ಎಲ್ಲಾ ಮರೆತಿರುವೆನೆಂದು

ಎಲ್ಲಾ ಮರೆತಿರುವೆನೆಂದು

ನನ್ನೊಂದಿಗಿಲ್ಲದ ನಿನಗೆ,

ನನ್ನ ಕಳಕಳಿ ಏಕೆ,

ಬದುಕುವೆನು ಬಾನನ್ನು ಮುಟ್ಟುವ ರೀತಿ,

ನೀ ನೋಡುತ್ತಿರು ದೂರದಿಂದಲೇ,

ಅನುಭವಕ್ಕೆ ಬಾರದ ಸ್ಥಿತಿ ನಿನ್ನದು.

 

ಹೋಗುವಾಗ ಹೇಳಿ ಹೋಗದ,

ನಿನಗೇಕೆ ನನ್ನ ಕಳಕಳಿ.

 

ಮರೆತಿರುವೆನು ಎಲ್ಲವನ್ನು,

ಎಲ್ಲವನ್ನು ಅಂದರೆ ಎಲ್ಲವನ್ನು,

ನಿನ್ನ ನಗುವನ್ನು , ಜೊತೆಗೆ ನನ್ನದನ್ನು,

ನಿನ್ನ ಅಕ್ಕರೆಯನ್ನು,

ಕಾಫಿಗೆ ನೀ ಹಾಕುತ್ತಿದ್ದ ಜಾಸ್ತಿ ಸಕ್ಕರೆಯನ್ನು.

 

ಮರೆತಿರುವೆನು ನಿನ್ನ ರಂಗೋಲಿಯ,

ಮುಂಜಾವಿನ ಚೆಲುವನ್ನು.

 

ಮರೆತಿರುವೆನು ನಿನ್ನ,

ಮೋಹಿಸುವ ಪರಿಯನ್ನು.

 

ಎಲ್ಲಾ ಮರೆತಿರುವೆನೆಂದು,

ನಿನಗೆ ಹೇಳಲು,

ಮತ್ತೊಮ್ಮೆ ಬಿಚ್ಚಿ ಕುಂತಿರುವೆನು,

ಮರೆತ ಎಲ್ಲಾ ನೆನಪುಗಳನ್ನು.

Rating
No votes yet

Comments