ಎಲ್ಲಿದ್ದೆ ನೀನು?
ಇಷ್ಟು ದಿನ ಎಲ್ಲಿದ್ದೆ ನೀನು?
ಈಗ ಕೇಳಲು ಬಂದಿರುವೆ ಹೇಗಿದ್ದೀಯೆಂದು.
ನೀನಿಲ್ಲದೆ ಕಳೆದಿವೆ ದಿನಗಳು
ಒಂಟಿತನದ ಕತ್ತಲೆಯಲ್ಲಿ.
ನಿನ್ನ ನಂತರ ನನ್ನಿಂದಲೂ
ಪ್ರೀತಿಸಲಾಗಲಿಲ್ಲ
ಒಡೆದ ಹೃದಯ ಸಂತೆಯಲಿ
ಮಾರಾಟವೂ ಆಗಲಿಲ್ಲ!
ವರುಷಗಳವರೆಗೆ ನನ್ನ ಕಾಯುವಿಕೆ ನಿಲ್ಲಲೆಯಿಲ್ಲ
ಬದುಕು ಬಿಡು, ಸಾವು ಕೂಡ ದಕ್ಕಲಿಲ್ಲ.
Rating