ಏನಾದರೂ ಅವರವರ ಚಿತ್ತದಂತೆ ಅವರವರ ಬದುಕಲ್ಲವೇ

ಏನಾದರೂ ಅವರವರ ಚಿತ್ತದಂತೆ ಅವರವರ ಬದುಕಲ್ಲವೇ

ಅವರವರ ಕರ್ಮದಂತೆ ಅವರವರ ಜೀವನಕ್ರಮ ಎಂಬುದು ನಿಜವೇ ಆದರೂ ಕೆಲವೊಮ್ಮೆ ಕೆಲವರ ಸ್ಥಿತಿ ನೋಡುವಾಗ ಅಯ್ಯೋ ಈ ತರಹದ್ದೂ ಒಂದು ಬದುಕು ಇರುತ್ತದಾ ಎಂದು ಖೇದವಾದರೆ, ಇನ್ನೂ ಕೆಲವರ ಬದುಕು ಕಂಡಾಗ ಹೀಗೂ ಬದುಕುತ್ತಾರ ಎಂದು ಅಸಹ್ಯ ಪಡುವುದು ಕೂಡಾ ಇದೆ. ಒಂದು ರೀತಿಯಲ್ಲಿ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭಿಕ್ಷುಕರೇ ಸರಿ, ಆದರೂ ಭಿಕ್ಷುಕರನ್ನು ಕಂಡಾಗ ಅಸಹ್ಯ ಪಟ್ಟುಕೊಳ್ಳುವುದನ್ನು ಮಾತ್ರ ಬಿಡುವುದಿಲ್ಲ.
ಇದು ಸುಮಾರು 4 ವರ್ಷಗಳ ಹಿಂದಿನ ಕಥೆ. ಕೆಲಸ ನಿಮಿತ್ತ ದಾವಣಗೆರೆ ಹೋಗಿದ್ದೆ ಉಡುಪಿಗೆ ಹಿಂದಿರುಗುವಾಗ ಬಸ್ಸಿನಲ್ಲಿ ಸುಮಾರು ನಲವತ್ತರ ಪ್ರಾಯದ ಹೆಂಗಸು ನನ್ನ ಬದಿಯ ಸೀಟಿನಲ್ಲಿ ಕುಳಿತಿದ್ದರು ನೋಡಲು ಶ್ರೀಮಂತರಂತೆ ಕಾಣುತ್ತಿದ್ದಳು. ಹೊನ್ನಾಳಿ ಬಂದಾಗ ಬಸ್ ನಿಲ್ಲಿಸಿದರೆಂದು ಅದೇನೋ ತಿಂಡಿ-ತಿನಿಸನ್ನು ತರಲೆಂದು ಬಸ್ಸಿನಿಂದಿಳಿದ ಮಹಿಳೆ ತಿರುಗಿ ಬಂದು ಬಸ್ಸು ಹೊರಟ ಸ್ವಲ್ಪವೇ ಸಮಯಕ್ಕೆ ಅಳತೊಡಗಿದಳು. ನನಗೋ ದಿಗಿಲಾಯಿತು. "ಏನಾಯ್ತಮ್ಮಾ ಯಾಕೀ ಅಳು" ಎಂದು ಕೇಳಿದೆ. ಅವರು ಹೇಳತೊಡಗಿದರು "ನಾನು ತುಂಬಾ ಮರ್ಯಾದಸ್ಥ ಕುಟುಂಬದಿಂದ ಬಂದವಳಪ್ಪಾ, ನನ್ನ ಇಬ್ಬರು ಮಕ್ಕಳು ಬೆಂಗಳೂರಲ್ಲಿ ಇಂಜಿನಿಯರ್ಸ್, ಮನೇಲೂ ಬೇಕಾದಂಗಿದೆ" ಈ ಪೀಠಿಕೆ ಯಾಕಪ್ಪಾ ಇದಕ್ಕೂ ಈಕೆಯ ಅಳುವಿಗೂ ಏನು ಸಂಬಂಧ, ನಾನು ಯೋಚಿಸುತ್ತಿರುವಾಗ ಮುಂದುವರೆಸಿದಳು...

ನಾಗರಪಂಚಮಿಯ ಸಂಭ್ರಮ.ನನ್ನ ಸ್ನೇಹಿತನ ಕುಟುಂಬದವರೊಡನೆ ನಾಗಮೂಲಸ್ಥಾನಕ್ಕೆ ಪೂಜೆ ಮಾಡಿಸಲು ಹೊರಟಿದ್ದೆ. ಉಡುಪಿಯ ಸಮೀಪ ಸಂತೆಕಟ್ಟೆಯಲ್ಲಿ ನನ್ನ ಸ್ನೇಹಿತ ಹಣ್ಣುಕಾಯಿ ತರಲೆಂದು ಕಾರು ನಿಲ್ಲಿಸಿದ್ದೆ, ಅಷ್ಟರಲ್ಲಿ ಕಾರಿನ ಬದಿಗೊಬ್ಬ ಯುವಕ ಬಂದು ನಿಂತ. ಏನೆಂದು ಕೇಳಿದೆ ಆತನ ಮುಖ ನೋಡಿದರೆ ಹತಾಶನಾಗಿದ್ದವನಂತೆ ಕಂಡ. ಊಟ ಮಾಡಿ ಅದೆಷ್ಟು ದಿನವಾಗಿತ್ತೋ ಪಾಪ. ಅವನೆಂದ "ಅಣ್ಣಾ ನನಗೆ ಹಣ ಬೇಡ. ಒಂದು ಹೊತ್ತಿನ ಊಟ ಕೊಡಿಸಣ್ಣ, ಹಣ ಕೇಳಿದರೆ ಕುಡಿತಕ್ಕೋ ಅಥವಾ ಇನ್ನೇತಕ್ಕೋ ಭಿಕ್ಷೆ ಬೇಡುತ್ತಾನೆ ಎಂದು ಹೀಯಾಳಿಸುತ್ತಾರೆ ವಿನಃ ಹಣ ಕೊಡುವುದಿಲ್ಲ. ನಾನು ದಾವಣಗೆರೆಯಿಂದ ಮಂಗಳೂರಿಗೆ ಲಾರಿಯಲ್ಲಿ ಕ್ಲೀನರ್ ಆಗಿ ಬಂದವನು. ಆದರೆ ಡ್ರೈವರ್'ಗೂ ನನಗೂ ಜಗಳವಾಯ್ತೆಂದು ನನಗೆ ಗೊತ್ತಿಲ್ಲದೇ ಆತ ಮಂಗಳೂರಲ್ಲಿ ನನ್ನನ್ನು ಬಿಟ್ಟು ಹೊರಟ. ನನಗೋ ದಿಕ್ಕೇ ತೋಚುತ್ತಿಲ್ಲಣ್ಣ, ಸ್ವಲ್ಪ ಕೂಡಾ ಹಣವಿಲ್ಲ ಯಾರಿಗಾದ್ರೂ ಫೋನ್ ಮಾಡೋಣ ಅಂದ್ರೆ ಮೊಬೈಲ್ ಇಲ್ಲ, ನಂಬರ್ ಕೂಡಾ ಇಲ್ಲ. ಪೊಲೀಸ್ ಠಾಣೆಗೆ ಹೋದೆ, ವಿಷಯ ಹೇಳುವ ಮೊದಲೇ ನನ್ನ ಪರಿಸ್ಥಿತಿ (ಬಟ್ಟೆಯೆಲ್ಲ ತುಂಬಾ ಕೊಳಕಾಗಿತ್ತು) ನೋಡಿದ ಅವರು ಒದ್ದು ಒಳಗೆ ಹಾಕ್ಬೇಕಾ ಕೇಳಿದರು. ಏನೂ ಮಾಡಲು ತೋಚದೆ ಮಂಗಳೂರಿಂದ ನಡೆದುಕೊಂಡೆ ಹೊರಟೆ ಇನ್ನು ನನ್ನಿಂದ ಆಗುವುದಿಲ್ಲಣ್ಣ ನನಗೆ ಊಟ ಬೇಕು"

ಅಬ್ಬಾ ಜೀವನ ಇಷ್ಟೊಂದು ಕಠಿಣ. ಆತನನ್ನು ನೋಡಿಯೇ ಕರುಳು ಚುರ್ರೆಂದಿತು. ತಕ್ಷಣಕ್ಕೆ ಆತನಿಗೆ ರೂ. ೧೦೦ ಕೊಟ್ಟು ಊಟ ಮಾಡಲು ತಿಳಿಸಿದೆ. ನಂತರ ಪೂಜೆ ಮುಗಿಸಿ ಸಂಜೆ ಬರ್ತೇನಿ ಅಲ್ಲಿಯವರೆಗೂ ಉಡುಪಿಯಲ್ಲೇ ಎಲ್ಲಾದರು ಇದ್ದು ಸಂಜೆ ೬ ಗಂಟೆಗೆ ನನಗೆ ಕರೆ ಮಾಡೆಂದು ನನ್ನ ಮೊಬೈಲ್ ನಂಬರ್ ಕೊಟ್ಟೆ.

ಬಸ್ ಚಾರ್ಜ್ ಕೊಟ್ಟೇ ಕಳುಹಿಸಬಹುದಿತ್ತು, ಆದರೆ ಆತನ ಕಥೆ ನಿಜವೋ ಸುಳ್ಳೊ ತಿಳಿಯಲು ಹೀಗೆ ಮಾಡಿದೆ. ಆದರೆ ಆತನ ದುರಾದೃಷ್ಟವೋ ನನ್ನ ಬೇಜವಾಬ್ದಾರಿತನದ ಪರಮಾವಧಿಯೋ ಮೂಲಸ್ಥಾನದಲ್ಲಿ ಪೂಜೆ ಮುಗಿಸಿ ಅಲ್ಲಿಂದ ನೇರ ನನ್ನೂರು ಆಜ್ರಿಗೆ ಹೋದ ನಾನು ಆತನನ್ನು ಮರೆತೇ ಬಿಟ್ಟೆ. ಅದು ಹಳ್ಳಿಯಾದ್ದರಿಂದ ನನ್ನ ಮೊಬೈಲ್ ನೆಟ್ ವರ್ಕ್ ಸಿಗುತ್ತಿರಲಿಲ್ಲ. ಪಾಪ ಅವನದೆಷ್ಟು ಸಲ ಕರೆ ಮಾಡಿದ್ದನೋ ಏನೋ ಮರುದಿನ ಉಡುಪಿಗೆ ಬಂದ ಮೇಲೆ ಮತ್ತೆ ಕರೆ ಬಂತು. ನನ್ನ ಬಗ್ಗೆ ನನಗೇ ಬೇಸರವೆನಿಸಿತು. ನಮ್ಮ ಉಡುಪಿ ದಕ್ಷಿಣ ಕನ್ನಡದಲ್ಲಿ ದೇವಾಲಯಗಳಿರುವುದರಿಂದ ಎರಡು ಹೊತ್ತಿನ ಊಟಕ್ಕೇನೂ ತೊಂದರೆ ಇಲ್ಲ. ಕೃಷ್ಣ ಮಠದಲ್ಲಿ ಊಟ ಮಾಡಿ ಬಸ್ ಸ್ಟಾಂಡ್'ನಲ್ಲಿ ಮಲಗಿ ಒಂದು ದಿನ ಕಳೆದಿದ್ದ. ಹಿಂದಿನ ದಿನ ಸುಮಾರು ೬೦ ಕಿ.ಮೀ. ನಡೆದು ಬಂದಿದ್ದ ಆತನ ಸುಸ್ತು ಸ್ವಲ್ಪ ಕಡಿಮೆಯಾದಂತೆ ಕಂಡಿತ್ತು. ನನ್ನನ್ನು ನೋಡಿದೊಡನೆಯೇ ಪರಿಚಯದ ನಗೆಯಾಡಿದ. ಆತನ ಮೊಗದಲ್ಲೇನೋ ಆತ್ಮೀಯತೆ ಎದ್ದು ಕಾಣುತ್ತಿತ್ತು. ಅಂತೂ ದಾವಣಗೆರೆಗೆ ಹೋಗುವ ಬಸ್ಸಿನಲ್ಲಿ ಟಿಕೇಟ್ ಮಾಡಿಸಿ ಬಿಟ್ಟೆ. ಮರುದಿನವೇ ಕರೆ ಮಾಡಿ ತಿಳಿಸಿದ "ಅಣ್ಣಾ ನಿಮ್ಮ ದಯೆಯಿಂದ ಮನೆಗೆ ಬಂದೆ. ಇಲ್ಲಿಯೇ ಕೂಲಿ ಮಾಡಿಯಾದ್ರೂ ಇರ್ತೇನೆ ಬೇರೆಲ್ಲೂ ಹೋಗೋದಿಲ್ಲ ನಿಮ್ಮ ಸಹಾಯ ಈ ಜನ್ಮದಲ್ಲಿ ಮರೆಯಲಾರೆ."

ಎರಡೂ ಸನ್ನಿವೇಶ ನೋಡಿದರೆ ಇಬ್ಬರೂ ದಾವಣಗೆರೆಯವರು. ಒಬ್ಬರು ದುಡ್ಡಿದ್ದಂತೆ ಕಂಡವರು, ಇನ್ನೊಬ್ಬ ಬೀದಿ ಭಿಕಾರಿಯಂತೆ ಕಂಡವನು. ಆದರೆ ಉಪಕಾರ ಸ್ಮರಣೆಯನ್ನು ನಾ ಕಂಡದ್ದು ಮಾತ್ರ ಆ ಭಿಕಾರಿಯಲ್ಲಿಯೇ.

ಏನಾದರೂ ಅವರವರ ಚಿತ್ತದಂತೆ ಅವರವರ ಬದುಕಲ್ಲವೇ.
ರೂಪ ಆಡಂಬರ ಧರಿಸಿದ ವಸ್ತ್ರದಿಂದ ವ್ಯಕ್ತಿಯೊಬ್ಬನನ್ನು ಅಳೆಯದೆ ಆತನ ವ್ಯಕ್ತಿತ್ವವನ್ನು ಕಂಡು ಗೌರವಿಸಬೇಕಷ್ಟೆ.f!D_v@lue=96952,blog,field_blogimage

Rating
Average: 5 (1 vote)

Comments

Submitted by shreekant.mishrikoti Sat, 08/10/2019 - 16:26

ಭಿಕಾರಿಯ ಸಂಗತಿ ಮತ್ತು ಆತನ ಉಪಕಾರ ಸ್ಮರಣೆ
ತಿಳಿಯಿತು . ಆದರೆ ಇನ್ನೊಬ್ಬ ದುಡ್ಡಿದ್ದ ಮಹಿಳೆ ಅತ್ತದ್ದು ಏಕೆ ತಿಳಿಯಲಿಲ್ಲ. ಆಕೆಯ ಸಂಗತಿಯನ್ನು ತಿಳಿಸದೆಯೇ ಉಪಕಾರ ಸ್ಮರಣೆ ಆಕೆಯಲ್ಲಿಲ್ಲ ಎಂದಿರಿ !?

Submitted by smurthygr Sat, 08/10/2019 - 17:02

ಓದಿಸಿಕೊಂಡು ಹೋದರೂ, ಕತೆ ಅಪೂರ್ಣವಾಗಿರುವಂತಿದೆ. ಸರಿಯಾಗಿ ಅರ್ಥವಾಗಲಿಲ್ಲ. ದುಡ್ಡು ಕೊಟ್ಟವರು ಹೆಂಗಸಾದರೆ, 'ಅಣ್ಣಾ .. ' ಎಂದು ಯಾಕೆ ಕರೆಮಾಡುತ್ತಾನೆ?

Submitted by shreekant.mishrikoti Mon, 08/12/2019 - 13:53

In reply to by ಮೌನಸಾಹಿತಿ

ಪರವಾಗಿಲ್ಲ , ಮೌನ ಸಾಹಿತಿಗಳೇ ತಿದ್ದಿದ ಆವೃತ್ತಿಯನ್ನು ಪ್ರತಿಕ್ರಿಯೆ ಆಗಿ ಹಾಕಿ ಬಿಡಿ. ನಾವು ಓದುತ್ತೇವೆ

Submitted by ಮೌನಸಾಹಿತಿ Wed, 08/21/2019 - 10:17

In reply to by shreekant.mishrikoti

ತಿದ್ದಿದ ಆವೃತ್ತಿ
"ಇಲೇ ಶಿವಮೊಗದಲ್ಲಿ ಸ್ನೇಹಿತೆಯ ಮಗನ ಮದುವೆಗೆ ಹೊರಟಿದ್ದ. ಈಗ ಬಸ್ಸಿಳಿದು ಬಾಳಹಣ್ಣು
ಖರೀದಿಸುವಷ್ಟರಲ್ಲಿ ಯಾವನೋ ಕಳ್ಳ ನನ್ನ ಪರ್ಸ್ ಎಗರಿಸಿದ್ದಾನೆ. ನಾನೇನು ಮಾಡಲೀ, ಮದುವೆಯಲ್ಲಿ ಉಡುಗೊರೆ ಏನು ಕೊಡಲಿ ಮನೆಗೆ ಹೇಗೆ ಹೋಗಲೀ?" ಅಳು ಮುಂದುವರೆಯಿತು. ನಾನಂದೆ, "ಅಳಬೇಡಿಮ್ಮ ಹೇಗೂ ನಿಮ್ಮ ಗೆಳತಿಯ ಹತ್ತಿರ ತಾನೇ ಹೋಗೋದು ಅವರಲ್ಲಿ ಕೇಳಿದರಾಯು" ಆಗಂತೂ ಆ ಹೆಂಗಸಿನ ಅಳು ಜೋರಾಯ್ತು "ನನಗೋ ನನ್ನ ಗೆಳತಿ ಬಿಟ್ಟರೆ ಬೇರಾರನ್ನು ಪರಿಚಯವೂ ಇಲ್ಲ ಅಲ್ಲಿ, ಅವಳು ಮಗನ ಮದುವೆಯ ಸಂಭ್ರಮದಲ್ಲಿ ಇರುವಾಗ ನಾನೇಗೆ ಅವಳಲ್ಲಿ ಹಣ ಕೇಳೋದು? ನನಗದು ಸರಿಕಾಣುವುದಿಲ್ಲವೆಂದು ಹ್ಮ್ ಬಹಳಷ್ಟು ಯೋಚಿಸಿದ ನಂತರ ಆಕೆಯ ಕಣ್ಣೀರಿಗೊಂದು ಪೂರ್ಣವಿರಾಮ ವಿಡುವಂತೆ ರೂ.೧000 ತೆಗೆದು ಆಕೆಯ ಕೈಗಿತ್ತೆ.
“ದೇವರು ನಿನ್ನನ್ನು ಚೆನ್ನಾಗಿಟ್ಟಿರ್ಲಪ್ಪ ನಿನ್ನ ವಿಳಾಸ ಕೊಡು ಊರಿಗೆ ಹೋದ ತಕ್ಷಣ ನಿನ್ನ ಹಣ ನಿನಗೆ ಕಳುಹಿಸೇವೆ, ನಿನ್ನ ಮೊಬೈಲ್ ಸಂಖ್ಯೆ ಕೊಡು" ಎಂದೆಲ್ಲಾ ಕೇಳಿದ ಆಕೆಗೆ ವಿಳಾಸ ಕೊಡದಿದ್ದರೂ ಆಕೆಯ ಮೊಬೈಲ್ ನಲ್ಲಿ ನನ್ನ ನಂಬರ್ ಸೇವ್ ಮಾಡಿ ಸುರಕ್ಷಿತವಾಗಿ ತಲುಪಿದ ಮೇಲೆ ಕರೆಮಾಡಿ ತಿಳಿಸಿ ಎಂದಷ್ಟೇ
ಹೇಳಿ ಸುಮ್ಮನಾದೆ,
ಪಾಪ! ಆ ಹೆಂಗಸಿನೂ ಮನೆತಲುಪಲೇ ಇಲ್ಲವೇನೋ! ಇದಾಗಿ 4 ವರ್ಷಗಳಾದರೂ ಇನ್ನೂ ನನಗೊಂದು
ಕರೆಯೂ ಇಲ, ಕೊಟ್ಟ ಹಣವೂ ಇಲ್ಲ, ಈಗ್ಯಾಕೆ ಆ ವಿಚಾರ ಎಂಬ ಕುತೂಹಲವೂ ಇಂತಹದ್ದೇ ಇನ್ನೊಂದು
ಘಟನೆ ಇತ್ತೀಚೆಗೆ ನಡೆದದ್ದು ಕೇಳಿ,