ಏಕೆ ಹೀಗೆ?
ಏಕೆ ಹೀಗೆ?
========
ಇರುವ ಮೂರು ಬಣ್ಣವ ಅತ್ತಿತ್ತ ಕಲಸಿದರೆ ನಭದಲ್ಲಿ ಕಾಮನಬಿಲ್ಲು ಮೂಡುತ್ತದೆ
ಸಪ್ತಸ್ವರವ ಹಾಗೆ ಹೀಗೆ ಬೆರೆಸಿ ಹಾಡಿದರೆ ಸುಮಧುರ ಸಂಗೀತ ಕೇಳುತ್ತದೆ
ಒಂದಿಷ್ಟು ಸ್ವರ ವ್ಯಂಜನಗಳನ್ನು ಅತ್ತಿತ್ತ ಜೋಡಿಸಿದರೆ ಸಾಹಿತ್ಯ ಗಂಗೆ ಹರಿಯುತ್ತದೆ
ನೂರು ಮಿಕ್ಕಿದ ಕೋಟಿ ಜನಗಳನ್ನು ಹೇಗೆ ಹೇಗೆ ಜೋಡಿಸಿದರು ಅದೇಕೊ
ವಿವಾದ ಘರ್ಷಣೆ ಜಾತಿ ಹಣ ಇತ್ಯಾದಿ ಭೇದಭಾವಗಳು ರಾಗದ್ವೇಷಗಳೆ ಹುಟ್ಟುತ್ತವೆ
ತನ್ನ ಪ್ರಯತ್ನದಲ್ಲಿ ಸೋತ ಸೃಷ್ಟಿಸಿದಾತನ ನಿಟ್ಟುಸಿರೆ ಉಳಿಯುತ್ತದೆ
Rating
Comments
ಉತ್ತಮ ಚಿತ್ರಕಾರ ಅತ್ತಿತ್ತ
ಉತ್ತಮ ಚಿತ್ರಕಾರ ಅತ್ತಿತ್ತ ಕಲಸಿದರೆ ಕಾಮನ ಬಿಲ್ಲು ಮೂಡುವುದು.
"ಸುಮಧುರ ಸಂಗೀತ" ಉತ್ತಮ ಸಂಗೀತಗಾರನಿಂದ ಸಾಧ್ಯ.
ಸ್ವರ ವ್ಯಂಜನಗಳನ್ನು ಅತ್ತಿತ್ತ ಜೋಡಿಸಿದರೆ-
ನಿಮ್ಮಂತಹ ಬರಹಗಾರರಿಂದ ಮಾತ್ರ ಸಾಹಿತ್ಯಗಂಗೆ ಹರಿಯುವುದು.
ಉತ್ತಮ ನಾಯಕನಿಂದ ಮಾತ್ರ ಜನಗಳ ನಡುವೆ ಸಾಮರಸ್ಯ ತರಲು ಸಾಧ್ಯ.
ಸೋತದ್ದು ನಾವು - ಭಗವಂತನಲ್ಲ.