ಎರಡು ಸುಭಾಷಿತಗಳು

ಎರಡು ಸುಭಾಷಿತಗಳು

ಅದೇನೋ ಕೆಲವು ಅನುವಾದಗನ್ನು ಮಾಡತೊಡಗಿದಾಗ ಯಾವುದೋ ಒಂದು ಪದ ಹಿಡಿಸದೇ ಹೋದರೆ,  ಪ್ರಕಟಿಸದೇ ಹಾಗೇ ಕರಡಾಗೇ ಇಟ್ಟುಬಿಡುವುದು ನನ್ನ ರೂಢಿ. ಇವತ್ತು ಹಿಂದಿನ ಕರಡುಗಳನ್ನೆಲ್ಲ ನೋಡುವಾಗ ಒಂದೆರಡನ್ನ ಸರಿಮಾಡಿದ್ದಾಯ್ತು. ಅದನ್ನ ಒಟ್ಟಿಗೇ ಹಾಕಿದ್ದೇನೆ.


ಹೆಜ್ಜೆ ಇಡುವ ಮೊದಲು..

 

ಗಟ್ಟಿ ನೆಲದ ಮೇಲೆ ಮುಂಗಾಲಿಟ್ಟೇ
ಎತ್ತುವರು ಹಿಂಗಾಲನು ಜಾಣರು;
ಮತ್ತೆ ಮುಂಬರುವುದ ನೋಡದೆಲೆ
ಇದ್ದೆಡೆಯನು ನೀ ತೊರೆಯದಿರು!

ಸಂಸ್ಕೃತ ಮೂಲ:

ಚಲತ್ಯೇಕೇನ ಪಾದೇನ ತಿಷ್ಠತ್ಯೇಕೇನ ಪಂಡಿತಃ |
ನಾಸಮೀಕ್ಷ್ಯಾಪರಂ ಸ್ಥಾನಂ ಪೂರ್ವಮಾಯಾತನಂ ತ್ಯಜೇತ್ ||



ಬೆಂಕಿಯಲಿ ಬಿದ್ದ ಚಂದನ

 

ಅಸು ನೀಗುವ ವೇಳೆಯಲೂ
ಎಸಗಬೇಕುಳಿದವರಿಗೆ ಒಳಿತು!
ಬಿಸುಟರೂ ಉರಿಯಲಿ ಚಂದನವ
ಸೂಸದೆ ಇರುವುದೆ ನರುಗಂಪು?

ಸಂಸ್ಕೃತ ಮೂಲ:

ಪ್ರಾಣನಾಶೇSಪಿ ಕುರ್ವೀತ ಪರೇಷಾಂ ಮಾನವೋ ಹಿತಂ |
ದಿಶಃ ಸುಗಂಧಯತ್ಯೇವ ವಹ್ನೌ ಕ್ಷಿಪ್ತೋSಪಿ ಚಂದನಃ ||

 

-ಹಂಸಾನಂದಿ

Rating
No votes yet

Comments