ಎರಡು ಸಾಲು

ಎರಡು ಸಾಲು

-೧-


ಬಿಸಿಲ ಬೇಗೆಯಲಿ ಕಾದ
ಬಸವಳಿದು ಒಣಗಿದ್ದ
ಇಳೆಗೆ ತಂಪನೆರೆಯುವ
ಮಳೆಯಾಗಿ ಬಂದೆ ನೀನು

ಮಣ್ಣಲ್ಲಿ ಒಂದಾಗಿ
ಹೇಗೋ ಶಾಂತವಾಗಿದ್ದೆ 
ಕಾಯೊಡೆದು ಚಿಗುರಿದೆ ನಾನು
ನಿನ್ನ ಸವಿಸ್ಪರ್ಶದಿಂದ

 

-೨-

ಒಮ್ಮೊಮ್ಮೆ ಕಾದಾಡಿ
ಹಿಂದಿಂದೆ ಓಡಾಡಿ
ಮತ್ತೊಮ್ಮೆ ಗುದ್ದಾಡಿ
ಮರುಕ್ಷಣವೇ ಮುದ್ದಾಡಿ
ವೈಷಮ್ಯಗಳ ನಡುವೆಯೂ
ಒಂದಾಗಿ ಬಾಳುವ
ನಾನು ನೀನು
ಅಕ್ವೇರಿಯಂ ಒಳಗಿನ
ಜೋಡಿ-ಮೀನು

Rating
No votes yet

Comments