ಏಕೆ ಹೀಗಾಗುವುದು?
ಇಂದು ಬೆಳಗ್ಗೆ ಎಂದಿನಂತೆ ಇಲ್ಲಿಯ ಆನ್ಲೈನ್ ಪತ್ರಿಕೆಯಾದ ಮಿಡ್ಡೇ ಓದಲು ಹೋದಾಗ ಮೊದಲು ಕಂಡದ್ದೇ ಹೃದಯ ಕಲಕುವಂತಹ ಸುದ್ದಿ. ಅದೇನೆಂದರೆ ಮೊನ್ನೆ ವಿಪರೀತ ಮಳೆಯಾಗುತ್ತಿದ್ದು ಜನರೆಲ್ಲರಲ್ಲೂ ಜುಲೈ ೨೬ರ ಕಹಿ ನೆನಪಾಗಿ ದಾದರ ಸ್ಟೇಷನ್ನಿನಲ್ಲಿ ಲೋಕಲ್ ಟ್ರೈನ್ ಹತ್ತಲು ವಿಪರೀತ ಜನಸಂದಣಿ. ರೈಲ್ವೇ ಹಳಿಗಳ ಮೇಲೆ ನೀರು ನಿಂತು ಟ್ರೈನ್ ಸಂಚಾರ ಬಹಳ ಕಡಿಮೆಯಾಗಿದ್ದಿತ್ತು. ಜನರೆಲ್ಲರಿಗೂ ಎದುರಿಗೆ ಆಗೊಮ್ಮೆ ಈಗೊಮ್ಮೆ ಬರುವ ಲೋಕಲ್ ಟ್ರೈನ್ ಬಿಟ್ಟು ಬೇರೇನೂ ಕಾಣುತ್ತಿರಲಿಲ್ಲ. ಗಾಡಿ ಬಂದಾಗ ಹತ್ತಲು ಹೋಗಿ ಪ್ಲಾಟ್ಫಾರ್ಮ್ ಮೇಲೆ ಯಾರಾದರೂ ಬಿದ್ದರೆ, ಅವರನ್ನು ಎತ್ತುವ ವ್ಯವಧಾನವಿರದೇ, ಅದರ ಬದಲು ಅವರನ್ನು ತುಳಿದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದಿತು. ಹೀಗೆ ಹತ್ತಲು ಹೋದ ಎರಡೂವರೆ ತಿಂಗಳ ಗರ್ಭಿಣಿ ಹೆಂಗಸಿನ ಪರಿಸ್ಥಿತಿ ನೋಡಿ, ನನ್ನ ತಲೆ ತಿರುಗಿತು. ಛೇ!ಇಂತಹ ನಿಷ್ಕರುಣಿ ಜನಗಳೂ ಇರುತ್ತಾರೆಯೇ.
ಸ್ವಲ್ಪ ಹೊತ್ತಾದ ಮೇಲೆ ಅಂತಹದೇ ಇನ್ನೊಂದು ಸುದ್ದಿ ಕಣ್ಣಿಗೆ ಬಿದ್ದಿತು.
ಛೇ ಇದೇಕೆ ಹೀಗಾಗ್ತಿದೆ.
Rating