ಎರಡು ವಡೆಯನ್ನು ಕಡಿದು ತಿನ್ನುವೆನು

ಎರಡು ವಡೆಯನ್ನು ಕಡಿದು ತಿನ್ನುವೆನು

ಜಾಕಿ ಚಿತ್ರದ ಎರಡು ಜಡೆಯನ್ನು ಎಳೆದು ಕೇಳುವೆನು ಹಾಡಿಗೆ ಸಾಹಿತ್ಯ ಬದಲಾಯಿಸಿ ಬರೆದಿದ್ದೇನೆ. ಇದು ಕೇವಲ ಹಾಸ್ಯಕ್ಕಾಗಿ

 

ಹುಡುಗ : ಎರಡು ವಡೆಯನ್ನು ಕಡಿದು ತಿನ್ನುವೆನು ನೀ ಸ್ವಲ್ಪ ತಿನಬಾರದೆ  

ಎರಡು ವಡೆಯನ್ನು ನಾವಿಬ್ಬರು ಒಂದೇ ತಟ್ಟೇಲಿ ತಿನಬಾರದೆ..

ನೀ ದೂರ ನಿಂತಾಗ ಬಾ ಎಂದು ನಾ ನಿನ್ನ ಕೂಗೋದೆ ಚಟವಲ್ಲವೇ...

ಇಷ್ಟೊಂದು ರುಚಿಯಾದ ವಡೆಯನ್ನು ತಿನದಿದ್ದರೆ ನಿನಗೇನೆ ನಷ್ಟವಲ್ಲವೇ ...

ಹುಡುಗಿ : ಎರಡು ವಡೆಯನ್ನು ನೀ ತಿಂದರೆ ಇಂದು, ಕೆಡಿಸುವುದು ನಿನ ಹೊಟ್ಟೆಯ...

ನೋಡಿದೆಯಾ ಬಾಂಡ್ಲಿ, ನೋಡಿದೆಯಾ ಹಿಟ್ಟು ಎಂದಿನದೋ ಆ ಎಣ್ಣೆಯು....

ಹುಡುಗ : ಹಸಿವಾಗಿ ನಾ ನಿಂತ ಘಳಿಗೆಯಲಿ ವಡೆಯೊಂದು ತಾನಾಗಿ ಇರುವಾಗಲೇ

ಬಿಸಿಯಾಗಿ ಘಮ್ಮೆಂದು ವಾಸನೆಯು ಬರುತಿರಲು ನೀ ಸುಮ್ಮನೆ ತಿನಬಾರದೆ 

ಹುಡುಗಿ : ನೀನಿಲ್ಲದಾಗ ನಾ ಕಂಡ ದೃಶ್ಯ ಅತಿಯಾಗಿ ನೆನಪಾಗಿದೆ

ಬಿಡದೆ ಕೈಯನ್ನು ಎಲ್ಲೆಲ್ಲೋ ತಿಕ್ಕಿ ವಡೆಯನ್ನು ಅವ ಮಾಡಿದ

ಎಲ್ಲಾ ತಿಂಡಿಯನು ಒಂದೇ ಎಣ್ಣೇಲಿ ಕರಿಯೋದು ಸರಿಯಿಲ್ಲವೋ

ಹುಡುಗಿ : ನಾ ತುಂಬಾ ನಾಜೂಕು ಎನ್ನೋದು ನಿನಗಿನ್ನೂ ಸರಿಯಾಗಿ ಅರಿವಿಲ್ಲವೇ...

ಆಸೆಯಲಿ ನಿನ್ನಂತೆ ನಾ ತಿಂದು ಹೊಟ್ಟೆಯನು ನಾನೀಗ ಕೆಡಿಸಿಕೊಳ್ಳಲೇ

ಹುಡುಗ : ನಿನ್ನಿಂದ ಹಸಿವು ನಿನ್ನಿಂದ ಮುನಿಸು ನನಗಿನ್ನೂ ಸಾಕಾಗಿದೆ

ಎರಡು ವಡೆಯನ್ನು ಕಡಿದು ತಿನ್ನುವೆನು, ನಿನ್ನ ಕೇಳಿ ತಪ್ಪು ಮಾಡಿದೆ

ಎರಡೂ ವಡೆಯನ್ನು ನಾನೊಬ್ಬನೇ ತಿಂದು ಹಾಯಾಗಿ ಮಜ ಮಾಡುವೆ  

ನೀ ದೂರ ನಿಂತಾಗ ಬಾ ಎಂದು ನಿನ್ನನ್ನು ನಾನೆಂದೂ ಕೂಗೋದಿಲ್ಲ

ಇಷ್ಟೊಂದು ರುಚಿಯಾದ ವಡೆಯನ್ನು ತಿನದಿದ್ದರೆ ನಿನಗೇನೆ ನಷ್ಟವಲ್ಲವೇ


ಹುಡುಗಿ : ವಡೆಯಾದರು ತಿನ್ನು, ಇನ್ನೇನಾದರು ತಿನ್ನು ನನ್ನನ್ನು ಕರಿಬೇಡವೋ

ಹೊಟ್ಟೆಯ ಕೆಡಿಸಿಕೋ ಆರೋಗ್ಯವ ಕೆಡಿಸಿಕೋ ನನಗೇನೂ ನೋವಿಲ್ಲವೋ
Rating
No votes yet

Comments