ಎಲ್ಲೆಲ್ಲೂ ಇ-ಮೇಲು, ಆ ಮೇಲು…!

ಎಲ್ಲೆಲ್ಲೂ ಇ-ಮೇಲು, ಆ ಮೇಲು…!

ಪ್ರತ್ಯೇಕತೆಯ ಪರಮಾವಧಿ: ಕಂಪ್ಯೂಟರ್ ಎದುರು ಅಕ್ಕಪಕ್ಕದಲ್ಲೇ ಕೂತಿದ್ದರೂ ಪರಸ್ಪರ ಸಂಪರ್ಕಕ್ಕೆ ಇ-ಮೇಲ್ ಬಳಸುವುದು.

ಹೇಡಿತನದ ಪರಾಕಾಷ್ಠೆ: ಇಬ್ಬರು ಇ-ಮೇಲ್ ಮೂಲಕವೇ ಜಗಳ ಮಾಡುವುದು.

ಅಸಹಾಯಕತೆಯ ಪರಮಾವಧಿ: ಒಂದು ವಾರವಾದರೂ ಒಂದೇ ಒಂದು ಇ-ಮೇಲ್ ಬಾರದಿರುವುದು.

ಹತಾಶೆಯ ಪರಮಾವಧಿ: ಇ-ಮೇಲ್ ಸರ್ವರ್ ಡೌನ್ (ಸ್ಲೋ) ಆದಾಗ.

ನಿರ್ಲಕ್ಷ್ಯದ ಪರಮಾವಧಿ: ಪ್ರೇಮ ಸಂದೇಶದ ಇ-ಮೇಲ್ ಬರೆದು 'ಸೆಂಡ್ ಆಲ್' ಕ್ಲಿಕ್ ಮಾಡುವುದು.

ಸಾಧನೆಯ ಪರಮಾವಧಿ: ಫ್ರೆಂಡ್‌ಶಿಪ್‌ಗಾಗಿ ಹುಡುಗಿಯೊಬ್ಬಳಿಗೆ ಕಳುಹಿಸಿದ ಇ-ಮೇಲ್‌ಗೆ ರಿಪ್ಲೈ ಬರುವುದು.

ಟೈಂ ಪಾಸ್‌ನ ಪರಮಾವಧಿ: ತನ್ನದೇ ಅಡ್ರಸ್‌ಗೆ ಇ-ಮೇಲ್ ಕಳುಹಿಸುವುದು.

ನಿರೀಕ್ಷೆಯ ಪರಮಾವಧಿ: ಬಡವರಿಗೆ ಒಳಿತಾಗುವಂತಹ ಯೋಜನೆಗಳನ್ನು ಜಾರಿಗೊಳಿಸುವಂತೆ ಸರಕಾರಕ್ಕೆ ಇ-ಮೇಲ್ ಮಾಡುವುದು.

ಪುನರಾವರ್ತನೆಯ ಪರಮಾವಧಿ: ನೀವು ಫಾರ್ವರ್ಡ್ ಮಾಡಿದ ಇ-ಮೇಲ್ ಮತ್ತೊಬ್ಬರ ಮೂಲಕ ನಿಮ್ಮದೇ ಇನ್‌ಬಾಕ್ಸಿಗೆ ಬಂದು ಬೀಳುವುದು.

ಇಂಟರ್ನೆಟ್ ಗೀಳಿನ ಪರಮಾವಧಿ: ನೀವು ಈಜುಕೊಳದಲ್ಲಿ ಈಜುತ್ತಿರುವಾಗ ನೀರಿನಲ್ಲಿ ಮುಳುಗುತ್ತೀರಿ. ಆಗ "HELP" ಎಂದು ಕೂಗುವ ಬದಲು "F1 F1 F1" ಎಂದು ಬೊಬ್ಬಿಡುವುದು.

(avisblog.wordpress.com)

Rating
No votes yet