ಏಕೆ೦ದು ಕೇಳದಿರು ಗೆಳತಿ

ಏಕೆ೦ದು ಕೇಳದಿರು ಗೆಳತಿ

 


 


ಕ೦ಡ ಮೊದಲ ನೋಟದಲ್ಲೇ
ಪರಿಚಿತಳಾಗಿಬಿಟ್ಟೆ ನನಗೆ
ಏಕೆ೦ದು ಕೇಳದಿರು ಗೆಳತಿ

ಮಿ೦ಚು ಕ೦ಗಳ ಕೊಳದಲ್ಲೇ
ನಿನ್ನ ಮನದ ಬೆಳಕ ಕ೦ಡೆ
ಏಕೆ೦ದು ಕೇಳದಿರು ಗೆಳತಿ

ನಿನ್ನ ನೆನಪಾಗುಳಿಯುವ
ಆಸೆಯಿಲ್ಲ ಎನಗೆ
ಏಕೆ೦ದು ಕೇಳದಿರು ಗೆಳತಿ

ದೂರವಿದ್ದು ನಿನ್ನ ಕಾವ್ಯ
ಪ್ರತಿಭೆ ಕಾಣಬೇಕೆ೦ಬ ಆಸೆ
ಏಕೆ೦ದು ಕೇಳದಿರು ಗೆಳತಿ

ಹೆಸರೊಳಗೇನಿದೆ ಬಿಡು, ನಿನ್ನ ಮನಕೆ
ನನ್ನ ನೆನಪು,ಸಾ೦ತ್ವನ,ನಗುವನ್ನೀಯುವುದಾದರೆ
ನಾ ಅನಾಮಿಕನಾಗಿರುವೆ ಗೆಳತಿ


 


ಸ೦ಪದಗಿತ್ತಿ ಇ೦ದುಶ್ರೀ ಅವರ ಬ್ಲಾಗ್ ಬರಹ ಮನದ ಮಾತಿಗೆ ಕೊಟ್ಟ ಪ್ರತಿಕ್ರಿಯೆ

Rating
No votes yet

Comments