ಏಕಾದಶಿಯ ಈ ದಿನ !!!

ಏಕಾದಶಿಯ ಈ ದಿನ !!!

 ಇವತ್ತು ಏಕಾದಶಿ . ಎಂದಿನಂತೆ ಇವತ್ತು ಅಡಿಗೆ ತಾಪತ್ರಯ ಇಲ್ಲ. ಸಂಪದಕ್ಕೆ ಏನಾದ್ರೂ ಬರೆಯೋಣ ಅಂತ 

ಪೇಪರು-ಪೆನ್ನು ಹಿಡ್ಕೊಂಡು ಕುಳಿತೆ. ಆದ್ರೆ  ತಲೆಗೆ ಏನು ಹೊಳಿತಾನೇ ಇಲ್ಲಾ..... ಕೊನೆಗೆ ಈ ಏಕಾದಶಿ 
ಗಡಿಬಿಡಿ ಬಗ್ಗೇನೆ  ಬರದ್ರಾಯ್ತು ಅಂತ ಶುರು ಮಾಡಿದೆ.
 
ಇವತ್ತು ಏಕಾದಶಿ ಅಡಿಗೆ ಗೋಜು ಏನು ಇಲ್ಲಾಂದ್ರೂ ತಿಂಡಿ ಗಡಿಬಿಡಿಗೇನೂ ಕಡಿಮೆ ಇಲ್ಲ. 
ದಿನಾಲೂ ಒಂದೋ ಎರಡೋ ತಿಂಡಿ ಮಾಡಿದ್ರೆ ಇವತ್ತು ೫-೬ ತಿಂಡಿ ಮಾಡ್ಬೇಕು. 
ಬೆಳಬೆಳಿಗ್ಗೆ ಮಗಳಿಗೆ ಅಂತ ಎರಡು ಲಂಚ್  ಬಾಕ್ಸ್ ರೆಡೀ ಮಾಡಿ ಮುಗ್ಸಿದೆ..ಆಮೇಲೆ 
ಪತಿರಾಯರ ಸರದಿ. ಮುಂದೇನೂ ಅಂತ ಯೋಚಿಸಿ ಯೋಚಿಸಿ ಕೊನೆಗೆ ಉಪ್ಪಿಟ್ಟು ಅವಲಕ್ಕಿ 
ಅಂತ ಡಿಸೈಡ್ ಮಾಡಿ ಕೆಲಸ ಶುರು ಮಾಡಿದೆ. ಪತಿರಾಯರ ಡಬ್ಬಕ್ಕೆ ಉಪ್ಪಿಟ್ಟು ಹಾಕಿ ಮನೇಲಿ 
ತಿನ್ಲಿಕ್ಕೆ ಅವಲಕ್ಕಿ ತೋಯಿಸಿ ವಗ್ಗರಣೆ ಹಾಕಿದೆ.ಇನ್ನು ಮಧ್ಯಾಹ್ನ ಮಗಳಿಗೇ( ಪಾಪ ಅದು ಇನ್ನೂ ಚಿಕ್ಕದು )
ಅಂತ ಅನ್ನ-ಸಾರೂನೂ ಮಾಡಿ ಮುಗಿಸಿದೆ.  ಅವಲಕ್ಕಿ+ಸ್ವಲ್ಪ ಉಪ್ಪಿಟ್ಟು ತಿಂದು ಆಫೀಸಿಗೆ ಹೊರಟ
ಪತಿಗೆ  ಟಾಟಾ ಮಾಡಿ ಒಳಗೆ ಬಂದು  ಹಸಿದ ನನ್ನ ಹೊಟ್ಟೆಗೆ ಒಂದಿಷ್ಟು ಉಪ್ಪಿಟ್ಟು-ಅವಲಕ್ಕಿ  ಸೇರಿಸಿಕೊಂಡು ಕುಳಿತೆ.
ಹೊಟ್ಟೆ ತುಂಬಿದ ತಕ್ಷಣ ರಾತ್ರಿಗೆ ತಿಂಡಿ ಏನು? ಅಂತ ಯೋಚ್ನೆ ಶುರು ಆಯ್ತು. ಹೋಗ್ಲಿಬಿಡು ರಾತ್ರಿದು ರಾತ್ರಿಗೆ ಅಂತ
ನನ್ನ ಸಿಸ್ಟಮ್ ಆನ್ ಮಾಡಿದೆ.ಕೊನೆಗೆ ಪೇಪರಿನಲ್ಲಿ ಬರೆದ ಈ ಬರಹವನ್ನ ನಿಧಾನವಾಗಿ ನನ್ನ ಲ್ಯಾಪ್-ಟಾಪಿನಲ್ಲಿ  ಕನ್ನಡದಲ್ಲಿ  
ಬರೆದು ಮುಗಿಸಿ ಇನ್ನೇನು ಸ್ವಲ್ಪ ಮಲಗಿ ಎದ್ದರಾಯಿತು ಅಂದುಕೊಳ್ಳುವಷ್ಟರಲ್ಲಿ  ಮಗಳ ಸ್ಕೂಲ್  ವ್ಯಾನ್ ಬಂದ ಸದ್ದಾಯಿತು.
ನನ್ನ ನಿದ್ದೆಗೆ ಇಲ್ಲಿಯೇ ಪೂರ್ಣವಿರಾಮ ಹಾಕಿ ಮಗಳನ್ನ...ನನ್ನ ಪುಟ್ಟ ಕಂದನನ್ನ ಬರಮಾಡಿಕೊಳ್ಳಲು ಬಾಗಿಲ ಕಡೆಗೆ ಓಡಿದೆ.        
 
(ಅದೇನೇ ಇರಲಿ ಈ ಅಡಿಗೆ-ತಿಂಡಿಗಳ ಗದ್ದಲದ ಮಧ್ಯ ನಾನಂದುಕೊಂಡಂತಹ 
 ಈ ಬ್ಲಾಗ್ ಬರೆಯುವ ಕಾರ್ಯ ಮುಗಿಯಿತಲ್ಲಾ... ಅದೇ ಸಂತಸದ ಸಂಗತಿ.)
 
Rating
No votes yet

Comments