ಎಳೆಯನ ಚೆಲುವು
ಸೆಳೆದಿಹುದು ಎಳೆಯ ಮುಗುದನ ಚೆಲ್ವ ರೂಪವಿದು
ಕೊಳಲ ನಾದದಿ ತಂಪನೆರೆಯುತಿಹ ಮೊಗದ
ಕಳೆಯಿನಿತು ಬರಲೆನ್ನ ಪದಗಳಲಿ ಅತಿಶಯದಿ
ತಿಳಿಸುತಲಿವನ ಸೊಗವ ತುಸುವಾದರೂ!
ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್ಣಾಮೃತ, ಮೊದಲ ಆಶ್ವಾಸ, ಪದ್ಯ ೭) :
ಕಮನೀಯ ಕಿಶೋರ ಮುಗ್ಧ ಮೂರ್ತೇಃ
ಕಲವೇಣುಕ್ವಣಿತಾರ್ದ್ರಾನನೇಂದೋಃ
ಮಮ ವಾಚಿ ವಿಜೃಂಭತಾಂ ಮುರಾರೇಃ
ಮಧುರಿಂಣಃ ಕಣಿಕಾಪಿ ಕಾಪಿ ಕಾಪಿ
-ಹಂಸಾನಂದಿ
ಚಿತ್ರ ಕೃಪೆ: ಪೂರ್ಣಿಮಾ ರಾಮಪ್ರಸಾದ್
Rating
Comments
ಉ: ಎಳೆಯನ ಚೆಲುವು