ಏಕಾಂಗಿಯಲ್ಲ ನೀ
ಏಕಾಂಗಿಯಲ್ಲ ನೀ
ಓ ಮುದುಡಿದ ಮನವೇ,
ನೀ ಏಕಾಂಗಿಯಲ್ಲ
ಒಮ್ಮೆ ಈ ಕಡೆ ದೃಷ್ಟಿ
ಹಾಯಿಸಿ ನೋಡು
ನಿನ್ನ ಆ ನಿಷ್ಕಲ್ಮಷ
ಪ್ರೀತಿಗೆ, ಸ್ನೇಹಕ್ಕೆ,
ನಗುವಿಗೆ ಕಾದಿಹವು
ನೂರಾರು, ಸಾವಿರಾರು
ಜೀವಿಗಳು
ನೀನೋರ್ವನೇ
ಎಂಬ ಚಿಂತೆ ಬಿಡು
ಆಕಾಶದೆತ್ತರಕೆ ಏರುವ
ಆಸೆಯ ಏಕೆ ಪಕ್ಕಕ್ಕೆಸೆಯುವೆ?
ಪ್ರಕೃತಿ ಇದೆಲ್ಲವ
ನಿನಗಾಗಿಯೇ
ಸೃಷ್ಟಿಸಿಹಳು
ಯಾವ ಹಣ್ಣನ್ನೂ ಸೃಷ್ಟಿಸುವದಿಲ್ಲ
ತಿನ್ನಲು ತನಗಾಗಿ ವೃಕ್ಷ
ಗಾಳಿಯೂ ಕೇಳದು ಕರವ
ನೆಲ, ಜಲ, ಬೆಳಕು,
ಎಲ್ಲವೂ ಪರರಿಗಾಗಿಯೆ
ತೇಯ್ವವು ತಮ್ಮಿರವ
ನೀನೊಮ್ಮೆ ಕಣ್ತೆರೆದು
ಈ ಜಗವನ್ನೊಮ್ಮೆ ನೋಡು
ನಿನ್ನ ದೃಷ್ಟಿಗೆ ಬೀಳಲೆಂದೇ
ಕಾದಿಹವು ಎಲ್ಲ
ಕಲಿಸಲು ತಮ್ಮ
ಪರರಿಗಾಗಿಯೇ
ಬದುಕುವ ಆ ಗುಣವನ್ನ
ಇನ್ನೇಕೆ ಚಿಂತೆ
ಬಂದು ಬಿಡು ಹೊರಗೆ
ನಿನ್ನ ಮನದ ಚಿಂತೆಯ
ಪಂಜರದಿಂದ ಹೊರಕ್ಕೆ
ನಿನ್ನ ಸ್ವಚ್ಛಂದ ನಿರಭ್ರ ಆಗಸಕೆ
ಪ್ರಕೃತಿಯ ಸುರಮ್ಯ ಶಾಲೆಗೆ
ನಿತ್ಯದ ಈ ಬದುಕಿಗೆ
Rating
Comments
ಉ: ಏಕಾಂಗಿಯಲ್ಲ ನೀ
In reply to ಉ: ಏಕಾಂಗಿಯಲ್ಲ ನೀ by asuhegde
ಉ: ಏಕಾಂಗಿಯಲ್ಲ ನೀ
ಉ: ಏಕಾಂಗಿಯಲ್ಲ ನೀ
In reply to ಉ: ಏಕಾಂಗಿಯಲ್ಲ ನೀ by balaglobal
ಉ: ಏಕಾಂಗಿಯಲ್ಲ ನೀ
ಉ: ಏಕಾಂಗಿಯಲ್ಲ ನೀ
In reply to ಉ: ಏಕಾಂಗಿಯಲ್ಲ ನೀ by manju787
ಉ: ಏಕಾಂಗಿಯಲ್ಲ ನೀ