ಎರಡು ದೋಣಿಗಳಲ್ಲಿನ ಪಯಣ

ಎರಡು ದೋಣಿಗಳಲ್ಲಿನ ಪಯಣ

ಬಹುಶಃ ಎಲ್ಲ ಕೆಲಸಕ್ಕೆ ಹೋಗುವ ತಾಯಂದಿರಿಗೂ ಈ ರೀತಿ ಅನಿಸಿರಲೂ ಬಹುದು. ಒಂದು ಮಗುವಿನ ತಾಯಿಯಾದ ಮೇಲೆ ಮನೆ ಹಾಗೂ ಕಚೇರಿಯನ್ನು ನಿಭಾಯಿಸಿಕೊಂಡು ಹೋಗುವುದು ಒಂದು ಸವಾಲೇ ಸರಿ. ಹಿರಿಯರು ಜೊತೆಯಲ್ಲಿ ಇಲ್ಲದೆ ಇರುವುದು, ನಮ್ಮ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸುತ್ತದೆ. ಮಗುವಿನ ಪ್ರತಿಯೊಂದು ಕೆಲಸಕ್ಕೂ ಕೆಲಸದವರನ್ನು ಅವಲಂಬಿಸಬೇಕು, ಎಲ್ಲಿ ಮಗುವು ಅಮ್ಮನಿಗಿಂತ, ಕೆಲಸದ ಆಂಟಿಯನ್ನೇ ಹಚ್ಚಿಕೊಂಡು ಬಿಡುತ್ತದೋ ಎಂದು ಕಾಡುವ ಸದಾಕಾಲದ ಭಯ. ಮಗುವು ಅಮ್ಮನನ್ನು ಮಿಸ್ ಮಾಡಿಕೊಂಡರೆ ಒಂಥರಾ ಸಂಕಟ, ಮಿಸ್ ಮಾಡಿ ಕೊಳ್ಳದಿದ್ದರೆ ಅದಕ್ಕೆ ನನ್ನ ಅಗತ್ಯವಿಲ್ಲವೇನೋ ಎಂಬ ಭಯ, ಹೀಗೇ. ಸೋಮವಾರದಿಂದ ಶುಕ್ರವಾರದವರೆಗೆ ಎಲ್ಲದಕ್ಕೂ ಧಾವಂತ, ಶನಿವಾರ ರವಿವಾರ ಮನೆಯ ಕ್ಲೀನಿಂಗ್, ವಿಶೇಷ ತಿಂಡಿ, ಅಡುಗೆ ಇದರಲ್ಲೇ ವ್ಯಸ್ಥ, ಮಗುವಿಗೆ ಎಂದು ವಿಶೇಷವಾಗಿ ಸಮಯ ಮೀಸಲಿಡುವುದೂ ಕೆಲವೊಮ್ಮೆ ಸಾಧ್ಯವಾಗದೆ ಹೋಗಬಹುದು,ಎಲ್ಲರಂತೆ ಹಬ್ಬ ಹರಿದಿನಗಳನ್ನು ಮಾಡಲು ಕೂಡ ಆಗದು. ಇದನ್ನೆಲ್ಲ ನೋಡಿದಾಗ, ನಮ್ಮೆಲ್ಲ ಅಮ್ಮಂದಿರಂತೆ ಕೆಲಸಕ್ಕೆ ಹೋಗದೆ ಮನೆಯಲ್ಲೇ ನೆಮ್ಮದಿಯಾಗಿರುವುದೆ ಸೂಕ್ತ ಅಂತ ಕೆಲವೊಮ್ಮೆ ಅನ್ನಿಸಿದರೂ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೆಲಸಕ್ಕೆ ಹೋಗುವ ಅನಿವಾರ್ಯತೆ, ಹೀಗೆ ಎರಡು ದೋಣಿಗಳಲ್ಲಿ ಪಯಣಿಸುತ್ತಾ, ಕೊನೆಗೆ ಪರಿಪೂರ್ಣ ಗೃಹಿಣಿ, ಪತ್ನಿ, ಅಮ್ಮ ನಾಗಲೂ ಕೂಡ ಸ್ಸಾಧ್ಯವಿಲ್ಲದುದಕ್ಕೆ ಖೇದವೆನಿಸುತ್ತದೆ.

Rating
No votes yet

Comments