ಎದೆಯರಸ
ಚಿತ್ರ
ನೋಡಿದೊ ಅರಸನೆ ನನ್ನೆದೆ ಕೊತ್ತಲ
ನಾಡಿಯ ಕಲ್ಲಿನ ಗೋಡೆಯ ಸುತ್ತಲ
ಕಣಕಣ ಕರೆತಿದೆ ನಿನ್ನನು ಕೂಗುತ
ಕುಣಿತಿವೆ ಕನಸವು ನನ್ನೊಳ ಮಾಗತ
ಪ್ರೇಮದ ಆನೆಯ ಘೀಳನ ಇಕ್ಕುತ
ಸೀಮೆಯ ಸುಂದರ ಗಡಿಗಳ ಗೆಲ್ಲತ
ಬೇಲಿಯ ಕಟ್ಟಿಸ ತುಡಿತಕೆ ನನ್ನಯ
ಸೋಲುತ ನೆಡೆವೆನು ವಿಜಯಕೆ ನಿನ್ನಯ
ಮೋಹದ ಖತ್ತಿಯ ಕಣ್ಣಲೆ ಬೀಸತ
ದಾಹದಿ ಒಲವಿಲೆ ರಾಜ್ಯವ ಕಟ್ಟುತ
ಬಿತ್ತುತ ಖುಷಿಗಳ ಒಕ್ಕುವ ಮುತ್ತನು
ಸುತ್ತಲ ಬಾನಿಗು ಹಂಚುವ ತುತ್ತನು
ಮನವಿದ ಅಶ್ವವು ಏರುತ ಅಲೆವುದು
ನೆನೆಯತ ನಿನ್ನನು ಬಿತ್ತಿಗೆ ಸೆಲೆವುದು
ಹಬ್ಬುತ ಮಂಜಿನ ಹನಿಗಳ ರಾಶಿಯ
ಮಬ್ಬಿನ ಇಳೆಗಿಡ ತವಕದಿ ರಶ್ಮಿಯ
ಬಿತ್ತಿಯ ಬಾವಕೆ ನಿನ್ನನೆ ಕೆತ್ತಿಸು
ಮುತ್ತುವ ಆಸೆಗೆ ಬಿಸಿಯನ ಹತ್ತಿಸು
ಹೆಜ್ಜೆಯ ಏಳರ ಲಜ್ಜೆಯ ಉಡಿಸಾ
ಗೆಜ್ಜೆಯ ಕಿಣಕಿಣಿ ನಡಿಗೆಯ ತೊಡಿಸಾ
✍ಸಂತೋಷ್ ನಾಗರತ್ನಮ್ಮಾರ
[ಮಂದಾನಿಲ ರಗಳೆ]
Rating