ಎರಡು ಶಬ್ದಗಳು- ಸೋಡಾಚೀಟಿ , ಪೂರ್ವಗ್ರಹ

ಎರಡು ಶಬ್ದಗಳು- ಸೋಡಾಚೀಟಿ , ಪೂರ್ವಗ್ರಹ

೧) ಸಾಮಾನ್ಯವಾಗಿ ಬೆಂಗಳೂರು ಕಡೆಯ ಪತ್ರಿಕೆಗಳಲ್ಲಿ , ಟೀವೀ ಚಾನೆಲ್ ಗಳಲ್ಲಿ , ಮತ್ತೆ ಜನ ಕೂಡ ಮಾತಾಡುವಾಗ ಡೈವೋರ್ಸ್ ಗೆ ಸೋಡಾಚೀತಿ ಅಂತ ಬಳಸುತ್ತಾರೆ . ಸರಿಯಾದ ಶಬ್ದ ಸೋಡ್ ಚೀಟಿ ಅಥವಾ ಸೋಡಚೀಟಿ ಆಗಿದೆ .

ಸೋಡ್ ಅಂದ್ರೆ ಬಿಡುವದು .. ಹಿಂದಿ ಛೋಡ್ , ಮರಾಠೀ ಸೋಡ್ ಆಗಿ ಸೋಡ್ ಚೀಟಿ ಶಬ್ದ ಬಂದಿದೆ . ಇನ್ನಾದರೂ ಸಂಬಂಧಪಟ್ಟವರು ಗಮನಿಸಿ , ತಿದ್ದಿಕೊಳ್ಳುವರೇ ?

೨)
ಪೂರ್ವಾಗ್ರಹ ಅಂತ ಈ ವರೆಗೆ ಎಲ್ರೂ ಬರೀತಿದ್ರು . ಅದೇಕೋ ಪೂರ್ವಗ್ರಹ ಅಂತ ಎಲ್ಲೆಡೆ ಬರೀತಿದ್ದಾರೆ . ಯಾವುದು ಸರಿ ? ಯಾರಾದರೂ ಬಲ್ಲವರು ತಿಳಿಸುವಿರಾ ?

Rating
No votes yet

Comments