ಎಲ್ಲಿ ಪ್ರಳಯ ಆಗದೇ ಇದ್ದರೂ ಬೆಂಗಳೂರಿನಲ್ಲಿ ಮಾತ್ರ

ಎಲ್ಲಿ ಪ್ರಳಯ ಆಗದೇ ಇದ್ದರೂ ಬೆಂಗಳೂರಿನಲ್ಲಿ ಮಾತ್ರ

ನಮ್ಮ ಅಪಾರ್ಟ್‌ಮೆಂಟ್ ಹತ್ತಿರ ಖಾಲಿ ಇದ್ದ ಸೈಟಿನಲ್ಲಿ ಇದ್ದಕಿದ್ದಂತೆ ಮನೆಗಳು ಏಳಲಾರಂಭಿಸಿದವು.


ಇಷ್ಟು ದಿನ ಖಾಲಿ ಬಿಟ್ಟಿದ್ದ ಸೈಟು ಇದ್ದಕಿದ್ದಂತೆ ಹತ್ತಾರು ಮನೆಗಳ ಅಡಿಪಾಯಕ್ಕೆ ಸಿದ್ದವಾಗಿರುವುದನ್ನ ಕಂಡು ಅಚ್ಚರಿಯಾಗಿ ವಾಚ್‍ಮನ್‍೬ನ ಕೇಳಿದೆ


"ಏನಪ್ಪ ಇದ್ದಕಿದ್ದ ಹಾಗೆ ಮನೆ ಕಟ್ಟಿಸ್ತಾ ಇದಾರೆ "


"ಇಲ್ಲಾ ಮೇಡಮ್ ಅದೇನೋ ೨೦೧೨ ರಲ್ಲಿ ಪ್ರಳಯ ಆಗುತ್ತಲ್ಲಾ ಅದಕ್ಕೆ ಕಟ್ಟಿಸ್ತಾ ಇದಾರೆ" ಎಂದ


"ಅರೆ ಪ್ರಳಯಕ್ಕೂ ಮನೆ ಕಟ್ಟಿಸೋಕೂ ಏನಪ್ಪ ಸಂಭಂಧ "ಎಂದೆ


"ಗೊತ್ತಿಲ್ಲ ಮೇಡಮ್" ಎಂದ


ಕೊನೆಗೆ ನಮ್ಮ ಬಿಲ್ಡಿಂಗ್ ಮ್ಯಾನೇಜರ್‌ನ್ ಕೇಳಿದೆ


"ಏನಪ್ಪ  ಓನರ್   ಇದ್ದಕ್ಕಿದ್ದ ಹಾಗೆ ಇಂತಾ ಕಿಷ್ಕಿಂದೆ ಥರಾ ಮನೆ ಕಟ್ಟಿಸ್ತಾ ಇದಾರೆ. ಈಗಾಗಲೆ ರಿಸೆಷನ್ ಟೈಮ್ ಅದರಲ್ಲಿ ಈಗಾಗಲೆ ಎಷ್ಟೊಂದು ಮನೆ ಖಾಲಿ ಇದೆ. ಮತ್ತ್ಯಾಕೆ ಮನೆ ಕಟ್ಟಿಸ್ತಾ ಇದಾರೆ ನಿಮ ಓನರ್. "


ಅವನು


"ಮೇಡಮ್ ಗೊತ್ತಿಲ್ವಾ ೨೦೧೨ರಲ್ಲಿ ಪ್ರಳಯ ಆಗುತ್ತಲ್ವಾ?"


"ಗೊತ್ತು ಅದಕ್ಕೂ ಇದಕ್ಕೂ ಏನ್ ಸಂಬಂಧ"


"ಟಿವಿ ೯ನಲ್ಲಿ ಎಲ್ಲೆಲ್ಲಿ ಪ್ರಳಯ ಆಗುತ್ತೆ ಅಂತ ತೋರಿಸಿದರೆ. ಮತ್ತೆ ಮತ್ತೆ ಅದಬ್ಬೆ ಸುವರ್ಣಾನಲ್ಲೂ ಹೇಳಿದಾರೆ. ಅಲ್ಲೆಲ್ಲೂ ಬೆಂಗಳೂರು ಹೆಸರೇ ಇಲ್ಲ . ಹಾಗಿದ್ದ ಮೇಲೆ ಬೆಂಗಳೂರು ಸೇಫ್ ಅಂತಾ ಅಯ್ತು.ಇನ್ನೇನು ಎಲ್ಲಾ ಊರೋರು ಬೆಂಗಳೂರಿಗೆ ಬರೋದಂತೂ ಗ್ಯಾರೆಂಟಿ . ಪ್ರಳಯ ಆಗುತ್ತೋ ಇಲ್ವೋ  ನಮ್ಮೂರಲ್ಲಂತೂ ಜನ ಜಾಸ್ತಿ ಬಂದು ಸೇರ್ತಾರೆ ಹೆದರ್ಕೊಂಡು.  ಮನೆಗೆ ಡಿಮ್ಯಾಂಡ್ ಅಂತೂ ಗ್ಯಾರೆಂಟಿ ಜಾಸ್ತಿ ಆಗುತ್ತೆ." ಅದಕ್ಕೆಈಗಲೇ ಎಲ್ಲಾ ಏರ್ಪಾಡು


ಎಲಾ ಇವನಾ ಎಂದುಕೊಂಡು ಯಾವ ಕಾರ್ಪೋರೇಟುಗಳಿಗೂ ಕಡಿಮೆ ಇಲ್ಲದ ವ್ಯಾಪಾರಿ ಬುದ್ದಿ ಎಂದುಕೊಂಡೆ.


ನಂತರ ಯೋಚಿಸಿದೆ


ಈ ಟಿವಿಯಲ್ಲಿ ಪದೇ ಪದೇ ಪ್ರಳಯದ ಹೆದರಿಕೆ ಹುಟ್ಟಿಸುತ್ತಿರೋದೇನೋ ಸರಿ ಎಂದಿಟ್ಟುಕೊಳ್ಳೋಣ . ಆದರೆ ಪ್ರಳಯವಾಗುವ ಸ್ಥಳಗಳ ಕುರಿತು ಹೇಳುವಾಗ ಸ್ವಲ್ಪ ಯೋಚಿಸಬಾರದೇ.


ಈಗಾಗಲೇ ಒಂದು ಕೋಟಿದಾಟಿರುವ ಬೆಂಗಳೂರು ಮತ್ತಷ್ಟು ಜನರನ್ನು ಹೊರುವ ತಾಕತ್ತನ್ನು ಹೊಂದಿದೆಯೇ?


ಈಗಾಗಲೆ ಆಕಾಶ ದಾಟಿರುವ ನಿವೇಶನ , ಬಾಡಿಗೆ ಬೆಲೆಗಳು ಮತ್ತಷ್ತು ಏರುವುದಿಲ್ಲವೇ?


೨೦೧೨ಲ್ಲಿ  ಎಲ್ಲ್ಲೆಲ್ಲಿ ಪ್ರಳಯವಾಗುವುದೋ  ಗೊತ್ತಿಲ್ಲ. ಆದರೆ ಬೆಂಗಳೂರೆಂಬ ಬೆಂಗಳೂರು ಮಾತ್ರ ಜನಪ್ರಳಯಕ್ಕೆ ಈಡಾಗುವುದಂತೂ ಖಂಡಿತಾ

Rating
No votes yet

Comments