ಏನಿಡಲಿ ಹೆಸರಾ?

ಏನಿಡಲಿ ಹೆಸರಾ?

ನೆನ್ನೆ ಭವಾನಿ ಕಂಗನ್(ಜಯನಗರ)ಕ್ಕೆ ಹೋಗಿದ್ದೆ.
ಅಬ್ಬ ತುಂಬಾ ರಷ್ ಇತ್ತು.
ಅಲ್ಲಿಗೆ ಒಂದು ಹುಡುಗಿ ಬಂದಳು . ನೋಡಿದೊಡನೆ ಮುಸ್ಲಿಮ್ ಎಂದು ತಿಳಿಯುತ್ತಿತ್ತು.
ಆಕೆ ಒಂದು ಸೀರೆ ಬಾಕ್ಸ್ ತಂದಿದ್ದಳು . ಮೂರು ಸೀರೆ ಇತ್ತು .
ನಾನು ನೆನ್ನೆ ಹೇಗಾದರೂ ಮಾಡಿ ಒಂದಷ್ಟು ಒಳ್ಳೆಯ ಜ್ಯುವೆಲ್ಲರಿ ತೆಗೆದುಕೊಳ್ಳಲೇಬೇಕು ಎಂದು ಪಣ ತೊಟ್ಟಿದ್ದೆನ್ನಾದ್ದರಿಂದ ಒಂದರ ಮೇಲೊಂದು ನೆಕ್ಲೇಸ್‌ನ ನೋಡುತ್ತಲೇ ಇದ್ದೆ.
ಪಾಪ ಆಕೆಗೂ ಬೇಕಿತ್ತೇನೋ ನಾನು ಸರಿಯುವದನ್ನೇ ಕಾಯುತ್ತಿದ್ದಳು .
ನಾನು ಹಾಗೆಲ್ಲಾ ಸುಲಭವಾಗಿ ಆಯ್ಕೆ ಮಾಡುವುದಿಲ್ಲ. ಕೊನೆಗೆ ನನ್ನ ಆಯ್ಕೆ ಮುಗಿದು ಅವಳಿಗೆ ದಾರಿ ಮಾಡಿಕೊಟ್ಟು ಬರುತ್ತಿದ್ದಂತೆ
ಆಕೆ ನನ್ನನ್ನ ಅವಳ ಸೀರೆಗೆ ಸರಿ ಹೋಗುವಂತಹ ನೆಕ್ಲೇಸ್ ಆರಿಸಲು ಹೇಳಿದಳು. ಅವಳ ಸೀರೆಗೆ ಒಪ್ಪುವಂತಹದನ್ನ ಸೆಲೆಕ್ಟ್ ಮಾಡಿಕೊಟ್ಟೆ
ನಂತರ ಅವಳು ನಮ್ಮ ಮದುವೆಗಳಲ್ಲಿ ಮದುವೆ ಹೆಣ್ನು ಯಾವ ರೀತಿಯ ಉಡುಗೆ ಹಾಗು ಒಡವೆ ತೊಡುತ್ತಾರೆಂದು ಕೇಳಿದಳು.

ಸರಿ ಅವಳಿಗೆ ನಮ್ಮಲ್ಲಿ ಮದುಮಗಳು ಹಾಕಿಕೊಳ್ಳುವ ಒಡವೆಗಳು ಬಿಂದಿಗಳು ಎಲ್ಲವನ್ನೂ ಹೇಳಿದೆ
ಆದರೂ ನನಗೆ ಕುತೂಹಲ
ನನ್ನ ಅನಿಸಿಕೆ ಸರಿ ಇದ್ದರೆ ಆಕೆ ಮುಸ್ಲಿ ಅವಳಿಗೆ ಯಾಕೆ ಹೀಗೆ ಹಿಂದೂ ವಧುವಿನ ಅಲಂಕಾರ ಎಂದು ಕೇಳಿಯೇಬಿಟ್ಟೆ . ಮೊದಲೇ ಒಡಕು ಬಾಯಿ ನನ್ನದು
ಆಕೆ ಕಣ್ಮಲ್ಲಿ ನೀರು ತುಂಬಿತು
ಅವಳು ಯಾವುದೋ ಪ್ರೈವೇಟ್ ಕಂಪೆನಿಯಲ್ಲಿ ಕೆಲಸ ಮಾಡುತಿದ್ದಾಳೆ . ಅಲ್ಲಿಯ ಒಬ್ಬ ಹಿಂದು ಯುವಕನನ್ನ ಪ್ರೀತಿಸಿ ಅದು ಮದುವೆಯವರೆಗೂ ಬಂದು ನಿಂತಿದೆ.
ಇಬ್ಬರ ಮನೆಗಳಲ್ಲಿಯೂ ಈ ಮದುವೆಗೆ ಒಪ್ಪಿಗೆ ಇಲ್ಲ.
ರಿಜಿಸ್ಟರ್ ಮದುವೆ ಮಾಡಿಕೊಳ್ಳುವ ಆಲೋಚನೆ ಇದೆ
ಆದರೆ ಇವಳಿಗೆ ಶಾಸ್ತೋಕ್ತವಾಗಿ ಹಿಂದೂಗಳ ಮದುವೆ ಹೇಗೆ ನಡೆಯುತ್ತೋ ಹಾಗೆ ಆಗುವ ಆಸೆ ಇದೆ. ಆದರೆ ಇವರಿಗೆ ಹಾಗೆ ಮದುವೆ ಮಾಡಿಸಲು ಯಾರೂ ಮುಂದೆ ಬಂದಿಲ್ಲ. ಅಷ್ಟೆಕೆ ಅವಳ ಪ್ರಿಯಕರನಿಗೂ ಹಾಗೆ ಅಬ್ಬರವಾಗಿ ಆಗುವ ಬಯಕೆ ಇಲ್ಲ.
ಕೊನೆಗೆ ರಿಜಿಸ್ಟರ್ ಮದುವೆಯ ದಿನವಾದರೂ ಹಿಂದೂ ಹೆಣ್ನಿನಂತೆ ಅಲಂಕರಿಸಿಕೊಂಡು, ತಾಳಿ ಕಟ್ಟಿಸಿಕೊಳ್ಳುವ ಆಸೆಯಿಂದ ಆಕೆ ಒಬ್ಬಳೆ ಖರೀದಿಗೆ ಬಂದಿದ್ದಳು.
ಮುಂದೆ ಹೇಗೆ ಇರ್ತೀರಾ ಎಂದು ಕೇಳಿದೆ
ಅವಳಿಗೆ ಅವಳ ಗಂಡಾನಾಗುವವನ ಧರ್ಮವೇ ದೊಡ್ಡದಂತೆ. ಅವನನ್ನೇ ಅನುಸರಿಸಿ ಕೆಲವು ತಿಂಗಳಲ್ಲಿ ಎಲ್ಲ ಕಲಿತುಕೊಳ್ಳುತ್ತಾಳೆಂದು ಹೇಳಿದಳು.
ಮುಂದೆ ಹಿಂದೂವಾಗಿಯೇ ಜೀವಿಸುವುದಾಗಿ ಹೇಳಿದಳು .

ಅಕ್ಕ ಎಂದು ಬಾಯಿ ತುಂಬಾ ಮಾತಾಡಿದಳು.
ಅವಳಿಗೆ ಪರ್ಚೇಸ್ ಮಾಡಲು ಸಹಾಯ ಮಾಡಿ ಶುಭ ಹಾರೈಸಿದೆ
ಮದುವೆಯ ದಿನ ಬನ್ನಿ ಎಂದಳು . ಆಯ್ತು ಬರ್ತೀನಿ ಎಂದು ಹೇಳಿ ಬಾಯ್ ಮಾಡಿ ಬಂದೆ.
ಕಣ್ಣು ತೇವವಾಯ್ತು ಯಾಕೆ ಎಂದು ತಿಳಿಯಲಿಲ್ಲ

Rating
No votes yet

Comments