ಎಷ್ಟು ಖುಶಿ!

ಎಷ್ಟು ಖುಶಿ!

ರಾತ್ರಿ ಆಕಾಶಕ್ಕೆ ಮುಖ ಮಾಡಿ ನೆಲದ ಮೇಲೆ ಮಲಗಿದ್ದೇ ಗೊತ್ತು

ಬೆಳಗೆದ್ದಾಗ ನನ್ನ ದೇಹವಿಡೀ ಬೇರು ಬಿಟ್ಟಿತ್ತು

ಎಷ್ಟು ಖುಶಿ! ನಾನಿನ್ನು ಚಿಗುರೊಡೆಯಬಹುದು, ಹೂ ಬಿಡಬಹುದು

ನೆರಳು ಕೊಟ್ಟು, ಕಾಯ್ಬಿಟ್ಟು ಹಣ್ಣಾಗಬಹುದು, ಸತ್ತರೆ ಕಟ್ಟಿಗೆಯಾಗಬಹುದು

ಅಹಾ! ಇನ್ನಿಲ್ಲ ನನಗೆ ಯಾವ ಎಲ್ಲೆ; ನಾನಾಗುತ್ತಿದ್ದೇನೆ ಸಮುದಾಯದ ಸ್ವತ್ತು.      
 

Rating
No votes yet