ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೨

ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೨

(೧೬೬) ಗುರ್ತಿನ ಚೀಟಿ ಇಲ್ಲದ ನೀವು ಅಸ್ತಿತ್ವದಲ್ಲೇ ಇಲ್ಲ! ನೀವು ನೀವಾಗಿರಬೇಕಿದ್ದರೆ ನಿಮಗೊಂದು ಹೆಸರು ಇರಲೇಬೇಕು: ಒಬ್ಬ ನೆಂಟ, ಒಬ್ಬ ನಾಗರೀಕ, ಚಾಲಕ, ಕೆಲಸಗಾರ, ರೋಗಿ ಅಥವ ವೀಸಾ ಕಾರ್ಡ್ ಹೊಂದಿರುವಾತ--ಇತ್ಯಾದಿ.


(೧೬೭) ಹಳೆಯ ಶೈಲಿಯಲ್ಲಿ ಹೊಸ ವಿಷಯಗಳನ್ನು ಹೇಳುವುದನ್ನು ಜ್ಞಾನವೆನ್ನುತ್ತೇವೆ. ಹೊಸ ಶೈಲಿಯಲ್ಲಿ ಹಳೆಯ ವಿಷಯಗಳನ್ನು ಹೇಳುವುದನ್ನು ಜಾಹಿರಾತು ಎನ್ನುತ್ತೇವೆ!


(೧೬೮) ಕ್ಷಮಿಸಿಬಿಡುವುದೆಂದರೆ ಮರೆತುಬಿಡುವುದು ಎಂದರ್ಥ. ನೆನಪಿಸಿಕೊಳ್ಳುವುದು ಎಂದರೆ ಪ್ರೀತಿಸುವುದು. ಮರೆಯಬೇಕೆಂದಿರುವುದೇನೆಂದು ನೆನಪಿಟ್ಟುಕೊಳ್ಳುವುದು ಒಂದು ದುರಂತ. ನೆನಪಿಟ್ಟುಕೊಳ್ಳಬೇಕಿರುವುದನ್ನು ಮರೆತುಬಿಟ್ಟರೆ ಅದು ಹಾಸ್ಯವಾಗುತ್ತದೆ.

Rating
No votes yet

Comments