ಎಚ್ಚರ ಎಚ್ಚರ ಎಚ್ಚರಾ ... ಮಹಾ ಚುನಾವಣೇ ಮುಂದಿದೆ

ಎಚ್ಚರ ಎಚ್ಚರ ಎಚ್ಚರಾ ... ಮಹಾ ಚುನಾವಣೇ ಮುಂದಿದೆ

ಚುನಾವಣ ಸಮಯವಿದು. 
ರಾಜಕೀಯದಲ್ಲಿ ಆಸಕ್ತಿ ಇರಲಿ ಬಿಡಲಿ, ಒಮ್ಮೆ ಚುನಾವಣ ಕಣದತ್ತ ಕಣ್ಣಾಡಿಸುವುದು, ಅವರಿವರ ಹೇಳಿಕೆ ಓದುವುದು/ಕೇಳುವುದು ಸಹಜ.
ಪ್ರತಿಯೊಬ್ಬನಿಗೂ ತನ್ನದೇ ಆದ ಪಕ್ಷದ ಬಗ್ಗೆ ಒಲವು ಅಭ್ಯರ್ಥಿಯ ಬಗ್ಗೆ ಆಯ್ಕೆಗಳಿರುತ್ತವೆ. 
ಕೆಲವೊಮ್ಮೆ ನಾವು ಮೆಚ್ಚುವ ಪಕ್ಷಕ್ಕೂ, ನಮ್ಮ ಮೆಚ್ಚಿನ ಅಭ್ಯರ್ಥಿಗೂ ಹೊಂದಿಕೆಯಾಗದೇ ಸಹ ಹೋಗಬಹುದು. ನಿಮ್ಮ ಮೆಚ್ಚಿನ ಅಭ್ಯರ್ಥಿ ನಿಮ್ಮ ಮೆಚ್ಚಿನ ಪಕ್ಷದಲ್ಲಿ ಇರದೇ ಇರುವ ಸಾದ್ಯತೆಗಳು ಇವೆ. 
ಆದರೆ ಒಂದು ವಿಷಯ ನಮ್ಮ ಅಭಿಪ್ರಾಯಗಳು, ನಮ್ಮ ಒಲವು, ಎಲ್ಲವೂ ಸಂಪೂರ್ಣವಾಗಿ ಪತ್ರಿಕೆಗಳ ವರದಿ, ಸುದ್ದಿಗಳ ಮೇಲೆ ನಿರ್ಧಾರವಾಗದಿರಲಿ.
ಈಗಂತು ತಾಂತ್ರಿಕತೆ, ಮಾಧ್ಯಮಗಳು ತುಂಬಾ ಮುಂದಿವೆ,
ನಾವು ಕೇಳುವ ಸುದ್ದಿಗಳ ಸತ್ಯಾಸತ್ಯಗಳ ಬಗ್ಗೆ ನಾವು ಶೋಧಿಸಬೇಕಿದೆ, 
ನಾವು ನೋಡುವ ಸುದ್ದಿಯನ್ನು ಸಹ ನಂಬುವಂತಿಲ್ಲ ತಿರುಚಲಾಗಿರುತ್ತೆ.
ಹಾಗೆ ಇಂದಿಗೇ ಸಂಬಂಧವೇ ಪಡದ ಯಾವುದೋ ಹಳೆಯ ಸುದ್ದಿಗಳು ಎಲ್ಲ ಈಗ ಹೊರಬರುತ್ತಿವೆ. 
ಮೂರುವರ್ಷದ ಹಿಂದಿನ ಮಕ್ಕಳಿಗೆ ಪೋಲಿಯೋ ದ್ರಾಪ್ಸ್ ಹಾಕಿಸಿದ ಸುದ್ದಿ, ಸ್ವತಂತ್ರಪೂರ್ವದಲ್ಲಿ ಯಾವ ಯಾವ ನಾಯಕರು ಏನು ಮಾಡಿದರು ಅನ್ನುವ ಸುದ್ದಿ ಬ್ರೀಟಿಷರಿಗೆ ಯಾರು ಕ್ಷಮಾಪಣ ಬರೆದುಕೊಟ್ಟರು ಅನ್ನುವ ಸುದ್ದಿ, ಹಾಗೆ ಇಂದಿನ ನಾಯಕರೊಬ್ಬರ ತಾತನೊ ಮುತ್ತಾತನೋ ಹಿಟ್ಲರರ ಹಿಂಬಾಲಕರಾಗಿದ್ದರು ಅನ್ನುವ ಸುದ್ದಿ, ರಾಜಕೀಯಕ್ಕಿಂದ ಮೊದಲು ಯಾರು ಯಾರು ಏನು ಮಾಡುತ್ತಿದ್ದರು ಎನ್ನುವ ಸುದ್ದಿಗಳು ಎಲ್ಲವೂ ಪ್ರಧಾನ್ಯತೆ ಪಡೆಯುತ್ತಿವೆ. ಕಾಂಗ್ರೆಸ್ ನಾಯಕಿಯ ತಾತ ಏನು ಮಾಡುತ್ತಿದ್ದರು ಅನ್ನುವದರಿಂದ ಹಿಡಿದು ವಲ್ಲಬಾಯಿಪಟೇಲರಾಗಲಿ ಅಥವ ಗಾಂಧಿಯನ್ನು ಕೊಂದವರು ಅರ್ ಎಸ್ ಎಸ್ ನಲ್ಲಿದ್ದರೋ ಎನ್ನುವುದು ಎಲ್ಲ ಸುದ್ದಿಗಳು ಹೊರಬರುತ್ತಿವೆ. 
ಇವೆಲ್ಲ ಏಕೆ ಹೊರಬರುತ್ತಿವೆ ಅನ್ನುವುದು ಸಹ ಅರ್ಥಮಾಡಿಕೊಳ್ಲಬಹುದಾದ ವಿಷಯವೆ . 
ಆದರೆ ಈ ಎಲ್ಲ ಸುದ್ದಿಗಳು ಸೃಷ್ಟಿಸಲ್ಪಟ್ಟವು ತಿರುಚಲ್ಪಟ್ಟವು , ಅರ್ಥಕೆಡಿಸಲ್ಪಟ್ಟವೂ , ಇನ್ನು ಏನೇನೊ ಆಗಿರುತ್ತದೆ ಚುನಾವಣೆಯ ನಂತರ ಏತಕ್ಕೂ ಬಾರದ ಚುನಾವಣ ಭಿತ್ತಿಪತ್ರಗಳಂತೆ ಈ ಸುದ್ದಿಗಳು ಸಹ.
ಎಲ್ಲರನ್ನು ಗೊಂದಲದಲ್ಲಿ ಕೆಡವಿ, ತಾವು ಓಟು ಪಡೆಯುವ ಹುನ್ನಾರ. 
ನಾವು ಜಾಗೃತರಾಗಬೇಕಿದೆ. ಎಲ್ಲ ಸುದ್ದಿಗಳನ್ನು ಕೇಳುತ್ತ ಆದರೆ ಸುದ್ದಿಗಳ ಮೇಲೆಯೆ ನಮ್ಮ ನಿರ್ದಾರವು ಬದಲಾಗದಂತೆ, ಅಥವ ರೂಪಗೊಳ್ಲದಂತೆ ಎಚ್ಚರವಹಿಸಬೇಕಿದೆ. ಅಮಾಯಕರು ಬಹಳ ಸುಲುಭದಲ್ಲಿ ಮೋಸಹೋಗಬಹುದಾದ ಕಾಲವಿದು. 
ಅಂತರ್ಜಾಲವಂತು ಪ್ರತಿಯೊಬ್ಬರು ತಮ್ಮ ನಿರ್ಧಾರವನ್ನು ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರಲು ಪ್ರಯತ್ನಪಡುತ್ತಿರುವಂತೆ ಕಾಣುತ್ತಿದೆ.
ಎಚ್ಚರ ಎಚ್ಚರ ಎಚ್ಚರ ......
ನಿಮ್ಮದೆ ಅಭಿಪ್ರಾಯವನ್ನು ರೂಪಿಸಿಕೊಳ್ಳಿ, ಮತ್ತೊಂದು ಸುದ್ದಿಯಿಂದ, ಅಭಿಪ್ರಾಯಗಳಿಂದ ಪ್ರಚೋದಿತರಾಗದೆ, ಗೊಂದಲಕ್ಕೊಳಗಾಗದೆ !

Rating
No votes yet

Comments

Submitted by kavinagaraj Sun, 03/16/2014 - 17:01

ಇತ್ತ ದರಿ ಅತ್ತ ಪುಲಿ ಅಂತಹ ಅಭ್ಯರ್ಥಿಗಳು, ಗೆಲ್ಲಬೇಕೆಂದು ಬಯಸುವವರಿಗೆ ಪಕ್ಷದಿಂದ ಟಿಕೆಟ್ಟೇ ಸಿಗದು, ಯಾವ ಪಕ್ಷಕ್ಕೆ ಓಟು ಹಾಕಬೇಕೆಂದಿರುತ್ತೆವೆಯೋ ಆ ಪಕ್ಷದಿಂದ ಠೇವಣಿ ಕಳೆದುಕೊಳ್ಳುವಂತಹ ಅಭ್ಯರ್ಥಿಗಳು, ಎಂದಿನಂತೆ ಜಾತಿ, ಹಣ, ಹೆಂಡಗಳ ಕಾರುಬಾರಿಗೆ ಮರುಳಾಗುವ ಸಾಮಾನ್ಯರು, ಮತದಾರ ಮತದಾನದ ದಿನ ಮಾತ್ರದ ರಾಜ! ಇಂತಹ ಕ್ಷೇತ್ರಗಳೂ ಬಹಳಷ್ಟಿವೆ!