಗಣೇಶಣ್ಣ.
In reply to ಉ: ಎಗ್ಲೆಸ್ ಕೇಕ್ by ಗಣೇಶ
ಉ: ಎಗ್ಲೆಸ್ ಕೇಕ್
ಎಗ್ ಲೆಸ್ ಕೇಕ್ ಮಾಡುವ ಸುಲಭ ವಿಧಾನವಿದು.ನಾನೂ ಪ್ರಯತ್ನಿಸುವೆ.
In reply to ಉ: ಎಗ್ಲೆಸ್ ಕೇಕ್ by Premashri
ಉ: ಎಗ್ಲೆಸ್ ಕೇಕ್
ಪ್ರೇಮಾ ಅವರೆ, ಯಾರೂ ಕೇಕ್ ಮಾಡಿಯೇ ಇಲ್ಲ ಕಾಣುತ್ತದೆ. ನೀವಾದರೂ ಮಾಡಿ ಹೇಗಿತ್ತು ಹೇಳಿ. :)
ಉ: ಎಗ್ಲೆಸ್ ಕೇಕ್
ಇವತ್ತು ನನ್ನ ಮಗಳು ನಿಮ್ಮ ಮೆನು ನೋಡಿಕೊಂಡು ಬಿಸ್ಕತ್ ಕೇಕ್ ಮಾಡಿದ್ದಳು ತುಂಬಾ ಚೆನ್ನಾಗಿತ್ತು ಗಣೇಶ್ ರವರೇ ಧನ್ಯವಾದಗಳು .....ಸತೀಶ್
In reply to ಉ: ಎಗ್ಲೆಸ್ ಕೇಕ್ by sathishnasa
ಉ: ಎಗ್ಲೆಸ್ ಕೇಕ್
ಮೆನು ನೋಡಿ ಮೊದಲು ಕೇಕ್ ಮಾಡಿದ ತಮ್ಮ ಮಗಳಿಗೆ ನನ್ನ ಧನ್ಯವಾದಗಳು. ಸ್ಯಾಂಪ್ಲ್ ಪೀಸ್ ಬರದಿದ್ದುದರಿಂದ ಪಾರ್ಲೆ ಜಿಯಿಂದಲೇ ಕೇಕ್ ಮಾಡಿದ್ದೀರ ಅಂದುಕೊಂಡಿದ್ದೇನೆ. :)
ಉ: ಎಗ್ಲೆಸ್ ಕೇಕ್
ಗಣೇಶರೆ
ನಿನ್ನೆ ಬಿಸ್ಕತ್ ಕೇಕ್ ಮಾಡಿದ್ದೆವು, ಬೇಕರಿಯಲ್ಲಿ ತರುವ ಪ್ರೂಟ್ ಕೇಕ್ ಐಯಂಗಾರ್ ಬೇಕರೀದು ಅದಕ್ಕಿಂತ ಸೂಪರ್. ನನ್ನ ಮಗಳಂತು ತುಂಬಾ ಇಷ್ಟ ಪಟ್ಟಳು.
ಸ್ವಲ್ಪ ಬದಲಾವಣೆ ಇತ್ತು ಅನ್ನಿ, ಮನೆಯಲ್ಲಿರುವ ತಟ್ಟೆ ಇಡ್ಲಿ ಸ್ಟಾಂಡಿನಲ್ಲಿ ಮೂರು ಪ್ಲೇಟಿಗೆ ಮಾತ್ರ ಕೇಕಿನ ಮಿಶ್ರಣ ಹಾಕಿ , ಇಡ್ಲಿ ಮಾಡುವ ತರ ಕುಕ್ಕರ್ ಇಪ್ಪತ್ತು ನಿಮಿಶ ಬಿಟ್ಟಿದ್ದೆವು. ಹೊರಗೆ ತೆಗೆದರು ಥೇತ್ ಕೇಕೆ, ಸ್ವಲ್ಪ ದ್ರಾಕ್ಷಿ, ಪ್ರೂಟ್ ಹಾಕಿದ್ದೆವೆ, ಮುಂದಿನ ಸಾರಿ ಮಾಡುವಾಗ ಅನಾನಸ್ ನಂತಹ ಹಣ್ಣಿನ ಜೊತೆ ಟ್ರೈ ಮಾಡುವೆ. ಪೀಸ್ ಗಳನ್ನು ಕಟ್ ಮಾಡಿ ಒಂದೆರಡು ತಿಂದು, ಮಿಕ್ಕಿದ್ದನ್ನು ನಿಧಾನ ತಿನ್ನೋಣ ಎಂದು ಸುಮಾರು ಎಂಟು ಪೀಸ್ ಪ್ರೀಜ್ ನಲ್ಲಿಟ್ಟಿದ್ದೆವು, ಈ ದಿನ ಸಂಜೆ ಮನೆಗೆ ಬಂದು ನೋಡಿದರೆ ಅಮ್ಮ ಮಗಳು ತಿಂದು ಮುಗಿಸಿದ್ದಾರೆ :(
In reply to ಉ: ಎಗ್ಲೆಸ್ ಕೇಕ್ by partha1059
ಉ: ಎಗ್ಲೆಸ್ ಕೇಕ್
:) :) ಪಾರ್ಥರೆ, ನಿಮ್ಮ ಐಡಿಯಾನೂ ಚೆನ್ನಾಗಿದೆ. ಮಿಕ್ಕಿದ್ದು ಸಂಜೆ ಬರುವುದರೊಳಗೆ ಖಾಲಿಯಾಗದಂತೆ ಮಾಡಲು ಏನಾದರೂ ಐಡಿಯಾ ಇದೆಯಾ?:)
ಉ: ಎಗ್ಲೆಸ್ ಕೇಕ್
ಅಂತೂ ಗುರುಗಳು ಮತ್ತು ಸತೀಶ್ ಜಿ ಅವರು ಈ ಹೊಸ ರುಚಿ ವೈವಿಧ್ಯಮಯ ತಿಂಡಿ ತಯಾರಿಸಿ ತಿಂದರು. .. ನಾವ್ ಅದನ್ನ ಬರೀ ಓದಿ -ನೋಡಿ ಬಾಯಲ್ಲಿ ನೀರೂರಿಸಿಕೊಂಡೆವು ..!!
ಈ ದಸರಾ ಮುಗಿದು ಹೋಗಲಿ ಅದನ್ನು ತಯಾರಿಸಿ ತಿಂದು ನೋಡಿಯೇ ಬಿಡೋಣ ,,
ಗಣೇಶ್ ಅಣ್ಣ ಇದರ ಪೇಟೆಂಟ್ಗೆ ಅರ್ಜಿ ಹಾಕಿರುವಿರ?
ಸರ್ವರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ..
ಸಂಪದದ ಹೊಸ ರೂಪ ಸಖತ್ ..
ಅರ್ಕೈವ್ಸ್ -ಲಿಂಕ್ ಕೊಟ್ಟಿದ್ದು ಇಷ್ಟ ಆಯ್ತು ..!!
ಶುಭವಾಗಲಿ
\।
In reply to ಉ: ಎಗ್ಲೆಸ್ ಕೇಕ್ by venkatb83
ಉ: ಎಗ್ಲೆಸ್ ಕೇಕ್
ಈ ದಸರಾ ಮುಗಿದು ಹೋಗಲಿ ಅದನ್ನು ತಯಾರಿಸಿ ತಿಂದು ನೋಡಿಯೇ ಬಿಡೋಣ ,, ಓ....ದಸರಾ ಮುಗಿಯುವವರೆಗೆ ನೀವು ಎಗ್ಲೆಸ್ ತಿನ್ನುವುದಿಲ್ಲ ಅಂತ ವ್ರತಾನಾ? ತಯಾರಿಸಿ ತಿಂದ ಮೇಲೆ ನೋಡಲಿಕ್ಕೇನಿದೆ? :) ಸಂಪದದ ಹೊಸರೂಪ ನನಗೂ ಇಷ್ಟವಾಯಿತು. ದಸರಾ ಶುಭಾಶಯಗಳು.
ಉ: ಎಗ್ಲೆಸ್ ಕೇಕ್
ಅಂತೂ ಗಣೇಶಣ್ಣ, ಎಗ್ ಲೆಸ್ ಕೇಕ್ ಸಿಕ್ಕಾಪಟ್ಟೆ ಫೇಮಸ್ ಆಗಿ ಬಿಟ್ಟಿದೆ.. ಇನ್ನು ನಿಮ್ಮಿಂದ ರುಚಿ ವಿಭಾಗಕ್ಕೆ ಲೇಖನಗಳ expectation ಜಾಸ್ತಿ ಆಗಿದೆ ನೋಡಿ..
In reply to ಉ: ಎಗ್ಲೆಸ್ ಕೇಕ್ by ಸುಮ ನಾಡಿಗ್
ಉ: ಎಗ್ಲೆಸ್ ಕೇಕ್
ಧನ್ಯವಾದಗಳು ಸುಮ ಅವರೆ. ಎಗ್ ರೇಟು ಇಳಿದಿರಬಹುದೇ?:) ಹೊಸರುಚಿ ಮಾಡಿ ನನಗಿಷ್ಟವಾದರೆ ಖಂಡಿತ ರುಚಿ ವಿಭಾಗಕ್ಕೆ ಬರೆಯುವೆ.
ಉ: ಎಗ್ಲೆಸ್ ಕೇಕ್
ಏನ್ ಗಣೇಶ್'ಜಿ ನೀವು .... ಎಗ್ಲೆಸ್ ಕೇಕ್ ಹಾಕಿದ್ರಿ ಸರಿ, ರೆಸಿಪಿ ಓದುತ್ತಾ ಇರಬೇಕಾದರೆ ಸ್ಕ್ರೀನ್ ಮೇಲೆ ಇರುವೆ ಕಾಣಿಸಿತು ... ಮುಂದಿನ ಸಾರಿ ಸಕ್ಕರೆ'ಲೆಸ್ ಕೇಕ್ ಮಾಡಿ ಪ್ಲೀಸ್ :-)
In reply to ಉ: ಎಗ್ಲೆಸ್ ಕೇಕ್ by bhalle
ಉ: ಎಗ್ಲೆಸ್ ಕೇಕ್
:) ಭಲ್ಲೇಜಿ, ಸಕ್ಕರೆಲೆಸ್ ಕೇಕ್ ಮಾಡಿ ಹಾಕಿದರೆ, ನಾನು ಎಲ್ಲೇ ಅಡಗಿದ್ದರೂ ಸಂಪದಿಗರು ನನ್ನ ಹುಡುಕಿ "ಹಿಟ್ಸ್" ಜಾಸ್ತಿಯಾಗುವುದು. :) ಅದರ ಬದಲು ಮುಂದಿನ ಬಾರಿ ಸ್ವೀಟ್ ಸುತ್ತಲೂ "ಲಕ್ಷ್ಮಣ ರೇಖೆ" ಎಳೆದೇ ಫೋಟೋ ಹಾಕುವೆ..