ಎಲ್ರಿಗೂ ವಿಶೇಷವಾಗಿ ಕಹಳೆ ಊದಬೇಕೆ?
ಇತ್ತೀಚೆಗೆ
"ಯೂನಿಕೋಡ್ ಎನೇಬಲ್ ಮಾಡೋದು ಹೇಗೆ ಸಾರ್?"
"ವಿಂಡೋಸ್ ಎಕ್ಸ್ ಪಿ ನಲ್ಲಿ ಕನ್ನಡ ಬರುತ್ತಲೇ ಇಲ್ವಲ್ಲ ಸಾರ್, ಒತ್ತಕ್ಷರಗಳು ಸರಿಯಾಗಿ ಬರುತ್ತಿಲ್ಲ"
"ನಿಮ್ಮ ಸೈಟನ್ನು ಕಂಗ್ಲಿಷಿನಲ್ಲಿ ಹಾಕಿಬಿಡಿ, ನಾವು ವಿಂಡೋಸ್ %$#% ಬಳಸೋದು, ಅದರಲ್ಲಿ ನಿಮ್ಮ ಯೂನಿಕೋಡ್ ಕಾಣೋದಿಲ್ಲ"
"ಮ + ಊ ಯಾಕೋ ಸರಿಯಾಗಿ ಬರುತ್ತಿಲ್ಲ, ಸಾರ್"
"ನಿಮ್ಮ ವೆಬ್ಸೈಟು ಸರಿಯಾಗಿಲ್ಲ, ನೋಡ್ರಿ. ಕನ್ನಡ ಒತ್ತಕ್ಷರಗಳೇ ಕಾಣೋದಿಲ್ಲ. ತಪ್ಪುತಪ್ಪಾಗಿ ಕನ್ನಡ ಉಪಯೋಗಿಸುತ್ತಿದ್ದೀರಿ. ಕನ್ನಡವನ್ನೇ ಹಾಳು ಮಾಡ್ತಾ ಇದ್ದೀರಿ"
ಎಂದೆಲ್ಲ ಸುಮಾರು ಇ-ಮೇಯ್ಲುಗಳು ಬಂದುಬೀಳುತ್ತಿವೆ.
ಇವರಿಗೆಲ್ಲ ಎಷ್ಟು ಬಾರಿ ಹೇಳೋದು? ಅಷ್ಟೊಂದು ಸಮಯ ವ್ಯಯ ಮಾಡಿ ಹೆಲ್ಪ್ ಡಾಕ್ಯುಮೆಂಟ್ ಒಂದು ಪೇರಿಸಿಟ್ಟರೆ
"ನನಗದನ್ನು ಓದಲಾಗದು. ನೀವೇ ಬಾಯ್ಬಿಟ್ಟು ಹೇಳಿ"
ಎಂದರೆ ಹೇಗೆ?
ಎಲ್ಲರಿಗೂ ವಿಶೇಷವಾಗಿ ಕಹಳೆ ಊದಬೇಕೆ?
ಪ್ರತಿಯೊಬ್ಬರಿಗೂ ಉದ್ದುದ್ದ ಇ-ಮೇಯ್ಲುಗಳನ್ನು ಕಳಿಸಿ ಕಳಿಸಿ ಬೇಸರವಾಗಿ ಹೋಗಿದೆ.
ಎಲ್ಲರಿಗೂ ಯೂನಿಕೋಡ್ ಬಗ್ಗೆ ತಿಳಿಯುವಂತೆ, ಪೆದ್ದು ಪೆದ್ದಾಗಿ "ಕನ್ನಡವನ್ನೇ ಹಾಳು ಮಾಡುತ್ತಿದ್ದೀರಿ" ಎಂದು ದೂರದಂತೆ ಮಾಡುವುದು ಹೇಗೆ? ಎಲ್ಲರಿಗೂ ಬರೆದಿರುವ ಡಾಕ್ಯುಮೆಂಟೇಶನ್ ಓದುವಂತೆ ಮಾಡುವುದು ಹೇಗೆ?
ಓದುಗರು ನಿಮ್ಮ ಅಭಿಪ್ರಾಯಗಳೊಂದಿಗೆ, ಸಲಹೆಗಳೊಂದಿಗೆ ಭಾಗವಹಿಸಿ ಸಹಾಯ ಮಾಡಿ. ಚರ್ಚೆ ನಡೆಯಲಿ.
Comments
ಕನ್ನಡ ಬಳಕೆಯ ಬಗೆಗೆ ಆಸಕ್ತಿ
ಮೊದಲ ಹಲ್ಲು